ಡಾರ್ಲಿಂಗ್​ ಕೃಷ್ಣಗೆ ನಾಯಕಿ ಆದ ಮೇಘಾ ಶೆಟ್ಟಿ; ಟೈಟಲ್​ ಲಾಂಚ್​ ಮಾಡಲಿದ್ದಾರೆ ರವಿ ಚನ್ನಣ್ಣನವರ್

| Updated By: ರಾಜೇಶ್ ದುಗ್ಗುಮನೆ

Updated on: Sep 25, 2021 | 1:51 PM

‘ಜೊತೆ ಜೊತೆಯಲಿ’ ಧಾರಾವಾಹಿ ಮೇಘಾ ಶೆಟ್ಟಿ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್​ ನೀಡಿದೆ. ಅವರು ಈಗ ಹಿರಿತೆರೆಯಲ್ಲೂ ಮಿಂಚೋಕೆ ರೆಡಿ ಆಗಿದ್ದಾರೆ.

ಡಾರ್ಲಿಂಗ್​ ಕೃಷ್ಣಗೆ ನಾಯಕಿ ಆದ ಮೇಘಾ ಶೆಟ್ಟಿ; ಟೈಟಲ್​ ಲಾಂಚ್​ ಮಾಡಲಿದ್ದಾರೆ ರವಿ ಚನ್ನಣ್ಣನವರ್
ಮೇಘಾ ಶೆಟ್ಟಿ-ಡಾರ್ಲಿಂಗ್​ ಕೃಷ್ಣ- ರವಿ ಚನ್ನಣ್ಣನವರ್
Follow us on

‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಇತ್ತೀಚೆಗಷ್ಟೇ ‘ತ್ರಿಬಲ್​ ರೈಡಿಂಗ್​’ ಶೂಟಿಂಗ್​ ಪೂರ್ಣಗೊಳಿಸಿದ್ದರು. ಈ ವೇಳೆ ಮಾತನಾಡುವಾಗ ಹೊಸ ಸಿನಿಮಾ ಬಗ್ಗೆ ಶೀಘ್ರವೇ ಅಪ್​ಡೇಟ್​ ನೀಡುತ್ತೇನೆ ಎಂದಿದ್ದರು. ಅಂತೆಯೇ ಅವರು, ಅವರ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಡಾರ್ಲಿಂಗ್​ ಕೃಷ್ಣ ಜತೆಗೆ ಮೇಘಾ ಶೆಟ್ಟಿ ತೆರೆ ಹಂಚಿಕೊಳ್ಳಲಿದ್ದಾರೆ. ಸೆಪ್ಟೆಂಬರ್​  27ರಂದು ಸಿನಿಮಾದ ಟೈಟಲ್​ ಲಾಂಚ್​ ಆಗಲಿದೆ.

‘ಜೊತೆ ಜೊತೆಯಲಿ’ ಧಾರಾವಾಹಿ ಮೇಘಾ ಶೆಟ್ಟಿ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್​ ನೀಡಿದೆ. ಅವರು ಈಗ ಹಿರಿತೆರೆಯಲ್ಲೂ ಮಿಂಚೋಕೆ ರೆಡಿ ಆಗಿದ್ದಾರೆ. ‘ತ್ರಿಬಲ್​ ರೈಡಿಂಗ್​’ ಸಿನಿಮಾ ಶೂಟಿಂಗ್​ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರವೇ ತೆರೆಗೆ ಬರುವ ನಿರೀಕ್ಷೆ ಇದೆ. ಹೀಗಿರುವಾಗಲೇ ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

‘ಲವ್​ ಮಾಕ್ಟೇಲ್​’ ಸಿನಿಮಾ ನಿರ್ದೇಶಿಸಿ, ನಟಿಸಿದ್ದ ಡಾರ್ಲಿಂಗ್​ ಕೃಷ್ಣ ಸ್ಯಾಂಡಲ್​ವುಡ್​ನ ಬೇಡಿಕೆಯ ನಟರಲ್ಲಿ ಒಬ್ಬರು. ಅವರು ಈಗ ಸಾಲುಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಮೇಘಾ ಶೆಟ್ಟಿ ಹಾಗೂ ನಿಶ್ವಿಕಾ ನಾಯ್ಡು ನಾಯಕಿಯರು. ಸೆಪ್ಟೆಂಬರ್​ 27ರಂದು ದಕ್ಷ ಪೊಲೀಸ್​​ ಅಧಿಕಾರಿ ರವಿ ಡಿ. ಚೆನ್ನಣ್ಣನವರ್​ ಟೈಟಲ್​ ಲಾಂಚ್ ಮಾಡಲಿದ್ದಾರೆ. ಪೊಲೀಸ್​ ಅಧಿಕಾರಿ ಕೈಯಲ್ಲಿ ಟೈಟಲ್​ ಲಾಂಚ್​ ಮಾಡಿಸುತ್ತಿರುವುದರಿಂದ ಸಿನಿಮಾ ಕಥೆ ಪೊಲೀಸ್​ ಕಥಾಹಂದರ ಹೊಂದಿರಲಿದೆಯೆ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಚಿತ್ರತಂಡ ಉತ್ತರ ನೀಡಬೇಕಿದೆ. ಸುಮಂತ್​ ಕ್ರಾಂತಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶಿವ ತೇಜಸ್​ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರವಿ ವರ್ಮಾ ಅವರ ಆ್ಯಕ್ಷನ್​ ನಿರ್ದೇಶನ​ ಸಿನಿಮಾಗೆ ಇರಲಿದೆ.

ಒಂದೊಮ್ಮೆ ಸಿನಿಮಾ ಆಫರ್​ ಹೆಚ್ಚಾದರೆ ಕಿರುತೆರೆ ತೊರೆಯುತ್ತೀರಾ ಎನ್ನುವ ಪ್ರಶ್ನೆಗೆ ಇತ್ತೀಚೆಗೆ ಮೇಘಾ ಶೆಟ್ಟಿ ಅವರು ಉತ್ತರ ನೀಡಿದ್ದರು. ‘ಸಿನಿಮಾ ಸೀರಿಯಲ್​ ಎರಡನ್ನೂ ನಾನು ನಿಭಾಯಿಸಿಕೊಂಡು ಹೋಗುತ್ತೇನೆ. ಧಾರಾವಾಹಿ ನನಗೆ ಲೈಫ್​ ಕೊಟ್ಟಿದೆ. ಅದರ ಜತೆಗಿನ ಒಡನಾಟ ಎಲ್ಲಕ್ಕಿಂತ ಹೆಚ್ಚು. ಹಾಗಾಗಿ ಎರಡನ್ನೂ ಬ್ಯಾಲೆನ್ಸ್​ ಮಾಡಿಕೊಂಡು ಹೋಗುತ್ತೇನೆ’ ಎಂದಿದ್ದರು ಮೇಘಾ ಶೆಟ್ಟಿ.

ಇದನ್ನೂ ಓದಿ: Megha Shetty: ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ಸಿನಿಮಾಗಾಗಿ ಕಾಯ್ತಾ ಇದೀರಾ?; ಇಲ್ಲಿದೆ ಗುಡ್​ ನ್ಯೂಸ್

‘ಧಾರಾವಾಹಿ ನನಗೆ ಲೈಫ್​ ಕೊಟ್ಟಿದೆ, ಅದರ ಜತೆಗಿನ ಒಡನಾಟ ಎಲ್ಲಕಿಂತ ಹೆಚ್ಚು’; ಮೇಘಾ ಶೆಟ್ಟಿ