‘ಧಾರಾವಾಹಿ ನನಗೆ ಲೈಫ್​ ಕೊಟ್ಟಿದೆ, ಅದರ ಜತೆಗಿನ ಒಡನಾಟ ಎಲ್ಲಕಿಂತ ಹೆಚ್ಚು’; ಮೇಘಾ ಶೆಟ್ಟಿ

ಒಂದು ಸಿನಿಮಾದಲ್ಲಿ ನಟಿಸಿದ ನಂತರ ಸಾಲುಸಾಲು ಸಿನಿಮಾ ಆಫರ್​ಗಳು ಬರೋದು ಸಹಜ. ಮೇಘಾ ಶೆಟ್ಟಿಗೂ ಇದೇ ರೀತಿ ಆಗುತ್ತಿದೆಯಾ? ಈ ಪ್ರಶ್ನೆಗೆ ಅವರು ‘ಮುಂದಿನ ದಿನಗಳಲ್ಲಿ ಹೇಳುತ್ತೇನೆ’ ಎನ್ನುವ ಉತ್ತರ ನೀಡಿದ್ದಾರೆ.

‘ಧಾರಾವಾಹಿ ನನಗೆ ಲೈಫ್​ ಕೊಟ್ಟಿದೆ, ಅದರ ಜತೆಗಿನ ಒಡನಾಟ ಎಲ್ಲಕಿಂತ ಹೆಚ್ಚು’; ಮೇಘಾ ಶೆಟ್ಟಿ
ಮೇಘಾ ಶೆಟ್ಟಿ (ಚಿತ್ರ ಕೃಪೆ: ಇನ್​ಸ್ಟಾಗ್ರಾಮ್)
Follow us
ರಾಜೇಶ್ ದುಗ್ಗುಮನೆ
|

Updated on: Sep 18, 2021 | 8:25 PM

ಕಿರುತೆರೆಯಲ್ಲಿ ಖ್ಯಾತಿ ಹೆಚ್ಚಿದ ನಂತರ ಅನೇಕರಿಗೆ ಹಿರಿತೆರೆ ಆಫರ್​ ಬರುತ್ತದೆ. ಆಗ ನಟ-ನಟಿಯರು ಕಿರುತೆರೆ ತೊರೆದು ಹಿರಿತೆರೆಯಲ್ಲಿ ಬ್ಯುಸಿಯಾಗಿ ಬಿಡುತ್ತಾರೆ. ಈಗ ಮೇಘಾ ಶೆಟ್ಟಿ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿ ಇದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಆಫರ್ ಹೆಚ್ಚೆಚ್ಚು ಬಂದರೂ ಅವರು ಧಾರಾವಾಹಿ ಜಗತ್ತನ್ನು ಬಿಟ್ಟು ಹೋಗುವುದಿಲ್ಲವಂತೆ. ಈ ಬಗ್ಗೆ ಸ್ವತಃ ಮೇಘಾ ಶೆಟ್ಟಿ ಹೇಳಿಕೊಂಡಿದ್ದಾರೆ.

ಮೇಘಾ ಶೆಟ್ಟಿ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಆಗಿ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕಿ ಅನು ಮಧ್ಯಮವರ್ಗದ ಹುಡುಗಿ ಸಾಕಷ್ಟು ವಯಸ್ಸಿನ ಅಂತರ ಇರುವ ಶ್ರೀಮಂತ ಮನೆಯ ವ್ಯಕ್ತಿಯನ್ನು (ಅನಿರುದ್ಧ್​) ಮದುವೆ ಆಗುತ್ತಾಳೆ. ಈ ಧಾರಾವಾಹಿ ಮೇಘಾಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಇದೇ ಕಾರಣಕ್ಕೆ ಅವರಿಗೆ ಸಿನಿಮಾ ಆಫರ್​ಗಳು ಬರುತ್ತಿವೆ. ಗಣೇಶ್​ ನಟನೆಯ ‘ತ್ರಿಬಲ್​ ರೈಡಿಂಗ್​’ ಚಿತ್ರದ ಮೂಲಕ ಮೇಘಾ ಶೆಟ್ಟಿ ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಶುಕ್ರವಾರ (ಸೆಪ್ಟೆಂಬರ್​ 17) ಸಿನಿಮಾದ ಶೂಟಿಂಗ್​ ಮುಗಿದಿದೆ. ಇದೇ ಖುಷಿಯಲ್ಲಿ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.

ಒಂದು ಸಿನಿಮಾದಲ್ಲಿ ನಟಿಸಿದ ನಂತರ ಸಾಲುಸಾಲು ಸಿನಿಮಾ ಆಫರ್​ಗಳು ಬರೋದು ಸಹಜ. ಮೇಘಾ ಶೆಟ್ಟಿಗೂ ಇದೇ ರೀತಿ ಆಗುತ್ತಿದೆಯಾ? ಈ ಪ್ರಶ್ನೆಗೆ ಅವರು ‘ಮುಂದಿನ ದಿನಗಳಲ್ಲಿ ಹೇಳುತ್ತೇನೆ’ ಎನ್ನುವ ಉತ್ತರ ನೀಡಿದ್ದಾರೆ. ಈ ಮೂಲಕ ಕುತೂಹಲ ಕಾಯ್ದುಕೊಂಡಿದ್ದಾರೆ.

ಒಂದೊಮ್ಮೆ ಸಿನಿಮಾ ಆಫರ್​ ಹೆಚ್ಚಾದರೆ ಕಿರುತೆರೆ ತೊರೆಯುತ್ತೀರಾ ಎನ್ನುವ ಪ್ರಶ್ನೆಗೆ ಅವರು ಕೊಡುವ ಉತ್ತರ ವಿಶೇಷವಾಗಿದೆ. ‘ಸಿನಿಮಾ ಸೀರಿಯಲ್​ ಎರಡನ್ನೂ ನಾನು ನಿಭಾಯಿಸಿಕೊಂಡು ಹೋಗುತ್ತೇನೆ. ಧಾರಾವಾಹಿ ನನಗೆ ಲೈಫ್​ ಕೊಟ್ಟಿದೆ. ಅದರ ಜತೆಗಿನ ಒಡನಾಟ ಎಲ್ಲಕ್ಕಿಂತ ಹೆಚ್ಚು. ಹಾಗಾಗಿ ಎರಡನ್ನೂ ಬ್ಯಾಲೆನ್ಸ್​ ಮಾಡಿಕೊಂಡು ಹೋಗುತ್ತೇನೆ’ ಎನ್ನುತ್ತಾರೆ ಅವರು.

ತ್ರಿಬಲ್​ ರೈಡಿಂಗ್ ಚಿತ್ರಕ್ಕೆ ಮೂವರು ನಾಯಕಿಯರು. ಮೇಘಾ ಜತೆಗೆ ರಚನಾ ಇಂದರ್, ಅದಿತಿ ಪ್ರಭುದೇವ ಕೂಡ ನಟಿಸುತ್ತಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್​, ರವಿಶಂಕರ್, ರಂಗಾಯಣ ರಘು ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರೀಮಹೇಶ್​ ಗೌಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ವೈ.ಎಂ. ರಾಮ್​ಗೋಪಾಲ್​ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: ಮೇಘಾ ಶೆಟ್ಟಿ ಮನೆಗೆ ಬಂತು ಎರಡು ಐಷಾರಾಮಿ ಕಾರು; ಖುಷಿ ಹಂಚಿಕೊಂಡ ನಟಿ

Megha Shetty: ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ ಸಿನಿಮಾಗಾಗಿ ಕಾಯ್ತಾ ಇದೀರಾ?; ಇಲ್ಲಿದೆ ಗುಡ್​ ನ್ಯೂಸ್

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ