Santhosha Sangeetha: ತೆರೆಮೇಲೆ ಜೋಡಿಯಾದ ರಿಯಲ್​ ಲೈಫ್​ ಗಂಡ-ಹೆಂಡತಿ; ಇದು ‘ಸಂತೋಷ ಸಂಗೀತ’ ಚಿತ್ರದ ವಿಶೇಷ

New Kannada Movie: ಗಂಡ ಮತ್ತು ಹೆಂಡತಿ ಇಬ್ಬರೂ ಒಂದೇ ಉದ್ಯಮದಲ್ಲಿ ತೊಡಗಿಕೊಂಡಿದ್ದರೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ‘ಸಂತೋಷ ಸಂಗೀತ’ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ ನಿರ್ದೇಶಕರು.

Santhosha Sangeetha: ತೆರೆಮೇಲೆ ಜೋಡಿಯಾದ ರಿಯಲ್​ ಲೈಫ್​ ಗಂಡ-ಹೆಂಡತಿ; ಇದು ‘ಸಂತೋಷ ಸಂಗೀತ’ ಚಿತ್ರದ ವಿಶೇಷ
‘ಸಂತೋಷ ಸಂಗೀತ’ ಸಿನಿಮಾ ತಂಡ

Updated on: Jul 08, 2023 | 10:12 PM

2023ರಲ್ಲಿ 6 ತಿಂಗಳು ಕಳೆದು ಹೋಗಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಬಿಡುಗಡೆಯಾಗಲು ಇನ್ನೂ ಹಲವು ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಸಕ್ಸಸ್​ ರೇಟ್​ ಏನೇ ಇರಲಿ, ಕನ್ನಡದಲ್ಲಿ ಹೊಸ ಸಿನಿಮಾಗಳು (New Kannada Movies) ಬರುತ್ತಲೇ ಇವೆ. ಆ ಸಾಲಿಗೆ ಇನ್ನೊಂದು ಸೇರ್ಪಡೆ ‘ಸಂತೋಷ ಸಂಗೀತ’ (Santhosha Sangeetha) ಸಿನಿಮಾ. ಈ ಸಿನಿಮಾವನ್ನು ಸಿದ್ದು ಎಸ್. ಅವರು ನಿರ್ಮಿಸಿದ್ದಾರೆ. ನಿರ್ದೇಶನ ಕೂಡ ಅವರದ್ದೇ. ಅರ್ನವ್ ವಿನ್ಯಾಸ್ ಮತ್ತು ರಾಣಿ ವರದ್ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ರಿಯಲ್​ ಲೈಫ್​ನಲ್ಲಿ ಗಂಡ-ಹೆಂಡತಿ ಆಗಿರುವ ಇವರು ‘ಸಂತೋಷ ಸಂಗೀತ’ ಸಿನಿಮಾದಲ್ಲಿ ಕೂಡ ಪತಿ-ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

ಒಂದೇ ಉದ್ಯಮದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ತೊಡಗಿಕೊಂಡಿದ್ದರೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ‘ಸಂತೋಷ ಸಂಗೀತ’ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ ನಿರ್ದೇಶಕ ಸಿದ್ದು ಎಸ್​. ಹಿರಿಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ಇದ್ದಾರೆ. ದೊಡ್ಡಣ್ಣ, ಲಯ ಕೋಕಿಲ, ಕವನ, ಅವಿನಾಶ್, ಅಮಿತ್, ‘ಕಾಮಿಡಿ ಕಿಲಾಡಿಗಳು’ ಲೋಕೇಶ್ ಸೂರ್ಯ, ಹನೀಶ್, ಮಡೆನೂರು ಮನು ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Devara Kanasu: ‘ದೇವರ ಕನಸು’ ಚಿತ್ರಕ್ಕೆ ಸಾಥ್​ ನೀಡಿದ ಅಶ್ವಿನಿ ಪುನೀತ್​; ಜುಲೈ 21ಕ್ಕೆ ರಿಲೀಸ್​ ಆಗಲಿದೆ ಮಕ್ಕಳ ಸಿನಿಮಾ

ನಿರ್ದೇಶಕ ಸಿದ್ದು ಎಸ್​. ಅವರು ಎಂ.ಸಿ.ಎ. ಪದವಿ ಪೂರ್ಣಗೊಳಿಸಿ ಚಿತ್ರರಂಗಕ್ಕೆ ಕಾಲಿಟ್ಟರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಬರೆದ ಕಥೆಗೆ ಈಗ ಸಿನಿಮಾ ರೂಪ ನೀಡುತ್ತಿದ್ದಾರೆ. ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದಾರೆ. ಕಾಮಿಡಿ, ಲವ್​ ಸ್ಟೋರಿ ಜೊತೆಗೆ ಕಮರ್ಷಿಯಲ್​ ಅಂಶಗಳು ಕೂಡ ಈ ಸಿನಿಮಾದಲ್ಲಿ ಇವೆ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಇದರ ಬಹುತೇಕ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲೇ ಸಿನಿಮಾ ತೆರೆಕಾಣಿಸಬೇಕು ಎಂದು ಚಿತ್ರತಂಡ ಗುರಿ ಇಟ್ಟುಕೊಂಡಿದೆ.

ಇದನ್ನೂ ಓದಿ: ಪ್ರಜ್ವಲ್ ಹುಟ್ಟುಹಬ್ಬಕ್ಕೆ ಗಣ ಟೀಸರ್ ಬಿಡುಗಡೆ: ಇದು ಭೂತ-ಭವಿಷ್ಯದ ಸಿನಿಮಾ

ಈ ಮೊದಲು ‘ಹೊಂಬಣ್ಣ’ ಹಾಗೂ ‘ಪ್ರೇಮಂ’ ಚಿತ್ರಗಳಲ್ಲಿ ನಟಿಸಿದ್ದ ಅರ್ನವ್ ವಿನ್ಯಾಸ್ ಅವರಿಗೆ ಇದು ಮೂರನೇ ಸಿನಿಮಾ. ಈ ಸಿನಿಮಾದಲ್ಲಿ ಅವರು ಉದ್ಯಮಿಯ ಪಾತ್ರ ಮಾಡಿದ್ದಾರೆ. ಜೆ.ಪಿ. ನಗರದ ಮಾಜಿ ಕಾರ್ಪೋರೇಟರ್ ಆದ ಚಂದ್ರಶೇಖರ್ ರಾಜು ಅವರು ‘ಸಂತೋಷ ಸಂಗೀತ’ ಸುದ್ದಿಗೋಷ್ಠಿಗೆ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us