ಪ್ರಜ್ವಲ್ ಹುಟ್ಟುಹಬ್ಬಕ್ಕೆ ಗಣ ಟೀಸರ್ ಬಿಡುಗಡೆ: ಇದು ಭೂತ-ಭವಿಷ್ಯದ ಸಿನಿಮಾ

Prajwal Devaraj: ನಟ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾ 'ಗಣ' ಟೀಸರ್ ಬಿಡುಗಡೆ ಆಗಿದೆ. ಇದು ಭೂತ-ಭವಿಷ್ಯದ ಸಿನಿಮಾ.

ಪ್ರಜ್ವಲ್ ಹುಟ್ಟುಹಬ್ಬಕ್ಕೆ ಗಣ ಟೀಸರ್ ಬಿಡುಗಡೆ: ಇದು ಭೂತ-ಭವಿಷ್ಯದ ಸಿನಿಮಾ
ಪ್ರಜ್ವಲ್ ದೇವರಾಜ್-ಗಣ
Follow us
ಮಂಜುನಾಥ ಸಿ.
|

Updated on: Jul 04, 2023 | 6:30 PM

ನಟ ಪ್ರಜ್ವಲ್ ದೇವರಾಜ್ (Prajwal Devaraj) ಇಂದು ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ವರ್ಷಗಳ ಬಳಿಕ ಮತ್ತೆ ತಮ್ಮ ಅಭಿಮಾನಿಗಳೊಟ್ಟಿಗೆ ಇಂದು ಹುಟ್ಟುಹಬ್ಬ ಆಚರಸಿಕೊಂಡಿದ್ದಾರೆ. ಪ್ರಜ್ವಲ್​ರ ಹುಟ್ಟುಹಬ್ಬದ ದಿನ ಅವರ ಸಿನಿಮಾಗಳ ಅಪ್​ಡೇಟ್​ಗಳು ಹೊರಬಿದ್ದಿವೆ. ಅದರಲ್ಲಿ ಅವರ ಮುಂದಿನ ಸಿನಿಮಾ ಗಣದ ಟೀಸರ್ (Teaser) ಸಹ ಒಂದು. ಭೂತಕಾಲ-ಭವಿಷ್ಯತ್ ಹೀಗೆ ಭಿನ್ನ ಕಥಾಹೊಂದಿರುವ ಸಿನಿಮಾ ಇದಾಗಿದೆ ಎಂಬ ಸುಳಿವು ಟೀಸರ್​ನಲ್ಲಿದೆ.

ಪ್ರಜ್ವಲ್​ರ ಮುಂದಿನ ಸಿನಿಮಾ ಗಣ ಟೀಸರ್ ಅನ್ನು ಪ್ರಜ್ವಲ್ ಅವರ ತಾಯಿ ಚಂದ್ರಲೇಖ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಪ್ರಜ್ವಲ್​ರ ತಂದೆ ಡೈನಮಿಕ್ ಸ್ಟಾರ್ ದೇವರಾಜ್, ರಾಗಿಣಿ ಪ್ರಜ್ವಲ್ ಹಾಗೂ ಪ್ರಣಾಮ್ ದೇವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಟೀಸರ್ ಬಿಡುಗಡೆ ನಿಮಿತ್ತ ಆಯೋಜಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮಾತು ಪ್ರಾರಂಭ ಮಾಡಿದ ಪಾರ್ಥು, ”ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ನನಗೆ ಕನ್ನಡ ಚಿತ್ರ ನಿರ್ಮಾಣ ಮಾಡಬೇಕು ಅನಿಸಿತು, ಹಾಗಾಗಿ “ಗಣ” ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ನಾನು ಪ್ರಜ್ವಲ್ ಅವರನ್ನು ಫಾಲೋ ಮಾಡುತ್ತಿದ್ದೆ‌. ಅವರ ಅಭಿಮಾನಿಗಳು ಎಂಥಹಾ ಸಿನಿಮಾದ ನಿರೀಕ್ಷೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಐಡಿಯಾ ಇದೆ. ಈಗ ಗಣ ಮೂಲಕ ಅದೇ ತರಹದ ಚಿತ್ರ ಮಾಡಿದ್ದೇವೆ. ಶೂಟಿಂಗ್ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ಸ್ ನಡೆಯುತ್ತಿದೆ. ಈವರೆಗೂ ಪ್ರಜ್ವಲ್ ದೇವರಾಜ್ ಅವರು ಮಾಡಿರದ ಪಾತ್ರ ಗಣ ಸಿನಿಮಾದಲ್ಲಿ ಮಾಡಿದ್ದಾರೆ. ಹರಿಪ್ರಾಸಾದ್ ಜಕ್ಕ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ನಾನು ಸಹ ಸಿನಿಮಾದಲ್ಲಿ ನಟಿಸಿದ್ದೀನಿ ಎಂದರು.

ಇದನ್ನೂ ಓದಿ:ಅಭಿಮಾನಿಗಳನ್ನು ಮನೆಗೆ ಆಹ್ವಾನಿಸಿದ ನಟ ಪ್ರಜ್ವಲ್ ದೇವರಾಜ್: ಕಾರಣ?

ಪ್ರಜ್ವಲ್ ದೇವರಾಜ್ ಮಾತನಾಡಿ, ಕನ್ನಡದ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಸಿನಿಮಾ ಮಾಡಬೇಕೆಂಬ ಆಸೆಯಿಂದ ಬಂದಿರವ ನಿರ್ಮಾಪಕ ಪಾರ್ಥು ಅವರಿಗೆ ಅಭಿನಂದನೆ ತಿಳಿಸಿದರು. ””ಗಣ” ನಾನು ಈವರೆಗೂ ಮಾಡಿರುವ ಸಿನಿಮಾಗಳಲ್ಲೇ ಬೇಗ ಚಿತ್ರೀಕರಣ ಮುಗಿದಿರುವ ಸಿನಿಮಾ. ಹಾಗೂ ಭಿನ್ನವಾದ ಜಾನರ್ ಕತೆಯುಳ್ಳ ಸಿನಿಮಾ ಸಹ. 1993 ಹಾಗೂ 2023 ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯುತ್ತದೆ‌. ಸಮಯದ ಜೊತೆ ಹೋರಾಡುವ ಕತೆ. ನನ್ನ ಜೊತೆ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕೆಲಸ ಬಹಳ ಅದ್ಭುತ. ನಮ್ಮ ಸಿನಿಮಾಕ್ಕೆ ಅಭಿಮಾನಿಗಳು ಪ್ರೇಕ್ಷಕರ ಪ್ರೋತ್ಸಾಹ ಇರಲಿ ಎಂದು ಹೇಳಿದರು.

ಗಣ ಸಿನಿಮಾದಲ್ಲಿ ನಟಿಸಿರುವ ಕೃಷಿ ತಾಪಂಡ, ವೇದಿಕ, ಮಾಸ್ಟರ್ ರಘುನಂದನ್, ಶಿವರಾಜ್ ಕೆ.ಆರ್ ಪೇಟೆ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಕಲಾ ನಿರ್ದೇಶಕ ಸತೀಶ್, ಛಾಯಾಗ್ರಹಕ ಜೈ ಆನಂದ್, ಎಡಿಟರ್ ಹರೀಶ್ ಕೊಮ್ಮೆ ಹಾಗೂ ಗೋಪಿ ಅವರು “ಗಣ” ಸಿನಿಮಾ ಬಗ್ಗೆ ಮಾತನಾಡಿ ತಮ್ಮ ಮೆಚ್ಚುಗೆ ತಿಳಿಸಿದರು. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಶ್ರೀನಿವಾಸ್ ಚಿಕ್ಕಬಳ್ಳಾಪುರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ