AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Evidence Movie: ಶೀಘ್ರದಲ್ಲೇ ಬರಲಿದೆ ‘ಎವಿಡೆನ್ಸ್​’ ಟೀಸರ್​; ಇದು ರೋಬೋ ಗಣೇಶನ್-ಮಾನಸ ಜೋಶಿ ನಟನೆಯ ಸಿನಿಮಾ

ಪ್ರವೀಣ್ ರಾಮಕೃಷ್ಣ ಅವರು ‘ಎವಿಡೆನ್ಸ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಮಾನಸ ಜೋಶಿ ಮತ್ತು ರೋಬೋ ಗಣೇಶನ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ.

Evidence Movie: ಶೀಘ್ರದಲ್ಲೇ ಬರಲಿದೆ ‘ಎವಿಡೆನ್ಸ್​’ ಟೀಸರ್​; ಇದು ರೋಬೋ ಗಣೇಶನ್-ಮಾನಸ ಜೋಶಿ ನಟನೆಯ ಸಿನಿಮಾ
ಮಾನಸ ಜೋಶಿ, ರೋಬೋ ಗಣೇಶನ್
ಮದನ್​ ಕುಮಾರ್​
|

Updated on: Jul 04, 2023 | 8:35 PM

Share

‘ಜೋಶ್’ ಸಿನಿಮಾ ನೋಡಿದವರಿಗೆ ರೋಬೋ ಗಣೇಶನ್ (Robo Ganesan) ಅವರ ಪಾತ್ರ ನೆನಪಿರುತ್ತದೆ. ಅವರೀಗ ‘ಎವಿಡೆನ್ಸ್​’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ‘ಕಿರಗೂರಿನ ಗಯ್ಯಾಳಿಗಳು’ ಖ್ಯಾತಿಯ ನಟಿ ಮಾನಸ ಜೋಶಿ (Manasa Joshi) ಅವರು ತೆರೆ ಹಂಚಿಕೊಂಡಿದ್ದಾರೆ. ಒಂದಷ್ಟು ಕಾರಣಗಳಿಂದ ಈ ಸಿನಿಮಾ ಕೌತುಕ ಮೂಡಿಸಿದೆ. ಡಾ. ಕೊಡ್ಲಾಡಿ ಸುರೇಂದ್ರಶೆಟ್ಟಿ ಅವರು ‘ಶ್ರೀಧೃತಿ ಪ್ರೊಡಕ್ಷನ್’ ಬ್ಯಾನರ್​ ಮೂಲ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಶ್ರೀನಿವಾಸ್‌ಪ್ರಭು, ನಟರಾಜ್ ಸಿ.ಎಸ್. (ಚನ್ನಸಂದ್ರ), ಕೆ.ಮಾದೇಶ್ (ಕೊಡಿಹಳ್ಳಿ) ಅವರು ಜೊತೆಯಾಗಿ ‘ಎವಿಡೆನ್ಸ್’  (Evidence Movie) ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪ್ರವೀಣ್ ರಾಮಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜುಲೈ ಕೊನೇ ವಾರದಲ್ಲಿ ಈ ಚಿತ್ರದ ಟೀಸರ್​ ರಿಲೀಸ್​ ಆಗಲಿದೆ.

ರೋಬೋ ಗಣೇಶನ್ ಮತ್ತು ಮಾನಸ ಜೋಶಿ ಜೊತೆ ಆಕರ್ಷ್ ಆದಿತ್ಯ, ಪೂಜಿತ ಬೋಬೆ ಗೌಡ, ರಚಿತಾ, ಶಶಿಧರ ಕೋಟೆ, ಚಮಕ್‌ ಚಂದ್ರ, ಪವನ್‌ ಸುರೇಶ್, ಕಾರ್ತಿಕ್ ವರ್ಣೇಕರ್, ಮನಮೋಹನ್ ರೈ, ಆರಾಧ್ಯ ಶಿವಕುಮಾರ್, ರೇಣು ಶಿಕಾರಿ ಮುಂತಾದವರು ‘ಎವಿಡೆನ್ಸ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎಂ. ಎನ್. ರವೀಂದ್ರ ರಾವ್ (ದೂರದರ್ಶನ), ಅರವಿಂದ್ ಅಚ್ಚು, ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್‌ಬಾಬು ಹಾಗೂ ನರಸಿಂಹಮೂರ್ತಿ ಅವರು ಈ ಚಿತ್ರದ ಸಹ ನಿರ್ಮಾಪಕರು. ಶೀಘ್ರದಲ್ಲೇ ಈ ಸಿನಿಮಾವನ್ನು ಸೆನ್ಸಾರ್ ಅಂಗಳಕ್ಕೆ ಕಳಿಸಲಾಗುವುದು.

ಇದನ್ನೂ ಓದಿ: Totapuri 2: ‘ತೋತಾಪುರಿ 2’ ಬಿಡುಗಡೆಗೆ ಸಜ್ಜಾದ ನಿರ್ಮಾಪಕರು; ಜಗ್ಗೇಶ್​, ಡಾಲಿ ಧನಂಜಯ್​ ಫಸ್ಟ್​ ಲುಕ್​ ಬಿಡುಗಡೆ

ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು ಹಾಗೂ ನೆಲಮಂಗಲ ಹೊರವಲಯದಲ್ಲಿ ‘ಎವಿಡೆನ್ಸ್’ ಸಿನಿಮಾದ ಚಿತ್ರೀಕರಣ ನಡೆದಿದೆ. ಚಿತ್ರದ ಶೀರ್ಷಿಕೆಯೇ ಸೂಚಿಸುತ್ತಿರುವಂತೆ, ಒಂದು ಕೊಲೆ ನಡೆದಾಗ ಅದರ ಸಾಕ್ಷಾಧಾರಗಳನ್ನು ಹುಡುಕುತ್ತಾ ಸಾಗುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಕ್ರೈಮ್, ಥ್ರಿಲ್ಲರ್, ಸಸ್ಪೆನ್ಸ್ ಜತೆಗೆ ತ್ರಿಕೋನ ಲವ್​ ಸ್ಟೋರಿ ಕೂಡ ಇರಲಿದೆ.

ಇದನ್ನೂ ಓದಿ: Komal Kumar: ‘ನಮೋ ಭೂತಾತ್ಮ 2’ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್​; ಟೀಸರ್​ ನೋಡಿ ಖುಷಿಪಟ್ಟ ಕೋಮಲ್​ ಫ್ಯಾನ್ಸ್​

ಆರೋನ್ ಕಾರ್ತಿಕ್ ವೆಂಕಟೇಶ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಒಟ್ಟು 4 ಹಾಡುಗಳು ಇವೆ. ಸಿ.ಜೆ. ಅವರು ಹಿನ್ನೆಲೆ ಸಂಗೀತದ ಜವಾಬ್ದಾರಿ ನಿಭಾಯಿಸಿದ್ದಾರೆ. ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್, ಪ್ರವೀಣ್‌ ರಾಮಕೃಷ್ಣ, ಕಾರ್ತಿಕ್ ಅವರು ಸಾಹಿತ್ಯವಿದೆ. ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ಅವರ ನಿರ್ದೇಶನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಹನುಮಯ್ಯ ಬಂಡಾರು, ಆರ್. ಚಂದ್ರಶೇಖರ ಪ್ರಸಾದ್ ಅವರು ಸಂಭಾಷಣೆ ಬರೆದಿದ್ದಾರೆ. ಶೇಷಾಚಲ ಕುಲಕರ್ಣಿ ಅವರು ಸಂಕಲನ, ರವಿ ಸುವರ್ಣ ಅವರು ಛಾಯಾಗ್ರಹಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು