Komal Kumar: ವಜ್ರಮುನಿ ಅವತಾರದಲ್ಲಿ ಬಂದ ಕೋಮಲ್​ ಕುಮಾರ್​; ಹುಟ್ಟುಹಬ್ಬಕ್ಕೆ ‘ಎಲಾ ಕುನ್ನಿ’ ಪೋಸ್ಟರ್​

Ela Kunni Movie: ಕೋಮಲ್​ ಅವರನ್ನು ವಜ್ರಮುನಿ ಸ್ಟೈಲ್​ನಲ್ಲಿ ನೋಡಿದ ಬಳಿಕ ‘ಎಲಾ ಕುನ್ನಿ’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ.

Komal Kumar: ವಜ್ರಮುನಿ ಅವತಾರದಲ್ಲಿ ಬಂದ ಕೋಮಲ್​ ಕುಮಾರ್​; ಹುಟ್ಟುಹಬ್ಬಕ್ಕೆ ‘ಎಲಾ ಕುನ್ನಿ’ ಪೋಸ್ಟರ್​
‘ಎಲಾ ಕುನ್ನಿ’ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jul 04, 2023 | 2:55 PM

ಕನ್ನಡ ಚಿತ್ರರಂಗ ಎಂದಿಗೂ ಮರೆಯದಂತಹ ನಟ ವಜ್ರಮುನಿ. ವಿಲನ್​ ಪಾತ್ರಗಳಲ್ಲಿ ಅವರು ತಮ್ಮ ಛಾಪು ಮೂಡಿಸಿದ್ದರು. ಅವರಿಗೆ ಸರಿಸಾಟಿ ಆಗುವಂತಹ ಕಲಾವಿದ ಮತ್ತೊಬ್ಬರಿಲ್ಲ. ವಜ್ರಮುನಿ (Vajramuni) ಅವರ ಮ್ಯಾನರಿಸಂ ಸಖತ್​ ಫೇಮಸ್​. ‘ಎಲಾ ಕುನ್ನಿ..’ ಎಂದು ಅವರು ಹೇಳಿದ್ದ ಡೈಲಾಗ್​ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅದನ್ನೇ ಈಗ ಶೀರ್ಷಿಕೆಯಾಗಿಸಿಕೊಂಡು ಸಿನಿಮಾ ಮೂಡಿಬರುತ್ತಿದೆ. ‘ಯಲಾ ಕುನ್ನಿ’ (Ela Kunni) ಚಿತ್ರದಲ್ಲಿ ಕೋಮಲ್​ ಕುಮಾರ್​ (Komal, Komal) ಹೀರೋ ಎಂಬುದು ಈಗಾಗಲೇ ತಿಳಿದಿದೆ. ಇಂದು (ಜುಲೈ 4) ಅವರ ಜನ್ಮದಿನ. ಆ ಪ್ರಯುಕ್ತ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ವಜ್ರಮುನಿ ಲುಕ್​ನಲ್ಲಿಯೇ ಈ ಪೋಸ್ಟರ್​ ಮೂಡಿಬಂದಿದೆ ಎಂಬುದು ವಿಶೇಷ.

‘ಯಲಾ ಕುನ್ನಿ’ ಸಿನಿಮಾವನ್ನು ‘ಸೌಭಾಗ್ಯ ಸಿನಿಮಾಸ್’ ಬ್ಯಾನರ್​ ಮೂಲಕ ಮಹೇಶ್ ಗೌಡ ಅವರು ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಎನ್.ಆರ್. ಪ್ರದೀಪ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಹೊಸ ಪೋಸ್ಟರ್​ ಮೂಲಕ ನಟ ಕೋಮಲ್​ ಕುಮಾರ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ವಜ್ರಮುನಿ ಗೆಟಪ್​ನಲ್ಲಿರುವ ಈ ಫಸ್ಟ್​ ಲುಕ್​ ಪೋಸ್ಟರ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: Komal Kumar: ‘ನಮೋ ಭೂತಾತ್ಮ 2’ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್​; ಟೀಸರ್​ ನೋಡಿ ಖುಷಿಪಟ್ಟ ಕೋಮಲ್​ ಫ್ಯಾನ್ಸ್​

ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ‘ಎಲಾ ಕುನ್ನಿ’ ಚಿತ್ರದ ಪೋಸ್ಟರ್ ಶೇರ್​ ಮಾಡಿಕೊಂಡಿದ್ದಾರೆ. ಕೋಮಲ್​ ಅವರನ್ನು ವಜ್ರಮುನಿ ಸ್ಟೈಲ್​ನಲ್ಲಿ ನೋಡಿದ ಮೇಲೆ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ. ವಿಶೇಷ ಏನೆಂದರೆ, ಬರೀ ಪೋಸ್ಟರ್​ನಲ್ಲಿ ಮಾತ್ರವಲ್ಲದೇ ‘ಎಲಾ ಕುನ್ನಿ’ ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ಕೋಮಲ್​ ಕುಮಾರ್​ ಅವರು ವಜ್ರಮುನಿ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಈಗ ನಮೋ ಭೂತಾತ್ಮ ನಂತರ ರೋಬೋ, ಒಟ್ನಲ್ಲಿ ಕೋಮಲ್ ಬಹು ಬ್ಯುಸಿ

‘ನವರಸ ನಾಯಕ’ ಜಗ್ಗೇಶ್ ಅವರ ಮಗ ಯತಿರಾಜ್ ಹಾಗೂ ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಅವರು ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.‘ಎಲಾ ಕುನ್ನಿ’ ಚಿತ್ರದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲದೇ, ‘ಮೇರಾ ನಾಮ್ ವಜ್ರಮುನಿ’ ಎಂಬ ಟ್ಯಾಗ್​ ಲೈಗ್​ ಕೂಡ ಹೈಲೈಟ್​ ಆಗಿದೆ. ‘ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ’ ಎಂಬ ಸಾಲು ಈ ಪೋಸ್ಟರ್​ನಲ್ಲಿದೆ. ಈ ಎಲ್ಲ ಕಾರಣಗಳಿಂದ ‘ಎಲಾ ಕುನ್ನಿ’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ