
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ (The Devil Movie) ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಏಕಪರದೆ ಚಿತ್ರಮಂದಿರಗಳಲ್ಲಿ 4 ದಿನ ಮೊದಲೇ ಬುಕಿಂಗ್ ಶುರುವಾಗಿತ್ತು. ಬಳಿಕ ‘ಗೋಪಾಲನ್ ಸಿನಿಮಾಸ್’ ಕೂಡ ಬುಕಿಂಗ್ ಓಪನ್ ಮಾಡಿತು. ಡಿ.10ರ ಮಧ್ಯಾಹ್ನ 3 ಗಂಟೆ ಬಳಿಕ ‘ಸಿನಿಪೊಲೀಸ್’ ಮಲ್ಟಿಪ್ಲೆಕ್ಸ್ನಲ್ಲಿ ‘ದಿ ಡೆವಿಲ್’ ಬುಕಿಂಗ್ (The Devil Ticket Booking) ಆರಂಭ ಆಯಿತು. ‘ಪಿವಿಆರ್ ಐನಾಕ್ಸ್’ ಮಲ್ಟಿಪ್ಲೆಕ್ಸ್ನಲ್ಲಿ ಬುಕಿಂಗ್ ಆರಂಭಕ್ಕೆ ಇನ್ನಷ್ಟು ವಿಳಂಬ ಆಯಿತು. 3.30ರ ಸುಮಾರಿಗೆ ‘ಪಿವಿಆರ್ ಐನಾಕ್ಸ್’ ಬುಕಿಂಗ್ ಶುರು ಆಯಿತು.
ಯಾವುದೇ ಸಿನಿಮಾ ಬಿಡುಗಡೆ ಆದಾಗ ಅದರ ಕಲೆಕ್ಷನ್ನಲ್ಲಿ ಎಷ್ಟು ಪಾಲು ವಿತರಕರಿಗೆ ಸಿಗಬೇಕು, ಎಷ್ಟ ಪಾಲು ಮಲ್ಟಿಪ್ಲೆಕ್ಸ್ಗಳಿಗೆ ಸಿಗಬೇಕು ಎಂಬ ಮಾತುಕತೆ ನಡೆಯುತ್ತದೆ. ಎಷ್ಟು ಶೋಗಳನ್ನು ನೀಡಬೇಕು ಎಂಬ ಮಾತುಕಥೆ ಸಹ ನಡೆಯುತ್ತದೆ. ಆ ಡೀಲ್ ಫೈನಲ್ ಆದ ನಂತರವೇ ಬುಕಿಂಗ್ ಓಪನ್ ಆಗುತ್ತದೆ. ‘ದಿ ಡೆವಿಲ್’ ಸಿನಿಮಾದ ಬುಕಿಂಗ್ ‘ಪಿವಿಆರ್ ಐನಾಕ್ಸ್’ನಲ್ಲಿ ತಡವಾಗಲು ಕೂಡ ಇದೇ ಕಾರಣ ಎನ್ನಲಾಗಿದೆ.
ಮಲ್ಟಿಪ್ಲೆಕ್ಸ್ ಮಾರುಕಟ್ಟೆಯಲ್ಲಿ ‘ಪಿವಿಆರ್ ಐನಾಕ್ಸ್’ ಸಂಸ್ಥೆ ತನ್ನ ಪ್ರಾಬಲ್ಯ ಹೊಂದಿದೆ. ಭಾರತದಲ್ಲಿ ಅಂದಾಜು 45ರಿಂದ 50ರಷ್ಟು ಮಲ್ಟಿಪ್ಲೆಕ್ಸ್ಗಳು ಈ ಸಂಸ್ಥೆಗೆ ಸೇರಿವೆ. ಕಲೆಕ್ಷನ್ನಲ್ಲಿ ಎಷ್ಟು ಪಾಲು ಸಿಗಬೇಕು ಎಂಬ ಬಗ್ಗೆ ಬಹುನಿರೀಕ್ಷಿತ, ಬಿಗ್ ಬಜೆಟ್ ಚಿತ್ರತಂಡಗಳ ಜೊತೆ ಈ ಸಂಸ್ಥೆಯ ಮಾತುಕಥೆ ಫೈನಲ್ ಆಗುವುದೇ ಕೊನೇ ಹಂತದಲ್ಲಿ. ಆ ಕಾರಣದಿಂದಲೇ ‘ದಿ ಡೆವಿಲ್’ ಬುಕಿಂಗ್ ತಡವಾಗಿ ಶುರುವಾಗಿದೆ.
‘ದಿ ಡೆವಿಲ್’ ಸಿನಿಮಾಗೆ ಸಖತ್ ಬೇಡಿಕೆ ಇದೆ. ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾದ ಟಿಕೆಟ್ ಖರೀದಿಸುತ್ತಿದ್ದಾರೆ. ಈಗಾಗಲೇ ಎಲ್ಲ ಏಕಪರದೆ ಚಿತ್ರಮಂದಿರಗಳಲ್ಲಿ ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಮಲ್ಟಿಪ್ಲೆಕ್ಸ್ಗಳಲ್ಲಿ ಕೂಡ ಹಾಗೆಯೇ ಆಗಿದೆ. ‘ಪಿವಿಆರ್ ಐನಾಕ್ಸ್’ನಲ್ಲಿ ಸಹ ಟಿಕೆಟ್ ಬುಕಿಂಗ್ ಆರಂಭ ಆದ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗುತ್ತಿದೆ.
ಇದನ್ನೂ ಓದಿ: ‘ದಿ ಡೆವಿಲ್’ ನಟಿ ರಚನಾ ರೈ ಸುಂದರ ಫೋಟೋಗಳು
‘ದಿ ಡೆವಿಲ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿಯುವುದು ಕೂಡ ವಿಳಂಬ ಆಯಿತು. ಸಿನಿಮಾದ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಸಿನಿಮಾಗೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ. ಡಿಸೆಂಬರ್ 10ರಂದು ಮಧ್ಯಾಹ್ನದ ವೇಳೆಗೆ ಚಿತ್ರತಂಡಕ್ಕೆ ‘ಯು/ಎ’ ಪ್ರಮಾಣಪತ್ರ ಕೈ ಸೇರಿದೆ. ಈ ಸಿನಿಮಾದ ಅವಧಿ 2 ಗಂಟೆ 49 ನಿಮಿಷ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.