AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರು ಕೆಟ್ಟವರಲ್ಲ, ದೇವರೇ ಇದನ್ನು ಮಾಡಿಸಿದ್ದು’; ಕಷ್ಟದ ದಿನ ನೆನೆದ ಮಯೂರಿ

ನಟಿ ಮಯೂರಿ ಅವರು 'ಅಶ್ವಿನಿ ನಕ್ಷತ್ರ'ದ ಮೂಲಕ ಜನಪ್ರಿಯತೆ ಗಳಿಸಿ, ನಂತರ ಹಿರಿತೆರೆಗೆ ಕಾಲಿಟ್ಟರು. ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅಂದಿನ ಸವಾಲುಗಳೇ ತಮ್ಮ ನಟನಾ ಪಯಣಕ್ಕೆ ಪ್ರೇರಣೆಯಾದವು ಎಂದರು. ಕುಟುಂಬಕ್ಕೆ ಆದ್ಯತೆ ನೀಡಿದರೂ, ಮತ್ತೆ ನಟನೆಗೆ ಮರಳುವ ಆಸೆ ಹೊಂದಿದ್ದಾರೆ. ನಕಾರಾತ್ಮಕ ಅನುಭವಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಅವರ ಮನೋಭಾವ ಎಲ್ಲರಿಗೂ ಪ್ರೇರಣೆ.

‘ಅವರು ಕೆಟ್ಟವರಲ್ಲ, ದೇವರೇ ಇದನ್ನು ಮಾಡಿಸಿದ್ದು’; ಕಷ್ಟದ ದಿನ ನೆನೆದ ಮಯೂರಿ
ಮಯೂರಿ
ರಾಜೇಶ್ ದುಗ್ಗುಮನೆ
|

Updated on: Feb 12, 2026 | 7:07 AM

Share

ಮಯೂರಿ (Mayuri) ಅವರು ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದವರು.ನಂತರ ಹಿರಿತೆರೆಯಲ್ಲಿ ಮಿಂಚಿದರು. ಅವರು ಈಗ ಫ್ಯಾಮಿಲಿ ಕಡೆ ಗಮನ ಹರಿಸುತ್ತಾ ಇದ್ದಾರೆ. ಮಗ ಆರವ್​ಗೆ ಐದು ವರ್ಷ. ಅವರು ನಟನಾ ಕ್ಷೇತ್ರದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ, ಆದರೆ, ಅವರಿಗೆ ನಟನೆಗೆ ಮರಳಬೇಕು ಎಂಬ ಆಸೆ ಇದೆ. ಈ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವಾಗ ತಾವು ನಡೆದು ಬಂದ ಕಷ್ಟದ ಹಾದಿಯನ್ನು ಅವರು ನೆನಪಿಸಿಕೊಂಡರು. ತಮಗೆ ಕೆಟ್ಟದನ್ನು ಮಾಡಿದವರು ಯಾರೂ ಕೆಟ್ಟವರಲ್ಲ ಎಂದಿದ್ದಾರೆ.

ಮಯೂರಿ ಆಗತಾನೇ ಬಣ್ಣದ ಲೋಕಕ್ಕೆ ಬಂದಿದ್ದರು. ಆಗ ಅವರು ಸಾಕಷ್ಟು ತೊಂದರೆ ಅನುಭವಿಸಿದಿರಂತೆ. ಕಿರುತೆರೆ ನಟಿ ಏನು ಮಾಡಲು ಸಾಧ್ಯ ಎಂಬ ರೀತಿಯಲ್ಲಿ ಎಲ್ಲರೂ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆ ಮಯೂರಿ ಅವರನ್ನು ಬಹುವಾಗಿ ಚುಚ್ಚಿತ್ತು. ಸಿನಿಮಾ ಮಾಡಲು ಇದುವೇ ಅವರಿಗೆ ಸ್ಫೂರ್ತಿ ಆಯಿತು.ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

‘ಗೊತ್ತಿದ್ದು ಗೊತ್ತಿಲ್ಲದೆ ತಪ್ಪು ಸರಿ ಮಾಡಿರುತ್ತೇವೆ. ನಾನು ಆಗತಾನೇ ನಟನೆಗೆ ಬಂದಿದ್ದೆ. ಆಗ ಕೆಲವರು ಕೆಟ್ಟ ಕಮೆಂಟ್ ಪಾಸ್ ಮಾಡುತ್ತಿದ್ದರು. ಅವರು ಕೆಟ್ಟವರಲ್ಲ. ನಾನು ಏನೋ ಮಾಡಿ ತೋರ್ತೀನಿ ಎಂಬ ಛಲ ಬಂದಿದ್ದು ಅವರಿಂದ. ದೇವರೇ ಅವರಿಗೆ ಟಾಸ್ಕ್ ಕೊಟ್ಟಿದ್ದರು ಅನಿಸುತ್ತದೆ. ನನಗೆ ಯಾರಾದರೂ ಏನಾದರೂ ಹೇಳಿದರೆ ಅದು ನನಗೆ ಮ್ಯಾಟರ್ ಆಗುತ್ತದೆಯೋ ಇಲ್ಲವೋ ಎಂದು ನೋಡುತ್ತೇನೆ. ಮ್ಯಾಟರ್ ಆದರೆ ಮಾತ್ರ ಯೋಚಿಸುವೆ’ ಎಂಬುದು ಮಯೂರಿ ಮಾತು.

‘ಮೂರನೇ ವ್ಯಕ್ತಿಯ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡೋದು ಸಹಜಗುಣ. ಈ ರೀತಿಯ ಗುಣ ಬೆಳೆಸಿಕೊಂಡರೆ ಎಲ್ಲಿಯೂ ಹೋಗೋಕೆ ಆಗಲ್ಲ. ಇದ್ದಲ್ಲಿಯೇ ಇರಬೇಕಾಗುತ್ತದೆ. ಹಾಗೆ ಮಾಡಬಾರದು. ಆ ಎಲ್ಲವೂ ಚೆನ್ನಾಗಿರುತ್ತದೆ. ಎಲ್ಲರ ಲೈಫ್​​​ಗೂ ಕ್ಲ್ಯಾರಿಟಿ ಬರುತ್ತದೆ’ ಎಂದು ಹೇಳಿದ್ದಾರೆ ಅವರು. ನೋಡೋ ದೃಷ್ಟಿ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿ ಕಾಣುತ್ತದೆ’ ಎಂದಿದ್ದಾರೆ ಮಯೂರಿ.

ಇದನ್ನೂ ಓದಿ: ‘ಮಗನಿಗೆ ಒಳ್ಳೆಯ ಅಪ್ಪ ಇದ್ದಾನೆ’; ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮೌನ ಮುರಿದ ಮಯೂರಿ

‘ಹಾಡು ಕೇಳುವಾಗ, ಸುತ್ತಾಡುವಾಗ ನನಗೆ ನೆನಪು ಕಾಡುತ್ತದೆ. ಹಾಗೆ ಮಾಡದೆ, ಹೀಗೆ ಮಾಡದೆ ಎಂದೆಲ್ಲ ನೆನಪಿಸಿಕೊಳ್ಳುತ್ತೇವೆ. ನಮ್ಮನ್ನು ನಾವು ಮೊದಲು ಕ್ಷಮಿಸಿಕೊಳ್ಳಬೇಕು. ಆಗ ಎಲ್ಲವೂ ಸುಂದರವಾಗಿರುತ್ತದೆ’ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!