Kantara Hindi Collection: ಹಿಂದಿಯಲ್ಲಿ 70 ಕೋಟಿ ರೂಪಾಯಿ ಗಡಿ ಮುಟ್ಟಿದ ‘ಕಾಂತಾರ’ ಕಲೆಕ್ಷನ್

| Updated By: ಮದನ್​ ಕುಮಾರ್​

Updated on: Nov 10, 2022 | 10:56 AM

Kantara | Rishab Shetty: ಉತ್ತರ ಭಾರತದ ಪ್ರೇಕ್ಷಕರಿಗೆ ‘ಕಾಂತಾರ’ ಸಿನಿಮಾ ಸಖತ್​ ಇಷ್ಟ ಆಗಿದೆ. ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ.

Kantara Hindi Collection: ಹಿಂದಿಯಲ್ಲಿ 70 ಕೋಟಿ ರೂಪಾಯಿ ಗಡಿ ಮುಟ್ಟಿದ ‘ಕಾಂತಾರ’ ಕಲೆಕ್ಷನ್
ಕಾಂತಾರ
Follow us on

ಕನ್ನಡದ ‘ಕಾಂತಾರ’ (Kantara) ಸಿನಿಮಾ ದೇಶಾದ್ಯಂತ ಅಬ್ಬರಿಸಿದೆ. ಈ ಚಿತ್ರಕ್ಕೆ ಕೋಟ್ಯಂತರ ಮಂದಿ ಮರುಳಾಗಿದ್ದಾರೆ. ಬಿಡುಗಡೆಯಾಗಿ 41 ದಿನಗಳು ಕಳೆದಿದ್ದರೂ ಈ ಚಿತ್ರದ ಹವಾ ಕಡಿಮೆ ಆಗಿಲ್ಲ. ಬಾಕ್ಸ್​ ಆಫೀಸ್​ ಕಲೆಕ್ಷನ್​ ವಿಚಾರದಲ್ಲಿ ಈ ಸಿನಿಮಾ ಅನೇಕ ದಾಖಲೆಗಳನ್ನು ಮಾಡಿದೆ. ಕನ್ನಡದಿಂದ ಹಿಂದಿಗೆ ಡಬ್​ ಆದ ಈ ಚಿತ್ರ ಉತ್ತರ ಭಾರತದಲ್ಲಿ ಮೋಡಿ ಮಾಡಿದೆ. ಪ್ರತಿ ದಿನ ಕೋಟ್ಯಂತರ ರೂಪಾಯಿ ಗಳಿಸುವ ಮೂಲಕ ಹೊಸ ಮೈಲಿಗಲ್ಲುಗಳನ್ನು ಮುಟ್ಟುತ್ತಿದೆ. ಈವರೆಗೂ ಹಿಂದಿಯಲ್ಲಿ ‘ಕಾಂತಾರ’ ಸಿನಿಮಾದ ಕಲೆಕ್ಷನ್​ (Kantara Hindi Box Office collection) 70 ಕೋಟಿ ರೂಪಾಯಿ ಆಗಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆಯೇ ಸರಿ. ಇದಕ್ಕಾಗಿ ನಟ, ನಿರ್ದೇಶಕ ರಿಷಬ್​ ಶೆಟ್ಟಿ (, Rishab Shetty) ಅವರಿಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ.

ಸೆ.30ರಂದು ಕನ್ನಡದಲ್ಲಿ ‘ಕಾಂತಾರ’ ಬಿಡುಗಡೆ ಆಯಿತು. ಪರಭಾಷೆ ಮಂದಿ ಕೂಡ ಕನ್ನಡ ವರ್ಷನ್​ನಲ್ಲೇ ಸಿನಿಮಾ ನೋಡಿ ವಾವ್​ ಎಂದರು. ಈ ಚಿತ್ರವನ್ನು ಡಬ್​ ಮಾಡಬೇಕು ಎಂಬ ಒತ್ತಾಯ ಕೇಳಿಬಂತು. ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಗೆ ಡಬ್​ ಮಾಡಿ ಬಿಡುಗಡೆ ಮಾಡಲಾಯಿತು. ಮೊದಲ ದಿನವೇ (ಅ.14) ಹಿಂದಿಯಲ್ಲಿ ಈ ಚಿತ್ರಕ್ಕೆ 1.27 ಕೋಟಿ ರೂಪಾಯಿ ಆದಾಯ ಹರಿದುಬಂತು. ಎರಡನೇ ದಿನ 2.75 ಕೋಟಿ ಹಾಗೂ 3ನೇ ದಿನ 3.50 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು.

ಹಿಂದಿಯಲ್ಲಿ 26 ದಿನಗಳಲ್ಲಿ (ನ.8) ‘ಕಾಂತಾರ’ ಚಿತ್ರದ ಒಟ್ಟು ಕಲೆಕ್ಷನ್​ 67 ಕೋಟಿ ರೂಪಾಯಿ ಆಗಿದೆ. ನ.9 ಮತ್ತು ನ.10ರ ಕಲೆಕ್ಷನ್​ ಕೂಡ ಸೇರಿಸಿದರೆ ಒಟ್ಟು 70 ಕೋಟಿ ರೂಪಾಯಿ ಆಗಲಿದೆ. ಆ ಮೂಲಕ ‘ಕಾಂತಾರ’ ಚಿತ್ರ ಹಿಂದಿಯಲ್ಲಿ ಭರ್ಜರಿಯಾಗಿಯೇ ಧೂಳೆಬ್ಬಿಸಿದಂತಾಗಿದೆ. ತೆಲುಗು ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲ ಭಾಷೆಯ ಕಲೆಕ್ಷನ್​ ಸೇರಿ 350 ಕೋಟಿ ರೂಪಾಯಿ ಸಮೀಪಿಸುತ್ತಿದೆ.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

‘ಕಾಂತಾರ’ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿದೆ. ರಿಷಬ್​ ಶೆಟ್ಟಿ ಜೊತೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್​, ಪ್ರಮೋದ್​ ಶೆಟ್ಟಿ, ಮಾನಸಿ ಸುಧೀರ್​, ಕಿಶೋರ್​ ಮುಂತಾದವರು ನಟಿಸಿದ್ದಾರೆ. ಎಲ್ಲರಿಗೂ ಈ ಸಿನಿಮಾದಿಂದ ಜನಪ್ರಿಯತೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ಸ್​ ಸೇಲ್​ ಆಗಿದೆ.

ಚಿತ್ರಮಂದಿರದಲ್ಲಿ ಅಬ್ಬರಿಸಿದ ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿ ಅಂಗಳಕ್ಕೆ ಕಾಲಿಡಲಿದೆ. ಮನೆಯಲ್ಲೇ ಕುಳಿತು ‘ಕಾಂತಾರ’ ನೋಡಿ ಎಂಜಾಯ್​ ಮಾಡಲು ಪ್ರೇಕ್ಷಕರು ಕಾದಿದ್ದಾರೆ. ಒಟಿಟಿ ರಿಲೀಸ್​ ದಿನಾಂಕದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರಬೀಳಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.