ಮತ್ತೊಂದು ತೆಲುಗು ಸಿನಿಮಾ, ರಾಜಮೌಳಿ ಶಿಷ್ಯನ ಸಿನಿಮಾದಲ್ಲಿ ರಿಷಬ್ ಶೆಟ್ಟಿ

Rishab Shetty: ‘ಕಾಂತಾರ’ ಸಿನಿಮಾದಿಂದಾಗಿ ರಿಷಬ್ ಶೆಟ್ಟಿಗೆ ಪರಭಾಷೆಗಳಿಂದ ಅವಕಾಶಗಳು ಅರಸಿ ಬರುತ್ತಿವೆ. ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಅದರ ಜೊತೆಗೆ ಇದೀಗ ಹೊಸದೊಂದು ತೆಲುಗು ಸಿನಿಮಾಕ್ಕೂ ಎಸ್ ಹೇಳಿದ್ದಾರೆ ರಿಷಬ್.

ಮತ್ತೊಂದು ತೆಲುಗು ಸಿನಿಮಾ, ರಾಜಮೌಳಿ ಶಿಷ್ಯನ ಸಿನಿಮಾದಲ್ಲಿ ರಿಷಬ್ ಶೆಟ್ಟಿ
Follow us
ಮಂಜುನಾಥ ಸಿ.
|

Updated on: Nov 27, 2024 | 3:14 PM

‘ಕಾಂತಾರ’ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೆ ಅವಕಾಶಗಳ ಸರಮಾಲೆಯನ್ನೇ ತೊಡಿಸಿದೆ. ‘ಕಾಂತಾರ’ ಸಿನಿಮಾದಿಂದಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿಗೆ ಈಗ ಬೇರೆ ಬೇರೆ ಭಾಷೆಯ ಚಿತ್ರರಂಗಗಳಿಂದ ಹಲವು ಅವಕಾಶಗಳು ಹರಿದು ಬರುತ್ತಿವೆ. ಬಾಲಿವುಡ್​ನ ಸ್ಟಾರ್ ನಿರ್ದೇಶಕ ಅಶುತೋಷ್ ಗೋವರಿಕರ್ ನಿರ್ದೇಶನದ ಸಿನಿಮಾದಲ್ಲಿ ರಿಷಬ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದಾದ ಬಳಿಕ ತೆಲುಗಿನ ‘ಹನುಮ್ಯಾನ್’ ಖ್ಯಾತಿಯ ಪ್ರಶಾಂತ್ ವರ್ಮಾ ಹೊಸ ಸಿನಿಮಾ ‘ಜೈ ಹನುಮಾನ್’ನಲ್ಲಿ ರಿಷಬ್ ನಟಿಸುವುದು ಖಾತ್ರಿಯಾಗಿದ್ದು ಪೋಸ್ಟರ್ ಸಹ ಬಿಡುಗಡೆ ಆಗಿದೆ. ಇದೀಗ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸುವ ಅವಕಾಶ ರಿಷಬ್​ ಶೆಟ್ಟಿಗೆ ಒಲಿದು ಬಂದಿದೆ.

ರಾಜಮೌಳಿ ನಿರ್ದೇಶನದ ‘ಬಾಹುಬಲಿ 1 ಮತ್ತು 2, ‘ಈಗ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅಶ್ವಿನ್ ಗಂಗರಾಜು ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಅಶ್ವಿನ್ ಗಂಗರಾಜು ಈಗಾಗಲೇ ‘ಆಕಾಶವಾಣಿ’ ಹೆಸರಿನ ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಿಷಬ್ ಶೆಟ್ಟಿ ಜೊತೆಗಿನ ಅವರ ಸಿನಿಮಾದ ಘೋಷಣೆ ಕೆಲವೇ ದಿನಗಳಲ್ಲಿ ಆಗಲಿದೆ.

ಈ ಸಿನಿಮಾ ಪೀರಿಯಡ್ ಕತೆಯುಳ್ಳ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಸೋಲೋ ಹೀರೋ ಆಗಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ. ಸಿನಿಮಾದ ಪಾತ್ರ ಇನ್ನಿತರೆ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ. ಕತೆಯಲ್ಲಿರುಗ ಗಟ್ಟಿತನ ಮತ್ತು ಹೊಸತನವನ್ನು ಮೆಚ್ಚಿ ರಿಷಬ್ ಶೆಟ್ಟಿ ಸಿನಿಮಾಕ್ಕೆ ಓಕೆ ಹೇಳಿದ್ದಾರಂತೆ. ಸಿನಿಮಾದ ಇತರೆ ಪಾತ್ರಗಳ ಆಯ್ಕೆ ಚಾಲ್ತಿಯಲ್ಲಿದೆ.

ಇದನ್ನೂ ಓದಿ:ರಿಷಬ್ ಶೆಟ್ಟಿಯ ಭೇಟಿ ಮಾಡಲು ಕರ್ನಾಟಕಕ್ಕೆ ಬಂದ ರಾಣಾ ದಗ್ಗುಬಾಟಿ

ಈ ಸಿನಿಮಾವನ್ನು ತೆಲುಗಿನ ಯಶಸ್ವಿ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಸಿತಾರಾ ಎಂಟರ್ಟೈನ್​ಮೆಂಟ್ ನಿರ್ಮಾಣ ಮಾಡುತ್ತಿದೆ. ಸೂಪರ್ ಹಿಟ್ ತೆಲುಗು ಸಿನಿಮಾಗಳಾದ ‘ಜರ್ಸಿ’, ‘ಭೀಷ್ಮ’, ‘ಟಿಜೆ ಟಿಲ್ಲು’ ಇತ್ತೀಚೆಗೆ ಬಿಡುಗಡೆ ಆದ ‘ಲಕ್ಕಿ ಭಾಸ್ಕರ್’ ಇನ್ನೂ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ.

ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ನಡೆಯುತ್ತಿದೆ. ವಿದೇಶಿ ತಂತ್ರಜ್ಞರ ನೆರವನ್ನು ರಿಷಬ್ ಶೆಟ್ಟಿ ಪಡೆದುಕೊಳ್ಳುತ್ತಿದ್ದಾರೆ. ಇದರ ಬಳಿಕ ತೆಲುಗಿನ ‘ಜೈ ಹನುಮಾನ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ. ಅದರ ಬಳಿಕವಷ್ಟೆ ಅಶ್ವಿನ್ ಗಂಗರಾಜು ನಿರ್ದೇಶನದ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದೇನೆ: ರೇವಣ್ಣ