ಸೋಶಿಯಲ್ ಮೀಡಿಯಾದಲ್ಲಿ ಮೆಂಟಲ್ ರೇಪ್ ಆಗುತ್ತೆ; ಅನುಶ್ರೀ ಕಣ್ಣೀರು

ಅನುಶ್ರೀ ತಮ್ಮ ಬದುಕಿನ ಕಷ್ಟಗಳು, ಆನ್‌ಲೈನ್ ಟೀಕೆಗಳು ಮತ್ತು ಮಹಿಳಾ ಸೆಲೆಬ್ರಿಟಿಗಳು ಎದುರಿಸುವ ಲಿಂಗ ತಾರತಮ್ಯದ ಬಗ್ಗೆ ಆರ್‌ಜೆ ಮಯೂರ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪುರುಷರಿಗೆ ಸಾಧನೆಯಾಗುವ ವಿಷಯಗಳು ಮಹಿಳೆಯರಿಗೆ ಬೇರೆ ರೀತಿ ಕಾಣಿಸುತ್ತವೆ ಎಂಬುದು ಅವರ ಅಭಿಪ್ರಾಯ. ಅಲ್ಲದೆ, ಸೈಕೋಗಳ ಕೆಟ್ಟ ಕಮೆಂಟ್‌ಗಳಿಂದಾಗುವ "ಮಾನಸಿಕ ಅತ್ಯಾಚಾರ"ದ ನೋವನ್ನು ಅವರು ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮೆಂಟಲ್ ರೇಪ್ ಆಗುತ್ತೆ; ಅನುಶ್ರೀ ಕಣ್ಣೀರು
ಅನುಶ್ರೀ
Edited By:

Updated on: Apr 06, 2026 | 8:55 AM

ಆ್ಯಂಕ್ ಅನುಶ್ರೀ (Anushree) ಅವರು ಹಲವು ಕಷ್ಟಗಳನ್ನು ನೋಡಿ ಇಲ್ಲಿವರೆಗೆ ಬಂದಿದ್ದಾರೆ. ಹಲವು ಏರಿಳಿತಗಳನ್ನು ಅವರು ಕಂಡಿದ್ದಾರೆ. ಅವರು ತುಂಬಾನೇ ಕಷ್ಟಪಟ್ಟು ಇಲ್ಲಿವರೆಗೆ ಬಂದಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಇದೆಲ್ಲವನ್ನೂ ಅವರು ಮೆಟ್ಟಿ ನಿಂತಿದ್ದಾರೆ. ಆದಾಗ್ಯೂ ಅವರಲ್ಲಿ ಒಂದು ಬೇಸರ ಇದೆ. ಈ ವಿಷಯವಾಗಿ ಅನುಶ್ರೀ ಅವರು ಮಾತನಾಡಿದ್ದಾರೆ.

ಆರ್ಜೆ ಮಯೂರ್ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು ಇದಕ್ಕೆ , ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಎಂದು ಹೆಸರು ಇಟ್ಟುಕೊಂಡಿದ್ದಾರೆ. ಅನುಶ್ರೀ ಅವರು ಸದಾ ಸಂದರ್ಶನ ಮಾಡುತ್ತಿರುವವರು. ಅವರು ಈಗ ಸಂದರ್ಶನ ನೀಡಿದ್ದಾರೆ. ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಮಹಿಳಾ ಸೆಲೆಬ್ರಿಟಿಗಳು ಅಥವಾ ಚಿತ್ರರಂಗ ಯಾವುದೇ ಹೀರೋಯಿನ್ಗಳು ಇರಲಿ ಅವರು ಹೊಸ ಕಾರು ಖರೀದಿ ಮಾಡಿದರು, ಮನೆ ಖರೀದಿ ಮಾಡಿದರು ಎಂದರೆ ಅದನ್ನು ಬೇರೆಯದೇ ರೀತಿಯಲ್ಲಿ ನೋಡಲಾಗುತ್ತದೆ ಎಂಬುದು ಅನುಶ್ರೀ ಅಭಿಪ್ರಾಯ. ಈ ಅಭಿಪ್ರಾಯವನ್ನು ಅವರು ಓಪನ್ ಆಗಿ ಹೊರಹಾಕಿದರು.

‘ಅನುಶ್ರೀನೇ ಯಾಕೆ ಅಂತ ಅಲ್ಲ, ಮಹಿಳೆಯರೇ ಟಾರ್ಗೆಟ್ ಯಾಕೆ ಅನ್ನೋದು ಪ್ರಶ್ನೆ. ಮಯೂರ 1 ಕೋಟಿ ರೂಪಾಯಿ ಮನೆ ಖರೀದಿ ಮಾಡಿದ್ರು ಅಂದ್ರೆ ಅದು ಸಾಧನೆ. ಆದರೆ, ಅನುಶ್ರೀ ಮನೆ ತೆಗೆದುಕೊಂಡ್ರೆ ಅದು ಸಾಧನೆ ಅಲ್ಲ, ಬೇರೇನೆ’ ಎಂದು ಅನುಶ್ರೀ ಅವರು ವಿವರಿಸಿದರು.

ಫಿಸಿಕಲ್ ರೇಪ್ ಬೇರೆ, ಮೆಂಟಲ್ ರೇಪ್ ಕೂಡ ಇದೆ. ಕೆಲವರು ಸೈಕೋಗಳು ಕೆಟ್ಟ ರೀತಿಯಲ್ಲಿ ಮಾತನಾಡುತ್ತಾರೆ. ಕೆಟ್ಟ ಕೆಟ್ಟ ಕಮೆಂಟ್ಗಳನ್ನು ಹಾಕುತ್ತಾರೆ. ಕರ್ಕೊಂಡು ಹೋಗಿ ಕಾರಪುಡಿ ಹಾಕಬೇಕು ಎಂದೆಲ್ಲ ಹೇಳುತ್ತಾರೆ. ಈ ರೀತಿಯ ಶಬ್ದಗಳು, ಈ ರೀತಿಯ ಪದಗಳು ನೋವು ತರಿಸುತ್ತವೆ ಎಂದು ಅನುಶ್ರೀ ಬೇಸರ ಹೊರಹಾಕಿದರು.

ಇದನ್ನೂ ಓದಿ: ‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ

ಅನುಶ್ರೀ ಅವರು ನೇರ ಮಾತುಗಳಿಗೆ ಖ್ಯಾತಿ ಪಡೆದವರು. ಅವರು ಏನೇ ಆದರೂ ಅದನ್ನು ಓಪನ್ ಆಗಿ ಹೇಳುತ್ತಾರೆ. ತಮಗೆ ಬರುವ ಟೀಕೆ ಬಗ್ಗೆ ಅವರು ಹಲವು ಬಾರಿ ನೇರ ಮಾತುಗಳಲ್ಲಿ ವಿವರಣೆ ನೀಡಿದ್ದು ಇದೆ. ಈಗ ಅವರು ಈಗ ಹೊಸ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:32 am, Mon, 6 April 26

Follow Us