AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ

Anchor Anushree: ಆ್ಯಂಕರ್ ಅನುಶ್ರೀ ಇತ್ತೀಚಿನ ಸಂದರ್ಶನದಲ್ಲಿ ಹೆಣ್ಣುಮಕ್ಕಳಿಗೆ ಆನ್‌ಲೈನ್‌ನಲ್ಲಿ ಎದುರಾಗುವ ಕಿರುಕುಳದ ಬಗ್ಗೆ ಧ್ವನಿ ಎತ್ತಿದ್ದಾರೆ. 'ಡಗಾರ್' ಪದದ ಬಳಕೆಯು ಹೆಣ್ಣುಮಕ್ಕಳಿಗೆ ಎಷ್ಟು ನೋವುಂಟು ಮಾಡುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ಖಾತೆಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಇಂತಹ ಕಮೆಂಟ್‌ಗಳಿಗೆ ಹೆಚ್ಚು ಗುರಿಯಾಗುತ್ತಾರೆ.

‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ
ಅನುಶ್ರೀ
ರಾಜೇಶ್ ದುಗ್ಗುಮನೆ
|

Updated on: Apr 04, 2026 | 11:09 AM

Share

ಆ್ಯಂಕರ್ ಅನುಶ್ರೀ (Anushree) ಅವರು ಹಲವು ವಿಷಯಗಳ ಬಗ್ಗೆ ಓಪನ್ ಆಗಿ ಮಾತನಾಡುತ್ತಾರೆ. ತಮ್ಮ ಬಗ್ಗೆ, ತಾವು ನಡೆಸಿಕೊಡೋ ಶೋ ಬಗ್ಗೆ ಏನಾದರೂ ಆರೋಪ ಕೇಳಿ ಬಂದರೆ ನೇರವಾಗಿ ಉತ್ತರಿಸುತ್ತಾರೆ. ಈ ಬಗ್ಗೆ ಅವರು ಹಿಂದೂ ಮುಂದೂ ಯೋಚಿಸೋದಿಲ್ಲ. ಈಗ ಸಂದರ್ಶನ ಒಂದರಲ್ಲಿ ಅವರು ನೇರ ಮಾತುಗಳಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.ಇದರಲ್ಲಿ ಅವರು ಹೆಣ್ಣು ಮಕ್ಕಳಿಗೆ ಸೈಲೆಂಟ್ ಆಗಿ ನಡೆಯುವ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.

ಅನುಶ್ರೀ ಅವರು ಸಂದರ್ಶನ ನೀಡಿದ್ದಕ್ಕಿಂತ, ಸಂದರ್ಶನ ಮಾಡಿದ್ದೇ ಹೆಚ್ಚು. ಅವರು ಅನೇಕ ಸೆಲೆಬ್ರಿಟಿಗಳನ್ನು ಇಂಟರ್​​ವ್ಯೂ ಮಾಡಿದ್ದಾರೆ. ಈಗ ಅವರನ್ನೇ ಸಂದರ್ಶನ ಮಾಡಲಾಗಿದೆ. ಆರ್​​ಜೆ ಮಯೂರ್ ಅವರು ತಮ್ಮ ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್ ಅಲ್ಲಿ ಅನುಶ್ರೀ ಇಂಟರ್​ವ್ಯೂ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.

ಇದನ್ನೂ ಓದಿ: ಮದುವೆ ವಿಷಯಕ್ಕೆ ವೇದಿಕೆಯಲ್ಲೇ ಅನುಶ್ರೀಗೆ ಕೈ ಮುಗಿದು ಕ್ಷಮೆ ಕೇಳಿದ ಪ್ರೇಮ್

ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರ ಖಾತೆಗೂ ಅಶ್ಲೀಲ ಕಮೆಂಟ್ ಬಂದೇ ಬರುತ್ತವೆ. ಆದರೆ, ಸೆಲೆಬ್ರಿಟಿಗಳು ಇದಕ್ಕೆ ಸಂತ್ರಸ್ತರಾಗುವ ಸಾಧ್ಯತೆ ಹೆಚ್ಚು. ಜನಸಾಮಾನ್ಯರಾದರೆ ಖಾತೆಯನ್ನು ಖಾಸಗಿಯಾಗಿ ಇಟ್ಟುಕೊಂಡು, ಪರಿಚಯ ಇರುವವರನ್ನು ಮಾತ್ರ ಫಾಲೋ ಮಾಡಲು ಅವಕಾಶ ನೀಡಬಹುದು. ಆದರೆ, ಸೆಲೆಬ್ರಿಟಿಗಳು ತಮ್ಮ ಖಾತೆಯನ್ನು ಓಪನ್ ಆಗಿ ಇಡುತ್ತಾರೆ. ಈ ಕಾರಣಕ್ಕೆ ಗೊತ್ತು ಪರಿಚಯ ಇಲ್ಲದವರು ಬಂದು ಅವರ ಖಾತೆಗೆ ಕಮೆಂಟ್ ಹಾಕುತ್ತಾರೆ. ಈ ಬಗ್ಗೆ ಅನುಶ್ರೀ ಅವರು ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಡಗಾರ್ ಎಂಬ ಪದ ಚರ್ಚೆಗೆ ಬಂದಿದೆ. ಡಗಾರ್ ಅಂದರೆ ನಡತೆಗೆಟ್ಟವಳು ಎಂಬ ಅರ್ಥ ನೀಡುತ್ತದೆ. ಈ ಪದ ಹೇಳಲು ಮಯೂರ್ ಅವರು ಮುಜುಗರ ಮಾಡಿಕೊಂಡಿದರು. ಆಗ ಮಾತನಾಡಿದ ಅನುಶ್ರೀ, ‘ನೋಡಿ ನಿಮಗೆ ಅದನ್ನು ಹೇಳಲೇ ಅಷ್ಟು ಮುಜುಗರ ಆಗುತ್ತಿದೆ ಎಂದರೆ ನಮಗೆ ಹಾಗೆ ಕರೆದಾಗ ಹೇಗನಿಸಬೇಡಿ’ ಎಂದು ಅನುಶ್ರೀ ಕೇಳಿದರು. ಅದನ್ನು ಹೇಳುವಾಗ ಅವರ ಮುಖದಲ್ಲಿ ಬೇಸರ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ