ಫ್ಯಾನ್ಸ್​ ಆಸೆಗೆ ತಣ್ಣೀರು ಎರಚಿದ ‘ಡಿ ಬಾಸ್​’! ಅದರ ಹಿಂದಿನ ಉದ್ದೇಶಕ್ಕೆ ಭೇಷ್​ ಎನ್ನಲೇಬೇಕು

‘ರಾಬರ್ಟ್​’​ ಸಿನಿಮಾವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಕಟೌಟ್​ ವಿಚಾರದಲ್ಲಿ ಕೆಲವು ಫ್ಯಾನ್ಸ್​ಗೆ ನಿರಾಸೆ ಆಗಿದೆ.

ಫ್ಯಾನ್ಸ್​ ಆಸೆಗೆ ತಣ್ಣೀರು ಎರಚಿದ ‘ಡಿ ಬಾಸ್​’! ಅದರ ಹಿಂದಿನ ಉದ್ದೇಶಕ್ಕೆ ಭೇಷ್​ ಎನ್ನಲೇಬೇಕು
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​
Edited By:

Updated on: Mar 10, 2021 | 4:47 PM

‘ಚಾಲೆಂಜಿಂಗ್ ಸ್ಟಾರ್’ ದರ್ಶನ್​ ಅವರು ಬಹುದಿನಗಳ ಬಳಿಕ ಬೆಳ್ಳಿತೆರೆ ಮೇಲೆ ಅಭಿಮಾನಿಗಳಿಗೆ ದರ್ಶನ ನೀಡಲು ಬರುತ್ತಿರುವುದರಿಂದ ಸಹಜವಾಗಿಯೇ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಹಲವು ಕಡೆಗಳಲ್ಲಿ ಕಟೌಟ್​ಗಳು ತಲೆ ಎತ್ತಿವೆ. ಆದರೆ ಫ್ಯಾನ್ಸ್​ ಮಾಡಿಕೊಂಡಿದ್ದ ಒಂದು ಭರ್ಜರಿ ಪ್ಲ್ಯಾನ್​ಗೆ ‘ಡಿ ಬಾಸ್’​ ನೋ ಎಂದಿದ್ದಾರೆ.

ಬೆಂಗಳೂರಿನ ಅನೇಕ ಚಿತ್ರಮಂದಿರಗಳ ಎದುರು ದರ್ಶನ್​ ಅವರ ಬೃಹತ್​ ಕಟೌಟ್​ಗಳು ರಾರಾಜಿಸುತ್ತಿವೆ. ಅದೇ ರೀತಿ ಕೆ.ಆರ್​. ಪುರದ ಕೃಷ್ಣ ಥಿಯೇಟರ್​ ಎದುರಿನಲ್ಲಿ 201 ಅಡಿ ಎತ್ತರದ ಕಟೌಟ್​ ನಿಲ್ಲಿಸಲು ಫ್ಯಾನ್ಸ್​ ಪ್ಲ್ಯಾನ್​ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಅದಕ್ಕೆ ಹೆಲಿಕಾಪ್ಟರ್​ ಮೂಲಕ ಹೂವಿನ ಮಳೆ ಸುರಿಸಬೇಕು ಎಂಬುದು ಕೂಡ ಅಭಿಮಾನಿಗಳ ಆಸೆ ಆಗಿತ್ತು. ಆದರೆ ಅದಕ್ಕೆ ದರ್ಶನ್ ಅವಕಾಶ ನೀಡಿಲ್ಲ! ಅದು ಕೆಲವು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಈ ಬಗ್ಗೆ ಉಮಾಪತಿ ಶ್ರೀನಿವಾಸ್​ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ದರ್ಶನ್​ ವೈಭವೀಕರಣವನ್ನು ಇಷ್ಟಪಡುತ್ತಾರೆ ಅಂತ ಜನರು ತಿಳಿದುಕೊಂಡಿದ್ದಾರೆ. ಆದರೆ ಅದು ನಿಜವಲ್ಲ. ಬೇರೆ ಕಲಾವಿದರಿಗೋಸ್ಕರ ದರ್ಶನ್​ ಏನು ಬೇಕಾದರೂ ಮಾಡಿಸುತ್ತಾರೆ. ಆದರೆ ತಮ್ಮ ವಿಚಾರದಲ್ಲಿ ಆಡಂಬರ ಬಯಸುವುದಿಲ್ಲ. ಅದೇ ದುಡ್ಡನ್ನು ಬಡವರಿಗೆ ನೀಡಿ ಅಂತ ದರ್ಶನ್​ ಹೇಳುತ್ತಾರೆ’ ಎಂಬುದು ಉಮಾಪತಿ ಶ್ರೀನಿವಾಸ್​ ಮಾತುಗಳು.

ದರ್ಶನ್​ರನ್ನು ಮೆಚ್ಚಿಸಬೇಕು ಅಂತ ಅಭಿಮಾನಿಗಳು ತಮ್ಮ ದುಡ್ಡು ಕರ್ಚು ಮಾಡುತ್ತಾರೆ. ಆದರೆ ಅದು ದರ್ಶನ್​ಗೆ ಇಷ್ಟ ಆಗುವುದಿಲ್ಲ. ಅಭಿಮಾನದ ಹೆಸರಿನಲ್ಲಿ ಹಾಗೆಲ್ಲ ಹಣ ವ್ಯಯ ಮಾಡಿಸಲು ದರ್ಶನ್​ ಬಿಡುವುದಿಲ್ಲ. ಅದನ್ನು ಅವರು ಒಪ್ಪುವುದೂ ಇಲ್ಲ. ಅದರ ಬದಲು ಅಭಿಮಾನಿಗಳು ಅವರವರ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಂಡರೆ ಸಾಕು ಎಂಬುದು ದರ್ಶನ್​ ಉದ್ದೇಶ.

ಇದನ್ನೂ ಓದಿ: ದರ್ಶನ್​ಗೆ ಸ್ವಿಮ್ಮಿಂಗ್​ ಬರಲ್ಲ; ಆದರೂ ರಾಬರ್ಟ್​ಗಾಗಿ ದೊಡ್ಡ ರಿಸ್ಕ್​ ತೆಗೆದುಕೊಂಡ ‘ಚಾಲೆಂಜಿಂಗ್​ ಸ್ಟಾರ್​’!

‘ರಾಬರ್ಟ್​’ನಲ್ಲಿ ದರ್ಶನ್​ ಖಡಕ್​ ಆಗಿ ಹೇಳಿದ ‘ಏ ತುಕಾಲಿ…’ ಡೈಲಾಗ್​ನ ಹಿಂದಿದೆ ಇಂಟರೆಸ್ಟಿಂಗ್​ ವಿಷ್ಯ!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us