ರಾಕಿಂಗ್ ಸ್ಟಾರ್ ಎಂದೇ ಹೆಸರು ಪಡೆದು ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನೇ ಬಾಚಿಕೊಂಡ ಯಶ್ ಸ್ಯಾಂಡಲ್ವುಡ್ಗೆ ಪ್ರವೇಶಿಸಿ 13 ವರ್ಷಗಳಾಗಿದೆ. ಈ ಖುಷಿಯಲ್ಲಿ ಅಭಿಮಾನಿಗಳೆಲ್ಲ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಡಿಫರೆಂಟ್ ಲುಕ್ನ ಫೋಟೋದ ಜತೆಗೆ ಕಾಮನ್ ಡಿಪಿ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.
‘13ಇಯರ್ಸ್ಆಫ್ಯಶ್ಯಿಸಂಸಿಡಿಪಿ’ (#13YearsOfYASHismCDP) ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಫೋಟೋ ಹರಿಬಿಡಲಾಗಿದೆ. ಕೇವಲ ಕನ್ನಡದ ಅಭಿಮಾನಿಗಳೊಂದೇ ಅಲ್ಲದೇ ತೆಲುಗು, ತಮಿಳು ಚಿತ್ರದ ಅಭಿಮಾನಿಗಳು ಸಹ ಹ್ಯಾಶ್ಟ್ಯಾಗ್ನೊಂದಿಗೆ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳೆಲ್ಲ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ರಾಕಿಂಗ್ ಸ್ಟಾರ್ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಕಾಮನ್ ಡೀಪಿ ಹಂಚಿಕೊಳ್ಳುವ ಮೂಲಕ ಶುಭ ಹಾರೈಕೆಗಳು ಬಂದಿವೆ. ಅಭಿಮಾನಿಗಳೆಲ್ಲ ತಮಿಗಿಷ್ಟವಾದ ಯಶ್ ಸಕತ್ ಸ್ಟೈಲ್ ಫೋಟೋಗಳನ್ನು ಸಹ ಹಂಚಿಕೊಂಡು ಹ್ಯಾಶ್ಟ್ಯಾಗ್ನೊಂದಿಗೆ ಸಂಭ್ರಮಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯಶ್ಯಿಸಂ ಟ್ರೆಂಡ್ದೇ ಹವಾ.
ಇನ್ನು, ಕೆಜಿಎಫ್ 2 ಚಿತ್ರೀಕರಣ ಇನ್ನೇನು ಸ್ವಲ್ಪ ಬಾಕಿ ಇದೆ. ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಸದ್ಯದಲ್ಲೇ ಶೂಟಿಂಗ್ ಮಾಡುವುದಾಗಿ ಹೇಳಿದ್ದರು. ಇನ್ನೇನು ಕೆಜಿಎಫ್ 2 ಚಿತ್ರ ಕೂಡ ತೆರೆಕಾಣಲಿದ್ದು ಅಭಿಮಾನಿಗಳೆಲ್ಲ ಚಿತ್ರ ತೆರೆಕಾಣಲು ಕಾತುರದಿಂದ ಕಾಯುತ್ತಿದ್ದಾರೆ.
Here’s an awesome common DP to celebrate 13 years of #YASHism. #13YearsOfYASHismCDP @TheNameIsYash #KGFChapter2 #YashBOSS pic.twitter.com/wP1SAoebl7
— Manobala Vijayabalan (@ManobalaV) July 17, 2021
The most talked about young pan-Indian superstar?#13YearsOfYASHismCDP @TheNameIsYash #KGFChapter2 #YashBOSS pic.twitter.com/82MOCeVCTJ
— Kaushik LM (@LMKMovieManiac) July 17, 2021
ಇದನ್ನೂ ಓದಿ:
ಮುಖಾಮುಖಿ ಆಗಲಿದ್ದಾರಾ ಯಶ್-ಅಲ್ಲು ಅರ್ಜುನ್? ಪ್ಯಾನ್ ಇಂಡಿಯಾ ಸ್ಟಾರ್ಗಳ ಹೊಸ ಹಣಾಹಣಿ
KGF Chapter 2: ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್ ಬಗ್ಗೆ ಮಹತ್ವದ ಘೋಷಣೆ ಮಾಡಿದ ಪ್ರಶಾಂತ್ ನೀಲ್
Published On - 12:16 pm, Mon, 19 July 21