ಸ್ಪುರದ್ರೂಪಿ ಯಶ್ ಅನ್ನು ರಾವಣ ಪಾತ್ರಕ್ಕೆ ಆರಿಸಿದ್ದೇಕೆ? ಸದ್ಗುರು ಪ್ರಶ್ನೆ
Yash and Sadhguru: ಸದ್ಗುರು ಮತ್ತು ಯಶ್ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಯಶ್ ನಟಿಸುತ್ತಿರುವ ‘ರಾಮಾಯಣ’ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಸದ್ಗುರು ಅವರೊಂದಿಗೆ ಸಂವಾದ ನಡೆಸಿದರು. ಈ ವೇಳೆ, ಯಶ್ ಅಂಥಹಾ ಸ್ಪುರದ್ರೂಪಿಯನ್ನು ರಾವಣನ ಪಾತ್ರಕ್ಕೆ ಏಕೆ ಆಯ್ಕೆ ಮಾಡಿಕೊಂಡಿರಿ ಎಂದು ಸದ್ಗುರು ಪ್ರಶ್ನೆ ಮಾಡಿದರು. ಅದಕ್ಕೆ ನಿರ್ಮಾಪಕರು ನೀಡಿದ ಉತ್ತರವೇನು?

‘ರಾಮಾಯಣ’ (Ramayana) ಸಿನಿಮಾ ಭಾರತದ ಅತ್ಯಂತ ದೊಡ್ಡ ಬಜೆಟ್ನ ಸಿನಿಮಾ ಆಗಿದೆ. ಸುಮಾರು ಎರಡು ವರ್ಷಗಳಿಂದಲೂ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆಯಾಗಿ ನಟಿಸಿದ್ದಾರೆ. ನಟ ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅನ್ನು ಹಾಲಿವುಡ್ನನ ಟಾಪ್ ಸ್ಟುಡಿಯೋದ ಮಾಲೀಕ ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಯಶ್ ಅವರಿಗೆ ಆಪ್ತರೂ ಆಗಿರುವ ಸದ್ಗುರು ಅವರು ಯಶ್ ಅವರನ್ನು ರಾವಣನ ಪಾತ್ರಕ್ಕೆ ಆಯ್ಕೆ ಮಾಡಿರುವ ಬಗ್ಗೆ ತಕರಾರು ವ್ಯಕ್ತಪಡಿಸಿದ್ದಾರೆ.
ಸದ್ಗುರು ಅವರು ಜನಪ್ರಿಯ ವ್ಯಕ್ತಿಗಳೊಡನೆ ಸಂವಾದ ನಡೆಸುತ್ತಿರುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ. ಇದೀಗ ‘ರಾಮಾಯಣ’ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಸಂವಾದ ನಡೆಸಿದರು. ಈ ವೇಳೆ ಸದ್ಗುರು ಅವರು ಯಶ್ ಅವರನ್ನು ರಾವಣನ ಪಾತ್ರಕ್ಕೆ ಆಯ್ಕೆ ಮಾಡಿರುವ ಬಗ್ಗೆ ತಕರಾರು ವ್ಯಕ್ತಪಡಿಸಿದರು.
‘ಯಶ್ ನನಗೆ ಚೆನ್ನಾಗಿ ಪರಿಚಿತರು, ಅವರು ಅದು ಹೇಗೆ ರಾವಣನ ಪಾತ್ರ ಒಪ್ಪಿದರು ಗೊತ್ತಿಲ್ಲ. ಅವರು ಅದ್ಭುತ ವ್ಯಕ್ತಿ. ಯಶ್ ಬಹಳ ಸ್ಪುರದ್ರೂಪಿ ನಟ. ಅವರನ್ನು ರಾವಣನ ಪಾತ್ರಕ್ಕೆ ಹೇಗೆ ಆಯ್ಕೆ ಮಾಡಿದಿರಿ?’ ಎಂದು ಸದ್ಗುರು ನಮಿತ್ ಅವರನ್ನು ಪ್ರಶ್ನೆ ಮಾಡಿದರು. ಸದ್ಗುರು ಪ್ರಶ್ನೆಗೆ ಉತ್ತರಿಸಿದ ನಮಿತ್ ‘ನಾವು ಸೂಪರ್ ಸ್ಟಾರ್ ಲೆವೆಲ್ನ ನಟನೇ ರಾವಣನ ಪಾತ್ರದಲ್ಲಿ ನಟಿಸಬೇಕು ಎಂದು ಹುಡುಕುತ್ತಿದ್ದೆವು, ಯಶ್ ಹ್ಯಾಂಡ್ಸಮ್ ನಟ ಜೊತೆಗೆ ಅವರು ಅದ್ಭುತವಾದ ಪ್ರತಿಭೆಯುಳ್ಳವರೂ ಸಹ ಹೌದು. ರಾವಣ ತನ್ನಲ್ಲಿ ಹಲವು ಭಿನ್ನ ವ್ಯಕ್ತಿತ್ವಗಳನ್ನು ಹೊಂದಿದ್ದವ. ಆ ಪಾತ್ರ ಮಾಡಲು ಯಶ್ ಸಹ ಉತ್ಸುಕರಾಗಿದ್ದರು’ ಎಂದಿದ್ದಾರೆ.
ಇದನ್ನೂ ಓದಿ:‘ರಾಮಾಯಣ’ ಚಿತ್ರದ ಸಂಭಾವನೆಯನ್ನು ಕ್ಯಾನ್ಸರ್ ಮಕ್ಕಳ ಚಿಕಿತ್ಸೆಗೆ ನೀಡಿದ ವಿವೇಕ್ ಒಬೆರಾಯ್
ನಮಿತ್ ಅವರ ಉತ್ತರದಿಂದ ಸಂತುಷ್ಟರಾಗದ ಸದ್ಗುರು, ‘ಸಾಮಾನ್ಯವಾಗಿ ವಿಲನ್ಗಳು ಮೊಂಡು ಮೂಗು ಹೊಂದಿದವರು, ಕುರುಚಲು ಮುಖ ಹೊಂದಿದವರು ಆಗಿರುತ್ತಾರೆ. ಆದರೆ ನೀವು ಚೂಪಾದ ಮೂಗು ಹೊಂದಿದ ಸ್ಮಾರ್ಟ್ ಆಗಿರುವ ಯಶ್ ಅನ್ನು ಆಯ್ಕೆ ಮಾಡಿದ್ದೀರಿ’ ಎಂದು ತಮ್ಮದೇ ಶೈಲಿಯಲ್ಲಿ ನಕ್ಕರು.
ಬಳಿಕ ರಣ್ಬೀರ್ ಕಪೂರ್ ಅವರು ರಾಮನ ಪಾತ್ರ ನಿರ್ವಹಿಸುತ್ತಿರುವ ಬಗ್ಗೆ ಕೆಲವರು ಎತ್ತಿರುವ ಆಕ್ಷೇಪದ ಬಗ್ಗೆ ಮಾತನಾಡಿರುವ ಸದ್ಗುರು, ‘ಯಾರೋ ನಟ ಹಿಂದೆ ಯಾವುದೋ ಪಾತ್ರಗಳಲ್ಲಿ ನಟಿಸಿದ್ದಾನೆ ಎಂದ ಮಾತ್ರಕ್ಕೆ ಈಗ ರಾಮನ ಪಾತ್ರದಲ್ಲಿ ನಟಿಸಬಾರದು ಎಂಬುದು ಸರಿಯಲ್ಲ. ಆತ ನಟನಷ್ಟೆ, ನಾಳೆ ಆತ ಬೇರೆ ಯಾವುದೋ ಸಿನಿಮಾನಲ್ಲಿ ರಾವಣನ ಪಾತ್ರದಲ್ಲೂ ನಟಿಸಬಹುದು’ ಎಂದಿದ್ದಾರೆ ಸದ್ಗುರು.
‘ರಾಮಾಯಣ’ ಸಿನಿಮಾನಲ್ಲಿ ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಯಶ್ ಸಹ ನಿರ್ಮಾಪಕರೂ ಸಹ ಆಗಿದ್ದಾರೆ. ‘ರಾಮಾಯಣ’ ಸಿನಿಮಾಕ್ಕೆ ಎಆರ್ ರೆಹಮಾನ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಹಾನ್ಸ್ ಜೈಮರ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿರುವುದು ನಿತೀಶ್ ತಿವಾರಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:08 am, Sat, 1 November 25




