ಸತ್ಯಜಿತ್ ಪುತ್ರ ಹೇಳಿರುವ ಪ್ರಕಾರ ಪ್ರಸ್ತುತ ಅವರ ಪರಿಸ್ಥಿತಿ ಗಂಭೀರವಾಗಿದೆ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಲೇ ಇದೆ. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಹಲವು ದಿನಗಳಿಂದ ಸತ್ಯಜಿತ್ಗೆ ಆರೋಗ್ಯ ಕೈಕೊಟ್ಟಿದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಕೂಡ ಎದುರಾಗಿದೆ. ಒಂದು ಕಾಲದಲ್ಲಿ ಅವರು ಬಹು ಬೇಡಿಕೆಯ ಫೋಷಕ ನಟನಾಗಿದ್ದರು. ನೂರಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
1986ರಿಂದಲೂ ಸತ್ಯಜಿತ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅಪ್ಪು, ಅರಸು, ಅಭಿ, ಆಪ್ತಮಿತ್ರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಹಲವು ಬಗೆಯ ಪಾತ್ರಗಳಿಗೆ ಅವರು ಬಣ್ಣ ಹಚ್ಚಿದ್ದಾರೆ. ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಿದ್ದ ಸತ್ಯಜಿತ್ ಅವರಿಗೆ ಗ್ಯಾಂಗ್ರಿನ್ ಕಾಣಿಸಿಕೊಂಡ ಬಳಿಕ ಬೇಡಿಕೆ ಕಡಿಮೆ ಆಯಿತು. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ನಟನೆ ‘ಸೆಕೆಂಡ್ ಹಾಫ್’ ಚಿತ್ರದ ಬಳಿಕ ಬೇರೆ ಯಾವುದೇ ಸಿನಿಮಾದಲ್ಲಿ ಸತ್ಯಜಿತ್ ಕಾಣಿಸಿಕೊಂಡಿಲ್ಲ.
ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ಗಾಗಿ ಪುಟ ರೀಫ್ರೆಶ್ ಮಾಡಿ…
ಇದನ್ನೂ ಓದಿ:
ಸಾಯಿ ಧರಮ್ ತೇಜ್ ಬೈಕ್ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ
ಕಾಲು ಜಾರಿ ಬಿದ್ದು ಗಾಯಗೊಂಡ ಹಿರಿಯ ನಟಿ ಲೀಲಾವತಿ; 1 ತಿಂಗಳು ವಿಶ್ರಾಂತಿಗೆ ಸೂಚನೆ