Sheshagiri Basavaraj: ವಂಚನೆ, ಹಲ್ಲೆ, ಅತ್ಯಾಚಾರದ ಆರೋಪ; ಸ್ಯಾಂಡಲ್​ವುಡ್ ಖಳನಟನ ಬಂಧನ

Sandalwood: ವಂಚನೆ, ಅತ್ಯಾಚಾರ ಹಾಗೂ ಹಲ್ಲೆಯ ಆರೋಪದಡಿ ಸ್ಯಾಂಡಲ್​ವುಡ್ ನಟ ಶೇಷಗಿರಿ ಬಸವರಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ. ಡಾರ್ಕ್, ಸಸ್ಪೆನ್ಸ್, ಕಿಲಾಡಿಗಳು, ಆಶಿಕಿ-3 ಸಿನಿಮಾಗಳಲ್ಲಿ ನಟಿಸಿದ್ದ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.

Sheshagiri Basavaraj: ವಂಚನೆ, ಹಲ್ಲೆ, ಅತ್ಯಾಚಾರದ ಆರೋಪ; ಸ್ಯಾಂಡಲ್​ವುಡ್ ಖಳನಟನ ಬಂಧನ
ನಟ ಶೇಷಗಿರಿ ಬಸವರಾಜ್
Updated By: shivaprasad.hs

Updated on: Oct 26, 2021 | 5:07 PM

ಸ್ಯಾಂಡಲ್‌ವುಡ್ ನಟ ಶೇಷ್ ಅಲಿಯಾಸ್ ಶೇಷಗಿರಿಯನ್ನು ವಂಚನೆ, ಅತ್ಯಾಚಾರ, ಹಲ್ಲೆ ಆರೋಪದಡಿ ಬಂಧಿಸಲಾಗಿದೆ. ಬೆಂಗಳೂರಿನ ಸುಬ್ರಹ್ಮಣ್ಯ ಠಾಣೆಯ ಪೊಲೀಸರು, ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ಹಲವು ದಿನಗಳಿಂದ ಶೇಷಗಿರಿ ತಲೆಮರೆಸಿಕೊಂಡಿದ್ದ. ಬ್ಯಾಂಕ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ನಂತರ ಹಣ ಪಡೆದುಕೊಂಡು ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಯುವತಿ ನೀಡಿರುವ ದೂರಿನಂತೆ ನಟ ಶೇಷಗಿರಿ ಬಸವರಾಜ್​ರನ್ನು ಬಂಧಿಸಲಾಗಿದೆ. ಈ ಹಿಂದೆ ಬ್ಯಾಂಕ್ ಉದ್ಯೋಗಿ ಅಗಿದ್ದ ಬಂಧಿತ ಆರೋಪಿ, ಬ್ಯಾಂಕ್ ಕೆಲಸ ಬಿಟ್ಟು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದ. ಡಾರ್ಕ್, ಸಸ್ಪೆನ್ಸ್, ಕಿಲಾಡಿಗಳು, ಆಶಿಕಿ-3 ಸಿನಿಮಾಗಳಲ್ಲಿ ನಟಿಸಿದ್ದ. ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಸ್ಯಾಂಡಲ್​ವುಡ್ ನಟಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪ; ಚಂದನ್ ಪ್ರಸಾದ್ ಬಂಧನ
ಸ್ಯಾಂಡಲ್​ವುಡ್ ನಟಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರೋ ಆರೋಪ ಹಿನ್ನಲೆಯಲ್ಲಿ ಆರೋಪಿ ಚಂದನ್ ಪ್ರಸಾದ್​​ನನ್ನು ಬಂಧಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಗೆ ನಟಿ ದೂರು ನೀಡಿದ್ದರು. ಅಕ್ಟೋಬರ್ 19ನೇ ರಂದು ಘಟನೆ ನಡೆದಿತ್ತು. ನಿಖಿಲ್ ಕುಮಾರಸ್ವಾಮಿ ರೈಡರ್ ಸಿನಿಮಾದಲ್ಲಿ ಸಹ ನಟಿಯಾಗಿ ನಟಿಸಿರುವ ಅನುಷಾ, ಚಂದನ್ ಪ್ರಸಾದ್ ಎಂಬ ವ್ಯಕ್ತಿಯಿಂದ ಹಲ್ಲೆಯಾಗಿದೆ ಎಂದು ಆರೋಪಿಸಿದ್ದರು. 2015ರಲ್ಲಿ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸ್ತಿದ್ದ ಚಂದನ್ ಪ್ರಸಾದ್ ಮತ್ತು ಅನುಷಾ, ಎರಡು ತಿಂಗಳು ಪ್ರೀತಿಯ ನಂತರ ಇಬ್ಬರಿಗೂ ಬ್ರೇಕ್ ಅಪ್ ಆಗಿತ್ತು. ಬ್ರೇಕ್ ಅಪ್ ಆದ ನಂತರ ನಟಿ ಅನುಷಾಗೆ ಚಂದನ್ ಪ್ರಸಾದ್‌ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:

Murder: ಪ್ರೀತಿಸಲು ಒಪ್ಪದ ವಿವಾಹಿತ ಮಹಿಳೆಯನ್ನು ಕೊಂದು, ಹೆಣವನ್ನು ತಬ್ಬಿ ಮಲಗಿದ ಪಾಗಲ್ ಪ್ರೇಮಿ!

Kareena Kapoor: ಮತ್ತೆ ವಿಮಾನ ಹತ್ತಿದ ಕರೀನಾ ಕುಟುಂಬ; ಮೂರು ತಿಂಗಳ ಅವಧಿಯಲ್ಲಿ ಇದು ಎಷ್ಟನೇ ಪ್ರವಾಸ?