2025ರ ಆರಂಭದಲ್ಲಿ ಚಂದನವನದಲ್ಲಿ ಸಾಲು-ಸಾಲು ಕಾರ್ಯಗಳು ನಡೆಯುತ್ತಿವೆ. ಒಂದರ ಹಿಂದೊಂದರಂತೆ ಸೆಲೆಬ್ರಿಟಿಗಳ ವಿವಾಹ ಮಹೋತ್ಸವಗಳು ನಡೆಯುತ್ತಿವೆ. ಈ ವರ್ಷದ ಆರಂಭದಲ್ಲಿ ಕೆಲವು ಸೆಲೆಬ್ರಿಟಿಗಳು ಪೋಷಕರಾಗಿದ್ದಾರೆ. ಶ್ರುತಿ ಸೇರಿದಂತೆ ಇನ್ನೂ ಕೆಲವರು ಹೊಸ ಮನೆಗಳನ್ನು ಖರೀದಿ ಮಾಡಿದ್ದಾರೆ ಅಥವಾ ಕಟ್ಟಿಸಿದ್ದಾರೆ. ಇದೀಗ ಡಾಲಿ ಧನಂಜಯ್ ಸೇರಿದಂತೆ ಇನ್ನೂ ಕೆಲವರು ಮದುವೆ ಆಗುತ್ತಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ವುಡ್ನಲ್ಲಿ ಸಾಲು-ಸಾಲು ಶುಭ ಕಾರ್ಯ ನಡೆಯುತ್ತಿದೆ.
ನಟರಾಕ್ಷಸ ಎಂದೇ ಹೆಸರುವಾಸಿ ಆಗಿರುವ ಡಾಲಿ ಧನಂಜಯ್ ಅವರ ಮದುವೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಡಾಲಿ ಧನಂಜಯ್ ಅವರು ವೈದ್ಯೆ ಧನ್ಯತಾ ಅವರನ್ನು ವಿವಾಹವಾಗಲಿದ್ದು ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ರಾಜ್ಯದ ಪ್ರಮುಖ ಮಠಗಳ ಸ್ವಾಮೀಜಿಗಳು ಸಿನಿಮಾ, ರಾಜಕೀಯ ಗಣ್ಯರುಗಳಿಗೆ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡಿದ್ದಾರೆ. ಇವರ ವಿವಾಹ ಫೆಬ್ರವರಿ ಹದಿನಾರರಂದು ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ.
ರಕ್ಷಿತಾ ಅವರ ಸಹೋದರ, ‘ಏಕ್ ಲವ್ ಯಾ’ ಸಿನಿಮಾದ ನಾಯಕ ರಾಣಾ ಅವರ ವಿವಾಹವೂ ಫೆಬ್ರವರಿಯಲ್ಲಿಯೇ ನಡೆಯಲಿದೆ. ನಿರ್ದೇಶಕ ಪ್ರೇಮ್ ಮತ್ತು ರಕ್ಷಿತಾ ಅವರುಗಳು ಮುಂದೆ ನಿಂತು ರಾಣಾ ಮದುವೆ ಮಾಡುತ್ತಿದ್ದಾರೆ. ಇವರೇ ಮುಂದೆ ನಿಂತು ಸಿನಿಮಾ ಮತ್ತು ರಾಜಕೀಯ ಗಣ್ಯರಿಗೆ ವಿವಾಹ ಆಮಂತ್ರಣ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ರಾಣಾ ವಿವಾಹ ಫೆಬ್ರವರಿ 7 ರಂದು ನಡೆಯಲಿದೆ.
ಕನ್ನಡ ಚಿತ್ರರಂಗದ ಹಿರಿಯ ನಟಿ, ರಾಜಕಾರಣಿಯೂ ಆಗಿರುವ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರ ವಿವಾಹ ಸಹ ಫೆಬ್ರವರಿ 7 ರಂದೇ ನಡೆಯಲಿದೆ. ಜಯಮಾಲಾ ಅವರು ಸಹ ಪುತ್ರಿಯ ವಿವಾಹ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ರಾಮಚಂದ್ರ ರಾವ್ ಪುತ್ರ ರುಷಬ್ ಅನ್ನು ಸೌಂದರ್ಯ ಮದುವೆ ಆಗಲಿದ್ದಾರೆ. ಇಬ್ಬರ ವಿವಾಹ ಪ್ಯಾಲೆಸ್ ಗ್ರೌಂಡ್ನಲ್ಲಿ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:20 pm, Sun, 19 January 25