ಸಂಜನಾ ಗಲ್ರಾನಿ ಬೆನ್ನಿನ ಮೇಲೆ ಪತಿಯ ಟ್ಯಾಟೂ; 15 ವರ್ಷಗಳ ನಂತರ ಬಹಿರಂಗ ಮಾಡಿದ ನಟಿ

ನಾನು ಟ್ಯಾಟೂವನ್ನು ಅನಾವರಣ ಮಾಡುತ್ತಿದ್ದೇನೆ. ಇದು ಹೆಚ್ಚು ವೈಯಕ್ತಿಕ ಮತ್ತು ಹೃದಯಕ್ಕೆ ಹತ್ತಿರವಾದುದ್ದು. ಇದು ನನ್ನ ಜೀವನದ ಪ್ರೀತಿಯ ಟ್ಯಾಟೂ ಎಂದು ಸಂಜನಾ ಪೋಸ್ಟ್ ಆರಂಭಿಸಿದ್ದಾರೆ.

ಸಂಜನಾ ಗಲ್ರಾನಿ ಬೆನ್ನಿನ ಮೇಲೆ ಪತಿಯ ಟ್ಯಾಟೂ; 15 ವರ್ಷಗಳ ನಂತರ ಬಹಿರಂಗ ಮಾಡಿದ ನಟಿ
ಸಂಜನಾ ಗಲ್ರಾನಿ
Edited By:

Updated on: Jul 08, 2021 | 9:43 PM

ನಟಿ ಸಂಜನಾ ಗಲ್ರಾನಿ ವೈದ್ಯ ಆಜೀಜ್​ ಅವರನ್ನು ವಿವಾಹವಾಗಿದ್ದಾರೆ. ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಈಗ ಬೆನ್ನಿನ ಭಾಗದಲ್ಲಿ ಅವರು  ಹಾಕಿಸಿಕೊಂಡ ಹಚ್ಚೆಯ ಫೋಟೋವನ್ನು ಸಂಜನಾ ಅನಾವರಣ ಮಾಡಿದ್ದಾರೆ. ಅಲ್ಲದೆ, ಈ ವಿಶೇಷ ಟ್ಯಾಟೂ ಎಷ್ಟು ಮುಖ್ಯ ಅನ್ನೋದನ್ನು ಸಂಜನಾ ಬರೆದುಕೊಂಡಿದ್ದಾರೆ. 

‘ನಾನು ಈ ಟ್ಯಾಟೂವನ್ನು ಅನಾವರಣ ಮಾಡುತ್ತಿದ್ದೇನೆ. ಇದು ಹೆಚ್ಚು ವೈಯಕ್ತಿಕ ಮತ್ತು ಹೃದಯಕ್ಕೆ ಹತ್ತಿರವಾದುದ್ದು. ಇದು ನನ್ನ ಜೀವನದ ಪ್ರೀತಿಯ ಟ್ಯಾಟೂ. ಅನಗತ್ಯ ಗಾಸಿಪ್​ನಿಂದ ದೂರವಿರೋಕೆ ನಾನು ಇಷ್ಟು ವರ್ಷಗಳ ಕಾಲ ಇದನ್ನು ಮುಚ್ಚಿಟ್ಟಿದ್ದೆ. ನಾವು ಈಗ ಅಧಿಕೃತವಾಗಿ ಮದುವೆ ಆಗಿದ್ದೇವೆ. ಹೀಗಾಗಿ ಇದನ್ನು ತೋರಿಸುತ್ತಿದ್ದೇನೆ’ ಎಂದು ಸಂಜನಾ ಪತ್ರ ಆರಂಭಿಸಿದ್ದಾರೆ.

‘ನಟನೆ ವೃತ್ತಿ ಆಯ್ಕೆ ಮಾಡಿಕೊಂಡ ಮಹಿಳೆಯರು ಅನೇಕ ಅನಗತ್ಯ ಆರೋಪಗಳನ್ನು ಎದುರಿಸಬೇಕಾಗುತ್ತದೆ. ನನ್ನ ರಾಖಿ ಬ್ರದರ್​​ಅನ್ನು ಸಹ ನನ್ನ ಶುಗರ್ ಡ್ಯಾಡಿ ಬಾಯ್‌ಫ್ರೆಂಡ್ ಎಂದು ಕರೆದಿದ್ದನ್ನು ನೋಡಿದ್ದೇನೆ. ಓರ್ವ ನಟಿಯೊಡನೆ ಸಾರ್ವಜನಿಕವಾಗಿ ಕಾಣುವ ಓರ್ವ ಸಹೋದರನೂ ಸಾರ್ವಜನಿಕರ ಕಣ್ಣಲ್ಲಿ ಗೆಳೆಯರಾಗುತ್ತಾನೆ. ಇದು ಮಾನಸಿಕವಾಗಿ ತೊಂದರೆ ಕೊಡುವುದೇ ಅಲ್ಲವೇ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಎಲ್ಲಾ ಬೆಳವಣಿಗೆ, ಆರೋಪ ಹಾಗೂ ನೆಗೆಟಿವಿಟಿ ಮಧ್ಯೆ ನಿಜವಾದ ಪ್ರೀತಿ ತನ್ನ ದಾರಿಯನ್ನು ಕಂಡುಕೊಂಡಿದೆ. ನಿಜವಾದ ಪ್ರೀತಿ ಮಾತ್ರ ಯಾವಾಗಲೂ ಇರುತ್ತದೆ. ಲವ್​ ಯು ಆಜೀಜ್​. ನಿಜವಾದ ಗೆಳೆಯ, ಲವರ್​, ಗಂಡ ಮತ್ತು ತಂದೆ ರೀತಿಯ ಮೆಂಟರ್​ ಆಗಿ ನನ್ನ ಜೀವನದಲ್ಲಿ ಇರುವುದಕ್ಕೆ ಧನ್ಯವಾದ’ ಎಂದಿದ್ದಾರೆ ಸಂಜನಾ.

ಇದನ್ನೂ ಓದಿ: Sanjana Galrani : ಬೆಂಗಳೂರಿನಲ್ಲಿ ಸಂಕಷ್ಟದಲ್ಲಿರೋ ಜನ್ರ ಸಹಾಯಕ್ಕೆ ಮುಂದಾಗ್ತಿರೋ ನಟಿ ಸಂಜನಾ ಗರ್ಲಾನಿ

Sanjjanaa Galrani: ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ; ಡ್ರಗ್​ ಕೇಸ್​ನಲ್ಲಿ ಹೊರಬಂದ ನಟಿ ಮೇಲೆ ಮತ್ತೊಂದು ಎಫ್​ಐಆರ್​

Published On - 9:34 pm, Thu, 8 July 21