ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿ ಒಂದು ತಿಂಗಳು ಆಗುತ್ತಾ ಬಂದಿದೆ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಸಮಾಧಿಗೆ ನಿತ್ಯ ಸಾವಿರಾರು ಜನರು ಈಗಲೂ ಭೇಟಿ ನೀಡುತ್ತಲೇ ಇದ್ದಾರೆ. ಮತ್ತೊಂದು ಕಡೆ ಪುನೀತ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾ ಮಾರ್ಚ್ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಈಗ ಪುನೀತ್ ಬಯೋಪಿಕ್ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗೊಂದು ಆಲೋಚನೆ ಅಭಿಮಾನಿಗಳ ಕಡೆಯಿಂದಲೇ ಬಂದಿದೆ. ಇದಕ್ಕೆ ಖ್ಯಾತ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂತೋಷ್ ಆನಂದ್‌ರಾಮ್ ಹಾಗೂ ಪುನೀತ್ ಎರಡು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇವರ ಕಾಂಬಿನೇಷನ್ನಲ್ಲಿ ಬಂದ ‘ರಾಜಕುಮಾರ’ ಹಾಗೂ ‘ಯುವರತ್ನ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಎರಡೂ ಚಿತ್ರ ಹಿಟ್ ಆಗಿತ್ತು. ಇವರ ಕಾಂಬಿನೇಷನ್ನಲ್ಲಿ ಮೂರನೇ ಸಿನಿಮಾ ಮೂಡಿ ಬರಬೇಕಿತ್ತು. ಅದಕ್ಕೂ ಮೊದಲೇ ಅವಘಡವೊಂದು ನಡೆದು ಹೋಗಿತ್ತು. ಪುನೀತ್ ಹೃದಯಘಾತದಿಂದ ಮೃತಪಟ್ಟರು. ಈ ಕಾರಣಕ್ಕೆ ಹಲವು ಸಿನಿಮಾಗಳ ಕೆಲಸಗಳು ಅರ್ಧಕ್ಕೆ ನಿಂತಿವೆ. ಈ ಮಧ್ಯೆ ಪುನೀತ್ ಬಯೋಪಿಕ್ ಬಗ್ಗೆ ಚರ್ಚೆ ನಡೆದಿದೆ.
ಪುನೀತ್ ಸಣ್ಣ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಆಗಲೇ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಅವರು ಬಾಚಿಕೊಂಡರು. ನಂತರ ಹೀರೋ ಆಗಿಯೂ ಪುನೀತ್ ಮಿಂಚಿದರು. ಸಾಮಾಜಿಕ ಕೆಲಸಗಳನ್ನು ಕೂಡ ಪುನೀತ್ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಪುನೀತ್ ಬಗ್ಗೆ ತಿಳಿಯದೇ ಇರುವ ಹಲವು ವಿಚಾರಗಳು ಇವೆ. ಇದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ಕಾರಣಕ್ಕೆ ಕೆಲವರು ಪುನೀತ್ ಬಯೋಪಿಕ್ ಮಾಡಿ ಎನ್ನುವ ಬೇಡಿಕೆಯನ್ನು ಸಂತೋಷ್ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸಂತೋಷ್ ಆನಂದ್‌ರಾಮ್ ಪ್ರತಿಕ್ರಿಯೆ ನೀಡಿದ್ದಾರೆ.
I’ll try my level best to bring this idea on screen ? #appusirliveson https://t.co/ivcPkm7HyF
— Santhosh Ananddram (@SanthoshAnand15) November 21, 2021
‘ಸಂತೋಷ್ ಆನಂದ್‌ರಾಮ್ ಅವರೇ ಅಪ್ಪು ಸರ್ ಬಗ್ಗೆ ಒಂದು ಬಯೋಪಿಕ್ ಮಾಡಿ. ನೀವು ಪುನೀತ್ ಅವರನ್ನು ತುಂಬ ಹತ್ತಿರದಿಂದ ನೋಡಿದ್ದೀರಿ. ಅವರ ಪ್ರೀತಿ ಮತ್ತು ಮೌಲ್ಯಗಳನ್ನು ನೋಡಿದ್ದೀರಿ. ದಯವಿಟ್ಟು ಬಯೋಪಿಕ್ ಮಾಡಿ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಸಂತೋಷ್ ಆನಂದ್‌ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ಕಲ್ಪನೆಯನ್ನು ತೆರೆಯ ಮೇಲೆ ತರಲು ನನ್ನಿಂದಾದ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸುರಿಯುವ ಮಳೆಯಲ್ಲಿ ಪುನೀತ್ ಫೋಟೋಗೆ ಕೈ ಮುಗಿದು ಕುಳಿತ ಅಭಿಮಾನಿ; ಇಲ್ಲಿದೆ ವೈರಲ್ ವಿಡಿಯೋ
ಪುನೀತ್ ರಾಜ್ಕುಮಾರ್ ಹೆಸರಲ್ಲಿ ಮಹಾರಾಷ್ಟ್ರ ಅನಾಥಾಶ್ರಮದಲ್ಲಿ ಅನ್ನದಾನ