ನೀವು ಬಿಡಿ ಚಿತ್ರರಂಗ ಆಳುವವರು ಎಂದ ತೆಲುಗು ರಿಪೋರ್ಟರ್​ಗೆ ಬಟ್ಟೆ ತೋರಿಸಿ ಉತ್ತರ ಕೊಟ್ಟ ರಾಜ್ ಬಿ ಶೆಟ್ಟಿ

Su From So Movie: ರಾಜ್ ಬಿ ಶೆಟ್ಟಿ ಅವರ ‘ಸು ಫ್ರಮ್ ಸೋ’ ಚಿತ್ರದ ತೆಲುಗು ರಿಲೀಸ್ ವೇಳೆ, ‘ಶೆಟ್ಟಿ ಬ್ರದರ್ಸ್ ಆಳ್ವಿಕೆ’ ಎಂಬ ಪದ ಬಳಸಿದರು. ಅವರು ತಮ್ಮನ್ನು ‘ಸಿನಿಮಾದ ಗುಲಾಮರು’ ಎಂದು ಕರೆದರು. ಅವರು ‘ಆಳ್ವಿಕೆ’ ಎಂಬ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ನೀವು ಬಿಡಿ ಚಿತ್ರರಂಗ ಆಳುವವರು ಎಂದ ತೆಲುಗು ರಿಪೋರ್ಟರ್​ಗೆ ಬಟ್ಟೆ ತೋರಿಸಿ ಉತ್ತರ ಕೊಟ್ಟ ರಾಜ್ ಬಿ ಶೆಟ್ಟಿ
ರಾಜ್ ಬಿ. ಶೆಟ್ಟಿ

Updated on: Aug 08, 2025 | 9:53 AM

ಕನ್ನಡ ಚಿತ್ರರಂಗದಲ್ಲಿ ರಾಜ್ ಬಿ ಶೆಟ್ಟಿ (Raj B Shetty) ಹೆಸರು ಈಗ ದೇಶ-ವಿದೇಶದಲ್ಲಿ ಚರ್ಚೆ ಆಗುತ್ತಿದೆ. ಅವರು ಸಾಕಷ್ಟು ಪ್ರೀತಿಯಿಂದ ಮಾಡಿದ್ದ ‘ಟೋಬಿ’ ಹಾಗೂ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕಿಂತಲೂ ಹೆಚ್ಚಿನ ಜನಪ್ರಿಯತೆಯನ್ನು ‘ಸು ಫ್ರಮ್ ಸೋ’ ಸಿನಿಮಾ ತಂದುಕೊಟ್ಟಿದೆ. ಇನ್ನು ರಾಜ್ ಬಿ. ಶೆಟ್ಟಿ ಗೆಳೆಯರಾದ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ರಾಜ್ ಬಿ. ಶೆಟ್ಟಿ ಅವರಿಗೆ ತೆಲುಗು ರಿಪೋರ್ಟರ್ ಒಬ್ಬರು ಪ್ರಶ್ನೆ ಒಂದನ್ನು ಕೇಳಿದ್ದರು. ಈ ಪ್ರಶ್ನೆಗೆ ರಾಜ್ ಶೆಟ್ಟಿ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾ ಇಂದು (ಆಗಸ್ಟ್ 8) ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ತೆಲುಗು ಮಾಧ್ಯಮಗಳ ಎದುರು ರಾಜ್ ಬಿ. ಶೆಟ್ಟಿ ಹಾಗೂ ತಂಡದವರು ಮಾತನಾಡಿದರು. ಈ ವೇಳೆ ರಾಜ್​ ಅವರಿಗೆ ಒಂದು ಪ್ರಶ್ನೆ ಎದುರಾಯಿತು.

ಇದನ್ನೂ ಓದಿ
ಮಾಲಿವುಡ್​ನ ಶ್ರೀಮಂತ ನಟ ಫಹಾದ್ ಫಾಸಿಲ್ ಆಸ್ತಿ ಎಷ್ಟು?
‘ಸು ಫ್ರಮ್ ಸೋ’ ಚಿತ್ರಕ್ಕೆ ಎರಡು ವಾರ; ವಿಶ್ವ ಬಾಕ್ಸ್ ಆಫೀಸ್​ ಲೆಕ್ಕ
‘ಹಣ ಕೊಟ್ಟು ಟ್ರೋಲ್ ಮಾಡಿಸಿದರು, ಬೆಳೆಯದಂತೆ ತಡೆದರು’; ರಶ್ಮಿಕಾ ಮಂದಣ್ಣ
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ರಾಜ್ ಕೊಟ್ಟ ಉತ್ತರ


‘ಶೆಟ್ಟಿ ಬ್ರೋಗಳು ಬೆಳೆಯುತ್ತಿದ್ದಾರೆ ಮತ್ತು ಆಳುತ್ತಿದ್ದಾರೆ’ ಎಂದು ಕೇಳಲಾಯಿತು. ಇದಕ್ಕೆ ರಾಜ್​ ಅವರು ಉತ್ತರ ನೀಡಿದರು. ‘ನಾವು ಸಿನಿಮಾದ ಗುಲಾಮರು. ನಾವು ರಾಜರಲ್ಲ. ನಾವು ಸಿನಿಮಾಗಳಲ್ಲಿ ಕೆಲಸ ಮಾಡುತ್ತೇವೆ ಅಷ್ಟೇ. ಆಳುವವರ ಬಟ್ಟೆ, ಮಾತು ಹೀಗೆ ಇರುತ್ತದೆಯೇ? ನನಗೇಕೋ ಹಾಗೆ ಅನ್ನಿಸೋದಿಲ್ಲ. ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಖುಷಿ ಇದೆ’ ಎಂದು ರಾಜ್ ಬಿ. ಶೆಟ್ಟಿ ಹೇಳಿದರು.

ಇದನ್ನೂ ಓದಿ: ‘ಸು ಫ್ರಮ್ ಸೋ’ ಚಿತ್ರಕ್ಕೆ ಎರಡು ವಾರ; ವಿಶ್ವ ಬಾಕ್ಸ್ ಆಫೀಸ್​ನಲ್ಲಿ ರಾಜ್ ಶೆಟ್ಟಿ ಸಿನಿಮಾ ಗಳಿಸಿದ್ದೆಷ್ಟು?

ಈ ಮೊದಲು ಜರ್ನಲಿಸ್ಟ್ ಅನುಪಮಾ ಚೋಪ್ರಾ ಬಳಿ ಮಾತನಾಡುವಾಗಲೂ ರಾಜ್ ಬಿ. ಶೆಟ್ಟಿ ಇದೆ ವಿಚಾರವನ್ನು ಹೇಳಿದ್ದರು. ‘ಶೆಟ್ಟಿ ಮಾಫಿಯಾ’ ಎಂದು ಕರೆದವರಿಗೆ ಅವರು ಉತ್ತರ ನೀಡಿದ್ದರು. ‘ನಿಮ್ಮದೂ ಒಂದು ಗ್ಯಾಂಗ್ ಮಾಡಿಕೊಂಡರೆ ನಮ್ಮ ಅಭ್ಯಂತರ ಇಲ್ಲ’ ಎಂದು ಅವರು ಹೇಳಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಈಗ ಅದೇ ರೀತಿಯ ಪ್ರಶ್ನೆಗೆ ಅವರು ಬೇರೆ ರೀತಿಯಲ್ಲಿ ಉತ್ತರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:42 am, Fri, 8 August 25