- Kannada News Entertainment Sandalwood Shiva Rajkumar and Geetha Shiva Rajkumar marriage Anniversary here are some pics
ಶಿವರಾಜ್ ಕುಮಾರ್ ಗೀತಾ ದಂಪತಿಗಳ ವಿವಾಹ ವಾರ್ಷಿಕೋತ್ಸವ: ಇಲ್ಲಿವೆ ಚಿತ್ರಗಳು
Shiva Rajkumar and Geetha Shiva Rajkumar: ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಇಂದು (ಮೇ 19) ತಮ್ಮ 40ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ವುಡ್ ಆದರ್ಶ ದಂಪತಿಗಳು ಎನಿಸಿಕೊಂಡಿರುವ ಶಿವರಾಜ್ ಕುಮಾರ್ ಮತ್ತು ಗೀತಾ ಅವರು 1986, ಮೇ 19 ರಂದು ಅದ್ಧೂರಿಯಾಗಿ ವಿವಾಹವಾಗಿದ್ದರು.
Updated on:May 19, 2026 | 2:38 PM

ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಇಂದು (ಮೇ 19) ತಮ್ಮ 40ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್ವುಡ್ ಆದರ್ಶ ದಂಪತಿಗಳು ಎನಿಸಿಕೊಂಡಿರುವ ಶಿವರಾಜ್ ಕುಮಾರ್ ಮತ್ತು ಗೀತಾ ಅವರು 1986, ಮೇ 19 ರಂದು ಅದ್ಧೂರಿಯಾಗಿ ವಿವಾಹವಾಗಿದ್ದರು.

40 ವರ್ಷಗಳಿಂದ ಜೊತೆಗಿರುವ ಇವರ ವಿವಾಹ ವಾರ್ಷಿಕೋತ್ಸವ ಈ ವರ್ಷ ಅಭಿಮಾನಿಗಳ ಜೊತೆಗೆ ಸರಳವಾಗಿ ಆಚರಿಸಲಾಯ್ತು. ಹಲವು ಅಭಿಮಾನಿಗಳು ಶಿವಣ್ಣನ ಮನೆ ಮುಂದೆ ಆಗಮಿಸಿ ದಂಪತಿಗೆ ಶುಭ ಹಾರೈಸಿದರು.

ಅಭಿಮಾನಿಗಳು ತಂದಿದ್ದ ಹಾರ, ಹೂವುಗಳನ್ನು ಸ್ವೀಕರಿಸಿದ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರುಗಳು ಅಭಿಮಾನಿಗಳೊಟ್ಟಿಗೆ ಫೋಟೊ ತೆಗೆಸಿಕೊಂಡರು.

ಅಭಿಮಾನಿಗಳು ತಂದಿದ್ದ ಕೇಕುಗಳನ್ನು ಕತ್ತರಿಸಿ ಅಭಿಮಾನಿಗಳಿಗೂ ನೀಡಿ ತಾವೂ ಪರಸ್ಪರ ಕೇಕ್ ತಿನ್ನಿಸಿ ಸಂಭ್ರಮಿಸಿದರು. ಅಭಿಮಾನಿಗಳು ಶಿವರಾಜ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರಿಗೆ ಜಯಕಾರಗಳನ್ನು ಹಾಕಿದರು

ಪ್ರತಿ ವರ್ಷವೂ ಸಹ ಶಿವಣ್ಣನ ಹುಟ್ಟುಹಬ್ಬ ಮತ್ತು ಇಬ್ಬರ ವಾರ್ಷಿಕೋತ್ಸವವನ್ನು ಅಭಿಮಾನಿಗಳು ದಶಕಗಳಿಂದಲೂ ಆಚರಿಸುತ್ತಲೇ ಬರುತ್ತಿದ್ದಾರೆ. ಈ ವರ್ಷವೂ ತಪ್ಪಿಸಿಲ್ಲ.
Published On - 2:37 pm, Tue, 19 May 26

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




