ಚೆನ್ನೈನಲ್ಲಿ ಶಿವಣ್ಣನ ಕ್ರೇಜ್ ಹೇಗಿದೆ ಗೊತ್ತ? ವಿಡಿಯೋ ನೋಡಿ

Shiva Rajkumar: ಶಿವರಾಜ್ ಕುಮಾರ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಹಲವು ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಶಿವಣ್ಣ ಅವರಿಗೆ ಭಾರಿ ಕ್ರೇಜ್ ಇದೆ. ಇದೀಗ ತಮಿಳು ಸಿನಿಮಾ ಒಂದರ ಶೂಟಿಂಗ್​​ನಲ್ಲಿ ಶಿವಣ್ಣ ಭಾಗಿ ಆಗಿದ್ದು, ಚೆನ್ನೈನಲ್ಲಿ ಶಿವಣ್ಣನ ಕ್ರೇಜ್ ಏನೆಂದು ತಿಳಿಯಲು ಈ ವಿಡಿಯೋ ನೋಡಿ....

ಚೆನ್ನೈನಲ್ಲಿ ಶಿವಣ್ಣನ ಕ್ರೇಜ್ ಹೇಗಿದೆ ಗೊತ್ತ? ವಿಡಿಯೋ ನೋಡಿ
Shiva Rajkumar

Updated on: Sep 09, 2025 | 1:35 PM

ಶಿವರಾಜ್ ಕುಮಾರ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದ ಹಲವು ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಶಿವಣ್ಣ ಪರಭಾಷೆ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಲು ಆರಂಭಿಸಿದ್ದು, ತಮ್ಮ ಅದ್ಭುತ ನಟನೆ, ಸ್ವಾಗ್​​ನಿಂದ ಪರಭಾಷೆಯಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ನಟ ಶಿವಣ್ಣ, ತಮಿಳು ಸಿನಿಮಾ ಒಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಶೂಟಿಂಗ್​​​ ಸೆಟ್​​​ನಲ್ಲಿ ಅಭಿಮಾನಿಗಳು ಸಾಲುಗಟ್ಟಿ ನಿಂತು ಶಿವಣ್ಣನೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದಾರೆ.

2023 ರಲ್ಲಿ ಬಿಡುಗಡೆ ಆಗಿದ್ದ ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಬಾಕ್ಸ್ ಆಫೀಸ್​​ನಲ್ಲಿ 600 ಕೋಟಿಗೂ ಹೆಚ್ಚು ಮೊತ್ತ ಕಲೆ ಹಾಕಿತ್ತು. ಸಿನಿಮಾನಲ್ಲಿ ರಜನೀಕಾಂತ್ ಅವರ ಜೊತೆಗೆ ಬೇರೆ ಬೇರೆ ಚಿತ್ರರಂಗದ ಸ್ಟಾರ್ ನಟರುಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಮೋಹನ್​​ಲಾಲ್, ಸುನಿಲ್, ಜಾಕಿ ಶ್ರಾಫ್, ತಮನ್ನಾ ಭಾಟಿಯಾ ಹಾಗೂ ಶಿವರಾಜ್ ಕುಮಾರ್, ‘ಜೈಲರ್’ ಸಿನಿಮಾನಲ್ಲಿ ನಟಿಸಿದ್ದರು. ಆದರೆ ಎಲ್ಲರಿಗಿಂತಲೂ ಹೆಚ್ಚು ಮಿಂಚಿದ್ದು ಪಾತ್ರ ಶಿವಣ್ಣನ ಪಾತ್ರ.

‘ಜೈಲರ್’ ಸಿನಿಮಾನಲ್ಲಿ ಮಂಡ್ಯದ ನರಸಿಂಹ ಪಾತ್ರದಲ್ಲಿ ನಟಿಸಿದ್ದರು, ಶಿವಣ್ಣನ ಎಂಟ್ರಿ ಹಾಗೂ ಕ್ಲೈಮ್ಯಾಕ್ಸ್​​ನ ಟಿಶ್ಯೂ ಪೇಪರ್ ಸೀನ್ ಅದ್ಭುತವಾಗಿತ್ತು. ಆ ಎರಡು ಸೀನ್​​ನಿಂದಲೇ ತಮಿಳುನಾಡಿನಲ್ಲಿ ಶಿವಣ್ಣನಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಇದೀಗ ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಜಾರಿಯಲ್ಲಿದ್ದು, ಮತ್ತೊಮ್ಮೆ ಶಿವಣ್ಣ ‘ಜೈಲರ್ 2’ ತಂಡ ಸೇರಿಕೊಂಡಿದ್ದಾರೆ.

ಚೆನ್ನೈನಲ್ಲಿ ‘ಜೈಲರ್ 2’ ಸಿನಿಮಾದ ಶೂಟಿಂಗ್​​​ನಲ್ಲಿ ಶಿವರಾಜ್ ಕುಮಾರ್ ಭಾಗಿ ಆಗಿದ್ದಾರೆ. ಶೂಟಿಂಗ್ ವೇಳೆ ಭಾರಿ ಸಂಖ್ಯೆಯ ಅಭಿಮಾನಿಗಳು ಶಿವಣ್ಣನ ನೋಡಲು ಬಂದಿದ್ದು, ಶಿವಣ್ಣ ತಮ್ಮ ಎಂದಿನ ತಾಳ್ಮೆ, ಪ್ರೀತಿಯಿಂದ ಎಲ್ಲ ಅಭಿಮಾನಿಗಳನ್ನು ಮಾತನಾಡಿಸಿ ಅವರುಗಳೊಟ್ಟಿಗೆ ಚಿತ್ರ ತೆಗೆಸಿಕೊಂಡಿದ್ದಾರೆ. ಅಭಿಮಾನಿಗಳು ಸಹ ಶಿಸ್ತಿನಿಂದ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿ ಬಂದು ಶಿವಣ್ಣನ ಕೈಕುಲುಕಿ ಅವರೊಟ್ಟಿಗೆ ಚಿತ್ರ ತೆಗೆಸಿಕೊಂಡಿದ್ದಾರೆ. ಅಭಿಮಾನಿಗಳು ಮಾತ್ರವೇ ಅಲ್ಲದೆ, ಸಿನಿಮಾಕ್ಕೆ ಕೆಲಸ ಮಾಡುತ್ತಿರುವ ತಂತ್ರಜ್ಞರುಗಳು ಸಹ ಸಾಲಾಗಿ ಬಂದು ಶಿವಣ್ಣನ ಬಳಿ ಚಿತ್ರ ತೆಗೆಸಿಕೊಂಡಿರುವುದು ಶಿವಣ್ಣನ ಕ್ರೇಜ್ ಚೆನ್ನೈನಲ್ಲಿ ಹೇಗಿದೆ ಎಂಬುದಕ್ಕೆ ಸಾಕ್ಷಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ