AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ ಚಾಪ್ಟರ್ 1’ ವಿತರಣೆ ಹಕ್ಕು ಖರೀದಿಸಿದ ಸ್ಟಾರ್ ನಟ

Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿ, ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಕೊನೆಯ ಪ್ರಿಂಟ್ ಬಹುತೇಕ ರೆಡಿಯಾಗಿದ್ದು ಸಿನಿಮಾದ ಪ್ರಚಾರ ಕಾರ್ಯ ಕೆಲವೇ ದಿನಗಳಲ್ಲಿ ಆರಂಭ ಆಗಲಿದ್ದು, ಸಿನಿಮಾದ ವಿತರಣೆ ಇನ್ನಿತರೆ ಬ್ಯುಸಿನೆಸ್​ ಅನ್ನು ಹೊಂಬಾಳೆ ಫಿಲಮ್ಸ್ ಆರಂಭ ಮಾಡಿದೆ. ಇದೀಗ ಸಿನಿಮಾದ ವಿತರಣೆ ಹಕ್ಕನ್ನು ಪ್ಯಾನ್ ಇಂಡಿಯಾ ಸ್ಟಾರ್ ನಟರೊಬ್ಬರು ಖರೀದಿ ಮಾಡಿದ್ದಾರೆ.

‘ಕಾಂತಾರ ಚಾಪ್ಟರ್ 1’ ವಿತರಣೆ ಹಕ್ಕು ಖರೀದಿಸಿದ ಸ್ಟಾರ್ ನಟ
Kantara Chapter 1
ಮಂಜುನಾಥ ಸಿ.
|

Updated on: Sep 09, 2025 | 4:05 PM

Share

ಹೊಂಬಾಳೆ (Hombale) ನಿರ್ಮಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಕೊನೆಯ ಪ್ರಿಂಟ್ ಬಹುತೇಕ ರೆಡಿಯಾಗಿದ್ದು ಸಿನಿಮಾದ ಪ್ರಚಾರ ಕಾರ್ಯ ಕೆಲವೇ ದಿನಗಳಲ್ಲಿ ಆರಂಭ ಆಗಲಿದ್ದು, ಸಿನಿಮಾದ ವಿತರಣೆ ಇನ್ನಿತರೆ ಬ್ಯುಸಿನೆಸ್​ ಅನ್ನು ಹೊಂಬಾಳೆ ಫಿಲಮ್ಸ್ ಆರಂಭ ಮಾಡಿದೆ. ಇದೀಗ ಸಿನಿಮಾದ ವಿತರಣೆ ಹಕ್ಕನ್ನು ಪ್ಯಾನ್ ಇಂಡಿಯಾ ಸ್ಟಾರ್ ನಟರೊಬ್ಬರು ಖರೀದಿ ಮಾಡಿದ್ದಾರೆ.

‘ಕಾಂತಾರ ಚಾಪ್ಟರ್ 1’ ಸಿನಿಮಾದ ಕೇರಳ ವಿತರಣೆ ಹಕ್ಕನ್ನು ಪ್ಯಾನ್ ಇಂಡಿಯಾ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಖರೀದಿ ಮಾಡಿದ್ದಾರೆ. ಹೊಂಬಾಳೆ ಮತ್ತು ಪೃಥ್ವಿರಾಜ್ ಸುಕುಮಾರನ್ ನಡುವೆ ಬಲು ಆಪ್ತ ನಂಟಿದ್ದು, ಹೊಂಬಾಳೆ ನಿರ್ಮಾಣ ಮಾಡಿದ್ದ ‘ಕೆಜಿಎಫ್’, ‘ಕೆಜಿಎಫ್ 2’ ಮತ್ತು ‘ಕಾಂತಾರ’ ಸಿನಿಮಾಗಳ ಕೇರಳ ರಾಜ್ಯ ವಿತರಣೆ ಹಕ್ಕನ್ನು ಈ ಹಿಂದೆ ಪೃಥ್ವಿರಾಜ್ ಸುಕುಮಾರನ್ ಅವರೇ ಖರೀದಿ ಮಾಡಿದ್ದರು. ಇದೀಗ ‘ಕಾಂತಾರ ಚಾಪ್ಟರ್ 1’ ಸಿನಿಮಾದ ವಿತರಣೆ ಹಕ್ಕನ್ನು ಸಹ ಪೃಥ್ವಿರಾಜ್ ಅವರೇ ಖರೀದಿ ಮಾಡಿದ್ದಾರೆ.

‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಇನ್ನೂ ಹಲವೆಡೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದ್ದು, ವಿದೇಶದ ವಿತರಣೆ ಹಕ್ಕನ್ನು ಭಾರಿ ದೊಡ್ಡ ಮೊತ್ತಕ್ಕೆ ಹೊಂಬಾಳೆ ಫಿಲಮ್ಸ್ ಮಾರಾಟ ಮಾಡಿದೆಯಂತೆ.

ಇದನ್ನೂ ಓದಿ:ಹೊಸ ದಾಖಲೆ ಬರೆದ ಹೊಂಬಾಳೆಯ ‘ಮಹಾವತಾರ ನರಸಿಂಹ’

ಇನ್ನು ಸಿನಿಮಾದ ಉತ್ತರ ಭಾರತ ಬಿಡುಗಡೆ ಹಕ್ಕನ್ನು ಈ ಹಿಂದೆ ಹೊಂಬಾಳೆಯ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿದ್ದ ಅನಿಲ್ ಟಂಡಾನಿ ಅವರೇ ಬಿಡುಗಡೆ ಮಾಡಲಿದ್ದಾರಂತೆ. ಇನ್ನೂ ಕೆಲ ರಾಜ್ಯಗಳ ಬಿಡುಗಡೆ ಹಕ್ಕುಗಳ ಮಾರಾಟಕ್ಕೆ ಹೊಂಬಾಳೆ ಫಿಲಮ್ಸ್ ಮಾತುಕತೆ ನಡೆಸುತ್ತಿದೆ. ಇನ್ನು ಕರ್ನಾಟಕದಲ್ಲಿ ಸ್ವತಃ ಹೊಂಬಾಳೆಯವರೇ ವಿತರಣೆ ಮಾಡಲಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ, ಈ ಹಿಂದೆ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಆಗಿದೆ. ‘ಕಾಂತಾರ’ ಸಿನಿಮಾದ ಐದಾರು ಪಟ್ಟು ಹೆಚ್ಚಿನ ಬಂಡವಾಳ ಹಾಕಲಾಗಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಿನಿಮಾ ಅಕ್ಟೋಬರ್ 02 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು