
‘ಸು ಫ್ರಮ್ ಸೋ’ ಸಿನಿಮಾ ಈ ವರ್ಷದ ಅತಿ ಯಶಸ್ವಿ ಚಿತ್ರಗಳಲ್ಲಿ ಒಂದು. ಈ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಈ ಸಿನಿಮಾದಲ್ಲಿ ಕಥಾ ನಾಯಕ ಜೆಪಿ ತುಮ್ಮಿನಾಡು ಅವರು ಸೀರೆ ಉಟ್ಟು ಬರುತ್ತಾರೆ. ಈ ದೃಶ್ಯ ಸಾಕಷ್ಟು ಗಮನ ಸೆಳೆದಿತ್ತು. ಈಗ ಕನ್ನಡದ ಖ್ಯಾತ ನಟ ಶಿವರಾಜ್‌ಕುಮಾರ್ ಅವರು ‘45’ ಚಿತ್ರಕ್ಕಾಗಿ (45 Movie) ಇದೇ ರೀತಿಯ ಅವತಾರ ತಾಳಿದ್ದಾರೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಇಡೀ ಚಿತ್ರದಲ್ಲಿ ಈ ದೃಶ್ಯವೇ ಹೈಲೈಟ್.
‘45’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೂಲಕ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಡೈರೆಕ್ಟರ್ ಆಗಿದ್ದಾರೆ. ಅವರು ಪ್ರಥಮ ಸಿನಿಮಾದಲ್ಲೇ ಗೆಲ್ಲುವ ಸೂಚನೆ ನೀಡಿದ್ದಾರೆ. ಈ ಚಿತ್ರದ ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದೆ. ಹುಟ್ಟು ಹಾಗೂ ಸಾವಿನ ನಡುವಿನ ಕಥೆ ಇದು ಎಂದು ಹೇಳಲಾಗುತ್ತಾ ಇದೆ.
ಇದನ್ನೂ ಓದಿ:‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್ ತಿಂಗಳಲ್ಲೇ ‘45’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸಗಳ ಕಾರಣಕ್ಕೆ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಟ್ರೇಲರ್ ನೋಡಿದವರಿಗೆ ಅದು ಸ್ಪಷ್ಟವಾಗಿದೆ. ‘45’ ಚಿತ್ರದ ಟ್ರೇಲರ್ ಉದ್ದಕ್ಕೂ ಗ್ರಾಫಿಕ್ಸ್ ಹೈಲೈಟ್ ಆಗಿದೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರುತ್ತಿದೆ.
ರಾಜ್ ಬಿ ಶೆಟ್ಟಿ, ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಪಾತ್ರಗಳು ಟ್ರೇಲರ್ನಲ್ಲಿ ಹೈಲೈಟ್ ಆಗಿವೆ. ಗೋರಿ ಮೇಲೆ ಹುಟ್ಟಿದ ದಿನಾಂಕ, ಹಾಗೂ ಸಾಯುವ ದಿನಾಂಕ ಬರೆದಿರುತ್ತಾರೆ. ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುತ್ತೇ. ಅದುವೇ ಜೀವನ ಎಂದು ಉಪ್ಪಿ ಹೇಳುವ ಡೈಲಾಗ್ ಗಮನ ಸೆಳೆದಿದೆ. ಟ್ರೇಲರ್ ಕೊನೆಯಲ್ಲಿ ಶಿವರಾಜ್‌ಕುಮಾರ್ ತಾಳುವ ಅವತಾರ ಮೆಚ್ಚುಗೆ ಪಡೆದಿದೆ. ಈಗಾಗೇ ‘ಮಾರ್ಕ್’ ಸಿನಿಮಾ ಟ್ರೇಲರ್ ಭರ್ಜರಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಕೂಡ ಡಿಸೆಂಬರ್ 25ರಂದು ಬರುತ್ತಿದೆ. ಅದರ ಜೊತೆಗೆ ‘45’ ಸಿನಿಮಾ ಕೂಡ ಟ್ರೇಲರ್ ಮೂಲಕ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.