Shivani song: ‘ಎಣ್ಣೆ ಬೇಡ.. ಈಗಲೇ ಕಿಕ್​ನಲ್ಲಿದೀನಿ’: ಶಿವಾನಿ ನೋಡಿ ತಲೆ ಕೆಡಿಸಿಕೊಂಡ ‘ಕೌಸಲ್ಯ ಸುಪ್ರಜಾ ರಾಮ’

| Updated By: ಮಂಜುನಾಥ ಸಿ.

Updated on: Apr 21, 2023 | 7:39 PM

Darling Krishna: ಅರ್ಜುನ್​ ಜನ್ಯ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಶಿವಾನಿ..’ ಹಾಡಿಗೆ ನಿರ್ದೇಶಕ ಶಶಾಂಕ್​ ಸಾಹಿತ್ಯ ಬರೆದಿದ್ದಾರೆ.

Shivani song: ‘ಎಣ್ಣೆ ಬೇಡ.. ಈಗಲೇ ಕಿಕ್​ನಲ್ಲಿದೀನಿ’: ಶಿವಾನಿ ನೋಡಿ ತಲೆ ಕೆಡಿಸಿಕೊಂಡ ‘ಕೌಸಲ್ಯ ಸುಪ್ರಜಾ ರಾಮ’
ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ
Follow us on

ನಟ ಡಾರ್ಲಿಂಗ್​ ಕೃಷ್ಣ (Darling Krishna) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವುಗಳ ಪೈಕಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಸಾಕಷ್ಟು ಹೈಪ್​ ಸೃಷ್ಟಿ ಮಾಡಿದೆ. ಸ್ಯಾಂಡಲ್​ವುಡ್​ನ ಅನುಭವಿ ನಿರ್ದೇಶಕ ಶಶಾಂಕ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅವರ ಸಿನಿಮಾಗಳಲ್ಲಿ ಹಾಡುಗಳಿಗೆ ವಿಶೇಷ ಸ್ಥಾನ ಇರುತ್ತದೆ. ‘ಮೊಗ್ಗಿನ ಮನಸು’ ಚಿತ್ರದಿಂದ ಹಿಡಿದು, ಕಳೆದ ವರ್ಷ ತೆರೆಕಂಡ ‘ಲವ್​ 360’ ಸಿನಿಮಾದವರೆಗೂ ಈ ಮಾತು ಸಾಬೀತಾಗಿದೆ. ಈಗ ‘ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಚಿತ್ರದಲ್ಲೂ ಅದು ಮುಂದುವರಿದಿದೆ. ಈ ಸಿನಿಮಾದ ಮೊದಲ ಸಾಂಗ್​ ರಿಲೀಸ್​ ಆಗಿದೆ. ‘ಶಿವಾನಿ..’ ಎಂಬ ಈ ಹಾಡಿನಲ್ಲಿ ಡಾರ್ಲಿಂಗ್​ ಕೃಷ್ಣ ಮತ್ತು ಬೃಂದಾ ಆಚಾರ್ಯ (Brinda Acharya) ಅವರು ಮಿಂಚಿದ್ದಾರೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಹಾಡು ಕೇಳುಗರಿಗೆ ಗುಂಗು ಹಿಡಿಸಲು ಆರಂಭಿಸಿದೆ.

ಅರ್ಜುನ್​ ಜನ್ಯ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ‘ಶಿವಾನಿ..’ ಹಾಡು ಮೂಡಿಬಂದಿದ್ದು, ನಿರ್ದೇಶಕ ಶಶಾಂಕ್​ ಅವರೇ ಸಾಹಿತ್ಯ ಬರೆದಿದ್ದಾರೆ. ನಟ ನಾಗಭೂಷಣ್​ ಕೂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

‘ಎಣ್ಣೆ ಬೇಕಾ’ ಎಂದು ನಾಗಭೂಷಣ್​ ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಡಾರ್ಲಿಂಗ್​ ಕೃಷ್ಣ, ‘ಬೇಡ.. ಈಗಾಗಲೇ ಕಿಕ್​ನಲ್ಲಿದೀನಿ’ ಎಂದು ಹೇಳುತ್ತಾರೆ. ಆ ಡೈಲಾಗ್​ ಬಳಿಕ ‘ಶಿವಾನಿ..’ ಹಾಡು ಶುರುವಾಗುತ್ತದೆ. ಸುಮಧುರ ಸಂಗೀತ ಮತ್ತು ಕ್ಯಾಚಿ ಆದಂತಹ ಸಾಹಿತ್ಯದಿಂದಾಗಿ ಈ ಹಾಡು ಗಮನ ಸೆಳೆಯುತ್ತಿದೆ. ಬೃಂದಾ ಆಚಾರ್ಯ ಅವರು ಶಿವಾನಿ ಪಾತ್ರದಲ್ಲಿ ಸಖತ್​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ.

‘ಸರೆಗಮ ಕನ್ನಡ’​ ಮೂಲಕ ‘ಶಿವಾನಿ..’ ಹಾಡು ಬಿಡುಗಡೆ ಆಗಿದೆ. ಸಾಂಗ್​ ನೋಡಿದ ಸಿನಿಪ್ರಿಯರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಈ ಹಾಡಿನಿಂದಾಗಿ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ‘ಶಶಾಂಕ್​ ಸಿನಿಮಾಸ್​’ ಮತ್ತು ‘ಕೌರವ ಪ್ರೊಡಕ್ಷನ್​ ಹೌಸ್​’ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿವೆ.

ಇದನ್ನೂ ಓದಿ: Love Mocktail 3: ‘ಲವ್​ ಮಾಕ್ಟೇಲ್​ 3’ ಕೆಲಸ ಆರಂಭಿಸಿದ ಡಾರ್ಲಿಂಗ್​ ಕೃಷ್ಣ; ಮುಂದುವರಿಯಲಿದೆ ಆದಿ-ನಿಧಿ ಕಥೆ

‘ಕೌಲಸ್ಯ ಸುಪ್ರಜಾ ರಾಮ’ ಸಿನಿಮಾದ ಕೆಲಸಗಳು ಬಹುತೇಕ ಮುಗಿದಿದ್ದು ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೆಲವೇ ದಿನಗಳ ಹಿಂದೆ ಸಾಂಗ್​ ಟೀಸರ್​ ರಿಲೀಸ್​ ಮಾಡಲಾಗಿತ್ತು. ಸಿನಿಪ್ರಿಯರಿಂದ ಅದಕ್ಕೆ ಉತ್ತಮ ರೆಸ್ಪಾನ್ಸ್​ ಸಿಕ್ಕಿತ್ತು. ಅದರ ಬೆನ್ನಲೇ ಪೂರ್ತಿ ಸಾಂಗ್ ಬಿಡುಗಡೆ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:29 pm, Fri, 21 April 23