‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ..’ ಮೂಲಕ ವಿಕ್ಕಿ ಸಾಕಷ್ಟು ಜನಪ್ರಿಯತೆ ಪಡೆದರು. ಎಲ್ಲಾ ಕಡೆಗಳಲ್ಲಿ ಈ ಹಾಡೇ ಕೇಳಿತು. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡನ್ನು ಬೇರೆ ಬೇರೆ ಸಾಹಿತ್ಯದೊಂದಿಗೆ ವೈರಲ್ ಮಾಡಲಾಯಿತು. ಈಗ ವಿಕ್ಕಿ ಅವರು ಶಿವರಾಜ್ಕುಮಾರ್ (Shivarajkumar) ಜೊತೆ ಹೊಸ ವಿಡಿಯೋ ಮಾಡಿದ್ದಾರೆ. ಹಾಗಂತ ಇದು ‘ನಾನು ನಂದಿನಿ..’ ಹಾಡಲ್ಲ. ‘ಘೋಸ್ಟ್’ ಚಿತ್ರದ ಥೀಮ್ನಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಫ್ಯಾನ್ಸ್ ಇದನ್ನು ಸಖತ್ ಇಷ್ಟಪಡುತ್ತಿದ್ದಾರೆ.
ಶಿವರಾಜ್ಕುಮಾರ್ ಅವರು ‘ಘೋಸ್ಟ್’ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರ ಮಾಡಿದ್ದಾರೆ. ಟ್ರೇಲರ್ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರ ಅಕ್ಟೋಬರ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಶ್ರೀನಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಪ್ರಚಾರದಲ್ಲಿ ಶಿವಣ್ಣ ಭಾಗಿ ಆಗಿದ್ದಾರೆ.
ಶಿವಣ್ಣ ಟೀ ಕಪ್ ಹಿಡಿದು ಕುಳಿತಿರುತ್ತಾರೆ. ಇವರ ಎದುರು ವಿಕ್ಕಿ ಹಾಗೂ ಅಮಿತ್ ನಿಂತಿರುತ್ತಾರೆ. ಈ ವೇಳೆ ಶ್ರೀನಿ ಬಂದು ‘ಬೆಳಗ್ಗೆ ನನಗೆ ಆವಾಜ್ ಹಾಕಿದ್ದು ಇವರೇ’ ಎಂದು ಕಂಪ್ಲೇಂಟ್ ಮಾಡುತ್ತಾರೆ. ಮುಂಜಾನೆ ಯಾವ ಯಾವ ರೀತಿಯಲ್ಲಿ ಅವರು ಬೆದರಿಕೆ ಹಾಕಿದ್ದರು ಎಂಬುದನ್ನು ಶಿವಣ್ಣನಿಗೆ ಶ್ರೀನಿ ವಿವರಿಸುತ್ತಾರೆ. ಶಿವಣ್ಣನ ನೋಡಿದ್ದೇ ವಿಕ್ಕಿ ಹಾಗೂ ಅಮಿತ್ ಅವರ ಮೀಟರ್ ಆಫ್ ಆಗಿ ಬಿಡುತ್ತದೆ! ಸಖತ್ ಭಯ ಬೀಳುತ್ತಾರೆ.
ತಾವು ಆ ರೀತಿ ಮಾಡಿಲ್ಲ ಎಂದು ಅದಕ್ಕೆ ವಿವರಣೆ ನೀಡುತ್ತಾರೆ. ಶಿವಣ್ಣ ಎಚ್ಚರಿಕೆ ಕೊಟ್ಟು ಕಳುಹಿಸುತ್ತಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೈಕ್ಸ್ ಪಡೆದಿದೆ.
ಇದನ್ನೂ ಓದಿ: ‘ಘೋಸ್ಟ್’ ಸಿನಿಮಾ ಟ್ರೇಲರ್; ಅಚ್ಚರಿ ಮೂಡಿಸುವ ಗೆಟಪ್ನಲ್ಲಿ ಬಂದ ಶಿವಣ್ಣ
‘ಘೋಸ್ಟ್’ ಸಿನಿಮಾ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅನುಪಮ್ ಖೇರ್ ಸೇರಿ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:03 am, Thu, 12 October 23