Sign In

By signing in or creating an account, you agree with Associated Broadcasting Company's Terms & Conditions and Privacy Policy.

Ghost Trailer: ‘ಘೋಸ್ಟ್​’ ಸಿನಿಮಾ ಟ್ರೇಲರ್​; ಅಚ್ಚರಿ ಮೂಡಿಸುವ ಗೆಟಪ್​ನಲ್ಲಿ ಬಂದ ಶಿವಣ್ಣ

ಕೆಲವೇ ದಿನಗಳ ಹಿಂದೆ ‘ಘೋಸ್ಟ್​’ ಸಿನಿಮಾದ ಸಾಂಗ್​ ರಿಲೀಸ್​ ಆಗಿತ್ತು. ಆ ಮೂಲಕ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಿಸಲಾಗಿತ್ತು. ಈಗ ಟ್ರೇಲರ್​ ಅಬ್ಬರಿಸುತ್ತಿದೆ. ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬುದರ ಝಲಕ್​ ತೋರಿಸುವ ರೀತಿಯಲ್ಲಿ ಟ್ರೇಲರ್​ ಮೂಡಿಬಂದಿದೆ. ಶಿವರಾಜ್​ಕುಮಾರ್​ ಅವರ ಗೆಟಪ್​ ನೋಡಿ ಎಲ್ಲರೂ ವಾವ್​ ಎನ್ನುತ್ತಿದ್ದಾರೆ.

Ghost Trailer: ‘ಘೋಸ್ಟ್​’ ಸಿನಿಮಾ ಟ್ರೇಲರ್​; ಅಚ್ಚರಿ ಮೂಡಿಸುವ ಗೆಟಪ್​ನಲ್ಲಿ ಬಂದ ಶಿವಣ್ಣ
ಶಿವರಾಜ್​ಕುಮಾರ್​
Follow us
ಮದನ್​ ಕುಮಾರ್​
|

Updated on: Oct 01, 2023 | 12:05 PM

ನಿರ್ದೇಶಕ ಶ್ರೀನಿ ಅಲಿಯಾಸ್​ ಎಂ.ಜಿ. ಶ್ರೀನಿವಾಸ್​ ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ಘೋಸ್ಟ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ (Shivarajkumar)​ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಎರಡು ಡಿಫರೆಂಟ್​ ಗೆಟಪ್​ನಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಈ ಟ್ರೇಲರ್​ ನೋಡಿ ಅಭಿಮಾನಿಗಳ ನಿರೀಕ್ಷೆ ಡಬಲ್​ ಆಗಿದೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುವಂತಿದೆ. ಅಕ್ಟೋಬರ್​ 19ರಂದು ‘ಘೋಸ್ಟ್​’ ಚಿತ್ರ (Ghost Movie) ತೆರೆ ಕಾಣಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳು, ಖಡಕ್​ ಡೈಲಾಗ್​ಗಳಿಂದಲೇ ತುಂಬಿರುವ ‘ಘೋಸ್ಟ್​’ ಟ್ರೇಲರ್​ (Ghost Movie Trailer) ಈಗ ವೈರಲ್​ ಆಗುತ್ತಿದೆ. ಸಿನಿಪ್ರಿಯರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ‘ಘೋಸ್ಟ್​’ ಸಿನಿಮಾದ ಒಜಿಎಮ್​ (ಒರಿಜಿನಲ್​ ಗ್ಯಾಂಗ್​ಸ್ಟರ್​ ಮ್ಯೂಸಿಕ್​) ರಿಲೀಸ್​ ಆಗಿತ್ತು. ಆ ಮೂಲಕ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಿಸಲಾಗಿತ್ತು. ಈಗ ಟ್ರೇಲರ್​ ಅಬ್ಬರಿಸುತ್ತಿದೆ. ಈ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬುದರ ಝಲಕ್​ ತೋರಿಸುವ ರೀತಿಯಲ್ಲಿ ಟ್ರೇಲರ್​ ಮೂಡಿಬಂದಿದೆ. ಶಿವರಾಜ್​ಕುಮಾರ್​ ಅವರ ಗೆಟಪ್​ ನೋಡಿ ಎಲ್ಲರೂ ವಾವ್​ ಎನ್ನುತ್ತಿದ್ದಾರೆ.

‘ಘೋಸ್ಟ್​’ ಟ್ರೇಲರ್:

ಶಿವರಾಜ್​ಕುಮಾರ್​ ಅವರಿಗೆ ಈಗ 61 ವರ್ಷ ವಯಸ್ಸು. ಆದರೂ ಕೂಡ ಅವರ ಎನರ್ಜಿ ಕಡಿಮೆ ಆಗಿಲ್ಲ. ಅದಕ್ಕೆ ತಕ್ಕಂತೆಯೇ ಅವರ ಗೆಟಪ್​ ಬಗ್ಗೆ ನಿರ್ದೇಶಕ ಶ್ರೀನಿ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ಒಜಿ ಲುಕ್​ ಮಾತ್ರವಲ್ಲದೇ, ಚಿರ ಯುವಕನಂತೆ ಕಾಣುವ ಶಿವಣ್ಣನ ದೃಶ್ಯಗಳು ‘ಘೋಸ್ಟ್​’ ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ. ಇದನ್ನು ನೋಡಿದರೆ, ‘ಆನಂದ್​’, ‘ರಥ ಸಪ್ತಮಿ’, ‘ಇನ್ಸ್​ಪೆಕ್ಟರ್​ ವಿಕ್ರಮ್​’ ಮುಂತಾದ ಸಿನಿಮಾಗಳು ನೆನಪಿಗೆ ಬರುವಂತಿವೆ. ನಿಜಕ್ಕೂ ರೆಟ್ರೋ ಕಾಲದ ಮೆರುಗು ಮತ್ತೆ ಮರುಕಳಿಸಿದಂತೆ ಕಾಣುತ್ತಿದೆ. ಶಿವರಾಜ್​ಕುಮಾರ್​ ಅವರನ್ನು ಯಂಗ್​ ಆ್ಯಂಡ್​ ಎನರ್ಜಿಟಿಕ್​ ಆಗಿ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ನಿಖಿಲ್​ ಕುಮಾರ್​ ಸಿನಿಮಾದ ಸೆಟ್​ಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಫೋಟೋ ವೈರಲ್​

‘ಘೋಸ್ಟ್​’ ಸಿನಿಮಾಗೆ ‘ಸಂದೇಶ್​ ಪ್ರೊಡಕ್ಷನ್ಸ್​’ ಬ್ಯಾನರ್​ ಮೂಲಕ ಸಂದೇಶ್​ ಎನ್​. ಅವರು ಬಂಡವಾಳ ಹೂಡಿದ್ದಾರೆ. ಶಿವರಾಜ್​ಕುಮಾರ್​ ಜೊತೆ ಅನುಪಮ್​ ಖೇರ್​, ಜಯರಾಂ, ಅರ್ಚನಾ ಜೋಯಿಸ್​ ಮುಂತಾದವರು ನಟಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತ, ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಈ ಸಿನಿಮಾಗೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !