ಸರ್ಜರಿ ಬಳಿಕ ಫಿಟ್​ ಆ್ಯಂಡ್ ಫೈನ್ ಆದ ಶಿವರಾಜ್​ಕುಮಾರ್; ಇಲ್ಲಿದೆ ಫೋಟೋ

| Updated By: ರಾಜೇಶ್ ದುಗ್ಗುಮನೆ

Updated on: Jan 04, 2025 | 12:43 PM

ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ಮೂತ್ರಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ ಮತ್ತು ಅಮೆರಿಕಾದಲ್ಲಿ ತಮ್ಮ ಕುಟುಂಬದೊಂದಿಗೆ ಚೇತರಿಸಿಕೊಳ್ಳುತ್ತಿದ್ದಾರೆ. ಜನವರಿ 24 ರ ನಂತರ ಅವರು ಬೆಂಗಳೂರಿಗೆ ಮರಳಿ ವಿಶ್ರಾಂತಿ ಪಡೆಯಲಿದ್ದಾರೆ

ಸರ್ಜರಿ ಬಳಿಕ ಫಿಟ್​ ಆ್ಯಂಡ್ ಫೈನ್ ಆದ ಶಿವರಾಜ್​ಕುಮಾರ್; ಇಲ್ಲಿದೆ ಫೋಟೋ
Shivarajkumar (10)
Follow us on

ನಟ ಶಿವರಾಜ್​ಕುಮಾರ್ ಅವರು ಇತ್ತೀಚೆಗೆ ಮೂತ್ರಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಇದರ ಶಸ್ತ್ರಚಿಕಿತ್ಸೆ ಕೂಡ ಅವರು ಮಾಡಿಸಿಕೊಂಡಿದ್ದರು. ಈಗ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಶಸ್ತ್ರಚಿಕಿತ್ಸೆ ನಡೆದಿತ್ತು. ಈಗ ಶಿವಣ್ಣ ಅವರು ಫಿಟ್ ಆ್ಯಂಡ್ ಫೈನ್​ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ಹೊಸ ಫೋಟೋ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರು ಆದಷ್ಟು ಬೇಗ ಭಾರತಕ್ಕೆ ಮರಳಲಿ ಎಂದು ಕೋರುತ್ತಿದ್ದಾರೆ.

ಶಿವರಾಜ್​ಕುಮಾರ್ ಅವರು ಡಿಸೆಂಬರ್ 18ರಂದು ಅಮೆರಿಕಕ್ಕೆ ತೆರಳಿದರು. ಡಿಸೆಂಬರ್ 24ರಂದು ಅಮೆರಿಕದ ಫ್ಲೋರಿಡಾದಲ್ಲಿ ಮಿಯಾಮಿ ಕ್ಯಾನ್ಸರ್​ ಇನ್​ಸ್ಟಿಟ್ಯೂಟ್​ನಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ನಾಲ್ಕೈದು ಗಂಟೆಗಳ ಕಾಲ ಸರ್ಜರಿ ನಡೆದಿತ್ತು. ಈಗ ಶಿವಣ್ಣ ಅವರು ಆಸ್ಪತ್ರೆ ಪಕ್ಕದಲ್ಲೇ ಇರುವ ಹೋಟೆಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಕುಟುಂಬದ ಜೊತೆ ನಿಂತಿರುವ ಫೋಟೋ ವೈರಲ್ ಆಗಿದೆ.

ಕ್ಯಾನ್ಸರ್ ಸರ್ಜರಿ ಯಶಸ್ವಿ ಆಗಿದ್ದರೂ ಕೆಲ ದಿನಗಳ ಕಾಲ ಅವರು ಅಲ್ಲಿಯೇ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. ಹೀಗಾಗಿ, ಜನವರಿ 24ರವರೆಗೆ ಶಿವರಾಜ್​ಕುಮಾರ್ ಅಮೆರಿಕದಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಆ ಬಳಿಕ ಅವರು ಬೆಂಗಳೂರಿಗೆ ಬಂದ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಶಿವರಾಜ್​ಕುಮಾರ್ ಅವರು ಸಿನಿಮಾ ಕೆಲಸಕ್ಕೆ ಮರಳಲಿದ್ದಾರೆ.

ಇತ್ತೀಚೆಗೆ ಶಿವರಾಜ್​ಕುಮಾರ್ ಹಾಗೂ ಗೀತಾ ಶಿವರಾಜ್​ಕುಮಾರ್ ಲೈವ್ ಬಂದಿದ್ದರು. ಈ ವೇಳೆ ಕ್ಯಾನ್ಸರ್ ಸರ್ಜರಿ ಬಗ್ಗೆ ಮಾತನಾಡಿದ್ದರು. ಶಿವರಾಜ್​ಕುಮಾರ್ ಅವರು ಸಂಪೂರ್ಣವಾಗಿ ಕ್ಯಾನ್ಸರ್ ಮುಕ್ತ ಆಗಿದ್ದಾರೆ ಎಂದು ತಿಳಿಸಿದ್ದರು. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು

ಶಿವರಾಜ್​ಕುಮಾರ್ ಅವರು ಕ್ಯಾನ್ಸರ್ ಕಾರಣಕ್ಕೆ ಸಂಪೂರ್ಣವಾಗಿ ಜಿಮ್ ಹಾಗೂ ಎಕ್ಸಸೈಸ್ ಬಿಟ್ಟಿದ್ದರು. ಅವರು ಗುಣಮುಖರಾಗಿ ಮರಳಿದ ನಂತರ ಮತ್ತೆ ತಮ್ಮ ಕೆಲಸ ಆರಂಭಿಸಬೇಕಿದೆ.

ಶಿವರಾಜ್​ಕುಮಾರ್ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಆರೋಗದ್ಯದ ಮೇಲೆ ಅವರು ಸಂಪೂರ್ಣ ಗಮನ ಹರಿಸುತ್ತಿದ್ದಾರೆ. ಹೋಂ ಬ್ಯಾನರ್​ನಲ್ಲಿ ಮೂಡಿ ಬಂದ ‘ಭೈರತಿ ರಣಗಲ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ ಅವರು, ಇದರ ಪ್ರಚಾರದಲ್ಲಿ ಭಾಗಿ ಆದರು. ಈಗ ಅವರ ನಟನೆಯ ‘45’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರ ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:35 pm, Sat, 4 January 25