‘ಅಥಿ ಐ ಲವ್​ ಯೂ’ ಚಿತ್ರದಲ್ಲಿ ಶ್ರಾವ್ಯಾ-ಲೋಕೇಂದ್ರ ಸೂರ್ಯ; ನೆರವೇರಿತು ಮುಹೂರ್ತ

|

Updated on: Feb 12, 2023 | 1:31 PM

Shravya Rao | Lokendra Surya: ‘ಅಥಿ ಐ ಲವ್​ ಯೂ’ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸೆವೆನ್‌ ರಾಜ್‌ ಆರ್ಟ್ಸ್‌ ಬ್ಯಾನರ್‌ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

‘ಅಥಿ ಐ ಲವ್​ ಯೂ’ ಚಿತ್ರದಲ್ಲಿ ಶ್ರಾವ್ಯಾ-ಲೋಕೇಂದ್ರ ಸೂರ್ಯ; ನೆರವೇರಿತು ಮುಹೂರ್ತ
‘ಅಥಿ ಐ ಲವ್ ಯೂ’ ಚಿತ್ರದ ಮುಹೂರ್ತ ಸಮಾರಂಭ
Follow us on

ನಟ, ನಿರ್ದೇಶಕ ಹಾಗೂ ಛಾಯಾಗ್ರಾಹಕನಾಗಿ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಲೋಕೇಂದ್ರ ಸೂರ್ಯ (Lokendra Surya) ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾಗೆ ‘ಅಥಿ ಐ ಲವ್​ ಯೂ’ ಎಂದು ಶೀರ್ಷಿಕೆ ಇಡಲಾಗಿದೆ. ಲೋಕೇಂದ್ರ ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿಯೂ ನಟಿಸುತ್ತಿದ್ದಾರೆ. ಫೆಬ್ರವರಿ 7ರ ಬೆಳಿಗ್ಗೆ ಬೆಂಗಳೂರಿನ ರಾಜಾಜಿನಗರದ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ‘ಅಥಿ ಐ ಲವ್​ ಯೂ’ (Athi I love You) ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್‌ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿದರು. ಭಾ.ಮ. ಗಿರೀಶ್‌ ಅವರು ಕ್ಯಾಮೆರಾ ಚಾಲನೆ ಮಾಡಿದರು.

‘ಅಥಿ ಐ ಲವ್​ ಯೂ’ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸೆವೆನ್‌ ರಾಜ್‌ ಆರ್ಟ್ಸ್‌ ಬ್ಯಾನರ್‌ ಮೂಲಕ ರೆಡ್‌ ಅಂಡ್‌ ವೈಟ್‌ ಸೆವೆನ್‌ ರಾಜ್‌ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುಡಿವಿ ವೆಂಕಿ ಸಂಕಲನ, ಅನಂತ್‌ ಆರ್ಯನ್‌ ಸಂಗೀತ ನಿರ್ದೇಶನ, ಋತು ಚೈತ್ರಾ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.

ಇದನ್ನೂ ಓದಿ: Kabzaa: ನಾರ್ತ್​ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್​; ರಿಲೀಸ್​ಗೆ ಭರ್ಜರಿ ತಯಾರಿ

ಇದನ್ನೂ ಓದಿ
KCC: ಕೆಸಿಸಿ ಪಂದ್ಯಗಳ ಬಗ್ಗೆ ಮಾಹಿತಿ ನೀಡಿದ ಕಿಚ್ಚ ಸುದೀಪ್​; ಪೂರ್ತಿ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ
Ashika Ranganath: ‘ಟಾಲಿವುಡ್​ಗೆ ಹೋದ ಮಾತ್ರಕ್ಕೆ ಕನ್ನಡ ಮರೆಯಲ್ಲ’; ಅಭಿಮಾನಿಗಳಿಗೆ ಆಶಿಕಾ ರಂಗನಾಥ್​ ಭರವಸೆ
ಐದು ಕಡೆ ಐಷಾರಾಮಿ ಅಪಾರ್ಟ್​ಮೆಂಟ್ ಹೊಂದಿದ್ದಾರೆ ರಶ್ಮಿಕಾ ಮಂದಣ್ಣ? ಸ್ಪಷ್ಟನೆ ನೀಡಿದ ನಟಿ
ರಿಷಬ್ ಜತೆ ಫೋಟೋ ಹಂಚಿಕೊಂಡು ‘ಕಾಂತಾರ 2’ ಲೋಡಿಂಗ್ ಎಂದ ಊರ್ವಶಿ ರೌಟೇಲಾ; ನಾಯಕಿ ಫೈನಲ್?  

ನಟಿ ಶ್ರಾವ್ಯಾ ರಾವ್‌ ಅವರು ‘ಅಥಿ ಐ ಲವ್​ ಯೂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಅನೇಕ ಕಥೆಗಳನ್ನು ಕೇಳಿದ್ದೇನೆ. ಆದರೆ ಈ ಸಿನಿಮಾದ ಕಥೆ ನನಗೆ ಬಹಳ ಇಷ್ಟವಾಯ್ತು. ಈ ಪಾತ್ರ ಮತ್ತು ಸಿನಿಮಾ ಎರಡೂ ಕನ್ನಡದ ಮಟ್ಟಿಗೆ ತೀರಾ ಹೊಸದು. ಇಡೀ ಚಿತ್ರ ನನ್ನ ಪಾತ್ರದ ಸುತ್ತವೇ ಹೆಚ್ಚು ಸಾಗುತ್ತದೆ. ಅದು ನನಗೆ ಖುಷಿ ನೀಡಿದೆ’ ಎಂದಿದ್ದಾರೆ ಶ್ರಾವ್ಯಾ ರಾವ್‌.

ಇದನ್ನೂ ಓದಿ: Film City: ಮೈಸೂರಿನಲ್ಲಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಸಿಎಂಗೆ ಮನವಿ; ಕನ್ನಡದ ಸೆಲೆಬ್ರಿಟಿಗಳ ಜತೆ ಬಾಲಿವುಡ್​ ಮಂದಿ ಸಹಿ

ಕಥೆಯ ಎಳೆ ಏನು ಎಂಬ ಬಗ್ಗೆ ಲೋಕೇಂದ್ರ ಸೂರ್ಯ ​ ಮಾತನಾಡಿದ್ದಾರೆ. ‘ಇದು ಗಂಡ-ಹೆಂಡತಿ ನಡುವೆ ಒಂದು ದಿನದಲ್ಲಿ ನಡೆಯುವ ಕಥೆ. ಎರಡು ಪಾತ್ರಗಳನ್ನು ಮುಖ್ಯವಾಗಿ ಇಟ್ಟುಕೊಂಡು ಚಿತ್ರಕಥೆ ಬರೆಯಲಾಗಿದೆ. ಗಂಡ ಕೆಲಸಕ್ಕೆಂದು ಹೊರಗೆ ಹೋದ ನಂತರ ನಡೆಯುವ ಒಂದಷ್ಟು ಘಟನೆಗಳನ್ನು ರೋಚಕವಾಗಿ ತೋರಿಸಲಾಗುತ್ತದೆ’ ಎಂದಿದ್ದಾರೆ ಲೋಕೇಂದ್ರ ಸೂರ್ಯ.

ಲೋಕೇಂದ್ರ ಸೂರ್ಯ ಹಿನ್ನಲೆ:

‘ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’ ಚಿತ್ರದ ಮೂಲಕ ಲೋಕೇಂದ್ರ ಸೂರ್ಯ ಖ್ಯಾತಿ ಗಳಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಆ ಸಿನಿಮಾಗೆ ಜನ ಮೆಚ್ಚುಗೆ ಸಿಕ್ಕಿತ್ತು. ಆ ಬಳಿಕ ‘ಚೆಡ್ಡಿದೋಸ್ತ್​’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟಿಸಿದ್ದರು. ನಂತರ ಥ್ರಿಲ್ಲರ್‌ ಮಂಜು ಅವರ ‘ಡೆಡ್ಲಿ ಕಿಲ್ಲರ್‌’ ಸಿನಿಮಾದಲ್ಲಿ ಲೋಕೇಂದ್ರ ಅವರು ವಿಲನ್​ ಆಗಿ ಕಾಣಿಸಿಕೊಂಡರು. ಇತ್ತೀಚೆಗೆ ಸಿಂಗಾಪೂರದ ಕಾರ್ನಿವಲ್‌ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದ ‘ಕುಗ್ರಾಮ’ ಸಿನಿಮಾಗೆ ನಿರ್ದೇಶನ ಮಾಡಿದ್ದು ಕೂಡ ಲೋಕೇಂದ್ರ. ಬಿಡುಗಡೆಗೆ ಸಿದ್ಧವಾಗಿರುವ ರೆಡಿಯಾಗಿರುವ ‘ಬ್ರಹ್ಮಕಮಲ’ ಚಿತ್ರಕ್ಕೂ ಅವರು ಛಾಯಾಗ್ರಹಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:31 pm, Sun, 12 February 23