Updated on: Feb 11, 2023 | 1:10 PM
ನಟಿ ಊರ್ವಶಿ ರೌಟೇಲ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಟೀಂ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್ ಹಿಂದೆ ಬಿದ್ದಿದ್ದರು. ಸಿನಿಮಾ ಆಯ್ಕೆಯಲ್ಲಿ ಅವರು ಸಖತ್ ಚ್ಯೂಸಿ ಆಗಿದ್ದಾರೆ. ಈಗ ರಿಷಭ್ ಪಂತ್ ಬಿಟ್ಟು ರಿಷಬ್ ಶೆಟ್ಟಿ ಜತೆ ಕಾಣಿಸಿಕೊಂಡಿದ್ದಾರೆ.
ಸದ್ಯ, ‘ಕಾಂತಾರ 2’ ಸಿನಿಮಾ ಬಗ್ಗೆ ಚರ್ಚೆ ಜೋರಾಗಿದೆ. ಈ ಚಿತ್ರದಲ್ಲಿ ರಿಷಬ್ ಜತೆ ಯಾರೆಲ್ಲ ನಟಿಸಲಿದ್ದಾರೆ ಅನ್ನೋ ಕುತೂಹಲ ಇದೆ. ಹೀಗಿರುವಾಗಲೇ ಊರ್ವಶಿ ಹಂಚಿಕೊಂಡಿರೋ ಫೋಟೋ ವೈರಲ್ ಆಗಿದೆ.
ಊರ್ವಶಿ ಅವರು ರಿಷಬ್ ಶೆಟ್ಟಿ ಜತೆ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ನೀಡಿರೋ ಕ್ಯಾಪ್ಶನ್ ಗಮನ ಸೆಳೆದಿದೆ.
‘ಕಾಂತಾರಾ 2’ ಲೋಡಿಂಗ್ ಎಂದು ಬರೆದುಕೊಂಡಿರುವ ಅವರು, ರಿಷಬ್ ಹಾಗೂ ಹೊಂಬಾಳೆ ಫಿಲ್ಮ್ಸ್ಗೆ ಟ್ಯಾಗ್ ಮಾಡಿದ್ದಾರೆ.
‘ಕಾಂತಾರ’ ಚಿತ್ರಕ್ಕೆ ಪ್ರೀಕ್ವೆಲ್ ಬರಲಿದೆ ಎಂದು ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಘೋಷಣೆ ಮಾಡಿದ್ದರು. ಈ ಚಿತ್ರದಲ್ಲಿ ಅವರು ಯಾವ ರೀತಿಯ ಕಥೆ ಹೇಳಲಿದ್ದಾರೆ ಅನ್ನೋ ಕುತೂಹಲ ಮೂಡಿದೆ.