ಕ್ರೈಮ್​ ರಿಪೋರ್ಟರ್​ ಶುಭಾ ಪೂಂಜಾ; ಬಿಗ್​ ಬಾಸ್​ ಬಳಿಕ ‘ರೈಮ್ಸ್​’ ಹೇಳಲು ಹೊಸ ಅವತಾರ

Rhymes Kannada Movie: ಬಿಗ್​ ಬಾಸ್​ ಮುಗಿಸಿ ಬಂದ ಬಳಿಕ ನಟಿ ಶುಭಾ ಪೂಂಜಾ ಏನು ಮಾಡುತ್ತಿದ್ದಾರೆ. ಅವರಿಗೂ ಕ್ರೈಮ್​ ರಿಪೋರ್ಟಿಂಗ್​ಗೂ ಏನು ಸಂಬಂಧ? ಈ ಲೇಖನದಲ್ಲಿದೆ ಪೂರ್ತಿ ವಿವರ..

ಕ್ರೈಮ್​ ರಿಪೋರ್ಟರ್​ ಶುಭಾ ಪೂಂಜಾ; ಬಿಗ್​ ಬಾಸ್​ ಬಳಿಕ ‘ರೈಮ್ಸ್​’ ಹೇಳಲು ಹೊಸ ಅವತಾರ
ಶುಭಾ ಪೂಂಜಾ, ಅಜಿತ್ ಜಯರಾಜ್, ಸುಷ್ಮಾ ನಾಯರ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 06, 2021 | 3:27 PM

ನಟಿ ಶುಭಾ ಪೂಂಜಾ (Shubha Poonja) ಅವರು ಕ್ರೈಮ್​ ರಿಪೋರ್ಟರ್​ ಆಗಿದ್ದಾರೆ. ಅರೆರೆ, ಅವರೇನಾದರೂ ಸಿನಿಮಾ ಬಿಟ್ಟು ಪತ್ರಿಕೋದ್ಯಮ ಸೇರಿಕೊಂಡ್ರಾ? ಹಾಗೇನೂ ಇಲ್ಲ. ಕನ್ನಡದ ‘ರೈಮ್ಸ್​’ (Rhymes Kannada Movie) ಸಿನಿಮಾದಲ್ಲಿ ಅವರು ಪತ್ರಕರ್ತೆಯ ಪಾತ್ರ ಮಾಡಿದ್ದಾರೆ. ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಕ್ರೈಮ್​ ವರದಿಗಾರ್ತಿಯಾಗಿ ಶುಭಾ ಪೂಂಜಾ ನಟಿಸಿದ್ದಾರೆ. ಡಿ.10ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ರಿಲೀಸ್​ ಆಗಿರುವ ಟ್ರೇಲರ್​ ಮೂಲಕ ಕುತೂಹಲ ಮೂಡಿಸಲಾಗಿದೆ. ಅಜಿತ್​ ಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಹೀರೋ ಆಗಿ ಅಜಿತ್​ ಜಯರಾಜ್​  (Ajith Jayaraj) ಅಭಿನಯಿಸಿದ್ದಾರೆ. ಹೊಸ ನಟಿ ಸುಷ್ಮಾ ನಾಯರ್​ ಅವರು ಕೂಡ ಹೀರೋಯಿನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜ್ಞಾನಶೇಖರ್​, ರವಿಕುಮಾರ್​, ಗಿರೀಶ್​, ರಮೇಶ್​ ಆರ್ಯ ಅವರು ನಿರ್ಮಾಣ ಮಾಡಿದ್ದಾರೆ.

ಕಳೆದ ಮೂರು ವರ್ಷದಿಂದ ಈ ಚಿತ್ರಕ್ಕಾಗಿ ನಿರ್ದೇಶಕ ಅಜಿತ್​ ಕುಮಾರ್​ ಶ್ರಮಿಸಿದ್ದಾರೆ. ‘ಟ್ರೇಲರ್​ ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅದು ನಮಗೆ ಖುಷಿ ನೀಡಿದೆ. ಇದು ಒಂದು ಕ್ರೈಮ್​ ಥ್ರಿಲ್ಲರ್​ ಸಿನಿಮಾ. ಮೂರು ವರ್ಷದಿಂದ ಈ ಚಿತ್ರಕ್ಕಾಗಿ ಕಷ್ಟಪಟ್ಟಿದ್ದೇನೆ. ಈ ಚಿತ್ರದಲ್ಲಿ ಹೀರೋಯಿಸಂ ಇಲ್ಲ. ಕಂಟೆಂಟ್​ಗೆ ಹೆಚ್ಚು ಒತ್ತು ನೀಡಿದ್ದೇನೆ. ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಛಾಯಾಗ್ರಹಣ, ಸಂಗೀತ ಮತ್ತು ಸಂಕಲನ ಈ ಚಿತ್ರದ ಪ್ರಮುಖ ಅಂಶ’ ಎನ್ನುತ್ತಾರೆ ನಿರ್ದೇಶಕ ಅಜಿತ್​ ಕುಮಾರ್​.

ಹೀರೋ ಅಜಿತ್​ ಜಯರಾಜ್​ ಪಾಲಿಗೆ ಇದು ವಿಶೇಷ ಸಿನಿಮಾ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಐದು ವರ್ಷ ಕಷ್ಟಪಟ್ಟು ಈಗ ಸಿಂಗಲ್​ ಲೀಡ್​ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ನಟಿಸಿರುವ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ಗೆ ಸಿದ್ಧವಾಗಿವೆ. ಆದರೆ ಸಿಂಗಲ್​ ಹೀರೋ ಆಗಿ ನಾನು ನಟಿಸಿದ ಮೊದಲ ಸಿನಿಮಾ ‘ರೈಮ್ಸ್​’. ತಾಂತ್ರಿಕವಾಗಿ ಈ ಚಿತ್ರ ತುಂಬ ಸ್ಟ್ರಾಂಗ್​ ಆಗಿದೆ. ಕೆಲಸ ಮಾಡಿರುವ ಎಲ್ಲರೂ ಯುವ ಪ್ರತಿಭೆಗಳು. ಡಿ.10ಕ್ಕೆ ಸಿನಿಮಾ ರಿಲೀಸ್​ ಆಗುತ್ತಿದೆ. ಜನರು ಖರೀದಿಸುವ ಒಂದೊಂದು ಟಿಕೆಟ್​ ಕೂಡ ನಮಗೆ ತುಂಬ ಮಹತ್ವದ್ದಾಗಲಿದೆ. ಜನರಿಗೆ ಈ ಚಿತ್ರ ಖಂಡಿತಾ ಇಷ್ಟ ಆಗಲಿದೆ ಎಂಬ ಭರವಸೆ ಇದೆ’ ಎಂದಿದ್ದಾರೆ ಅಜಿತ್​ ಜಯರಾಜ್​.

(‘ರೈಮ್ಸ್​’ ಚಿತ್ರತಂಡ)

‘ರೈಮ್ಸ್​’ ರಿಲೀಸ್​ ಆಗುತ್ತಿರುವುದಕ್ಕೆ ನಟಿ ಸುಷ್ಮಾ ನಾಯರ್​ ಖುಷಿಯಾಗಿದ್ದಾರೆ. ‘ಮೊದಲ ಸಿನಿಮಾದಲ್ಲಿಯೇ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಅಜಿತ್​ ಜಯರಾಜ್​ ಅವರ ಪತ್ನಿಯ ಪಾತ್ರವನ್ನು ನಿಭಾಯಿಸಿದ್ದೇನೆ. ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ. ಈ ಪಾತ್ರ ಚಾಲೆಂಜಿಂಗ್​ ಆಗಿತ್ತು’ ಎಂದು ಸುಷ್ಮಾ ನಾಯರ್​ ಹೇಳಿದ್ದಾರೆ.

ಇದನ್ನೂ ಓದಿ:

‘ಗಂಧದ ಗುಡಿ’ ನೋಡಿ ಸೆಲೆಬ್ರಿಟಿಗಳು ಫಿದಾ; ಪುನೀತ್​ ಕಾರ್ಯಕ್ಕೆ ಉಘೇ ಉಘೇ ಎಂದಿದ್ದು ಯಾರೆಲ್ಲ?

‘ಗಂಧದ ಗುಡಿ’ ಅಂದ್ರೆ ಏನು? ಇದ್ರಲ್ಲಿ ಏನೆಲ್ಲ ಇದೆ? ಅಪ್ಪು​ ಕನಸಿನ ಬಗ್ಗೆ ಪೂರ್ತಿ ಮಾಹಿತಿ ನೀಡಿದ ನಿರ್ದೇಶಕ ಅಮೋಘವರ್ಷ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ