ಅರ್ಧಕ್ಕೆ ನಿಂತ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ‘ಲೀಡರ್ ರಾಮಯ್ಯ’; ಕಾರಣ ಏನು?
ಮೈಸೂರು ಭಾಗದಲ್ಲಿ ಸಿಎಂ ಬಾಲ್ಯದ ಜೀವನದ ಚಿತ್ರೀಕರಣ ಪೂರ್ಣಗೊಂಡಿದೆ. ಮುಡಾ ಪ್ರಕರಣ ಹಿನ್ನೆಲೆ 2ನೇ ಭಾಗದ ಸನ್ನಿವೇಶಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಮುಡಾ ಬೆಳವಣಿಗೆಯನ್ನು ಸಿನಿಮಾದಲ್ಲಿ ಸೇರಿಸಲು ಚಿಂತನೆ ನಡೆದಿದೆ.
ಸಿದ್ದರಾಮಯ್ಯ ಅವರ ಜೀವನ ಆಧರಿಸಿ ಸಿನಿಮಾ ಮಾಡೋ ಘೋಷಣೆ ಆಗಿ ವರ್ಷಗಳೇ ಕಳೆದಿವೆ. ಈ ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿತ್ತು. ಆದರೆ, ಈಗ ಅವರ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿದೆ. ಮುಡಾ ಹಗರಣದ ಹಾಗೂ ಚಿತ್ರದ ನಾಯಕನ ಡೇಟ್ ಸಮಸ್ಯೆ ಹಿನ್ನೆಲೆಯೆಲೆಯಲ್ಲಿ ಶೂಟಿಂಗ್ಗೆ ಬ್ರೇಕ್ ಹಾಕಲಾಗಿದೆ. ಈ ಸಿನಿಮಾಗಾಗಿ ಸಿದ್ದರಾಮಯ್ಯ ಅಭಿಮಾನಿಗಳು ಕಾದಿದ್ದಾರೆ. ಮತ್ತೆ ಯಾವಾಗ ಶೂಟಿಂಗ್ ಶುರುವಾಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಮುಡಾ ಹಗರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಪತ್ನಿಗೆ ನೀಡಲಾದ ಸೈಟ್ನಲ್ಲಿ ಸಿದ್ದರಾಮಯ್ಯ ಪ್ರಭಾವ ಇದೆ ಎಂದು ಹೇಳಲಾಗುತ್ತಿದೆ. ಅವರ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ. ಈ ಕಾರಣಕ್ಕೆ ಚಿತ್ರ ತಂಡ ಶೂಟಿಂಗ್ ನಿಲ್ಲಿಸಿ ರಾಜಕೀಯ ಬೆಳವಣಿಗೆ ಕಡೆಗೆ ಗಮನ ಹರಿಸುತ್ತಿದೆ.
ಮೈಸೂರು ಭಾಗದಲ್ಲಿ ಸಿಎಂ ಬಾಲ್ಯದ ಜೀವನದ ಚಿತ್ರೀಕರಣ ಪೂರ್ಣಗೊಂಡಿದೆ. ಮುಡಾ ಪ್ರಕರಣ ಹಿನ್ನೆಲೆ 2ನೇ ಭಾಗದ ಸನ್ನಿವೇಶಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಮುಡಾ ಬೆಳವಣಿಗೆಯನ್ನು ಸಿನಿಮಾದಲ್ಲಿ ಸೇರಿಸಲು ಚಿಂತನೆ ನಡೆದಿದೆ.
ಕಾಲಿವುಡ್ನ ಖ್ಯಾತ ಹೀರೋ ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರು ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಕಾರಣಕ್ಕೆ ವಿಜಯ್ ಸೇತುಪತಿ ಅವರ ಡೇಟ್ ಸಮಸ್ಯೆಯಾಗಿದೆ. ಈ ಹಿನ್ನೆಲೆ ಲೀಡರ್ ರಾಮಯ್ಯ ಚಿತ್ರದ ಶೂಟಿಂಗ್ ಸ್ಥಗಿತ ಮಾಡಿದ್ದೇವೆ ಎಂದು ಕೊಪ್ಪಳದಲ್ಲಿ ಚಿತ್ರದ ನಿರ್ಮಾಪಕ ಹಯ್ಯಾತ್ ಪೀರ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಇಡಿ ಪ್ರಕರಣ ದಾಖಲಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಪತ್ನಿ ಮುಡಾ ಸೈಟ್ ವಾಪಸ್ ಕೊಡಲು ಇದೆ ಬಲವಾದ ಕಾರಣ
ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರ ಪತ್ನಿ ಪಾರ್ವತಿ ಅವರು ಸೈಟ್ನ ಹಿಂದಿರುಗಿಸೋ ಘೋಷಣೆ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಸಿದ್ದರಾಮಯ್ಯ ಅವರ ಸಿನಿಮಾ ಅರ್ಧಕ್ಕೆ ನಿಂತಿರೋದು ಬೇಸರದ ಸಂಗತಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:49 am, Thu, 3 October 24