ಸೈಮಾ ವೇದಿಕೆಯಲ್ಲಿ ಕನ್ನಡದಲ್ಲೇ ಮಾತನಾಡಿದ ಧ್ರುವ ವಿಕ್ರಮ್ ; ರಿಷಬ್ ಶೆಟ್ಟಿ ಬಗ್ಗೆ ಮೆಚ್ಚುಗೆ

ಬೆಂಗಳೂರಿನಲ್ಲಿ ನಡೆದ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ತಮಿಳು ನಟ ಧ್ರುವ ವಿಕ್ರಮ್ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. 'ಕಾಂತಾರ' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಧ್ರುವ, ಅವರ ಸಾಧನೆ ಹಾಗೂ ತಾಂತ್ರಿಕ ನೈಪುಣ್ಯತೆಯನ್ನು ಹಾಡಿ ಹೊಗಳಿ ಗೌರವ ಸಲ್ಲಿಸಿದರು.

ಸೈಮಾ ವೇದಿಕೆಯಲ್ಲಿ ಕನ್ನಡದಲ್ಲೇ ಮಾತನಾಡಿದ ಧ್ರುವ ವಿಕ್ರಮ್ ; ರಿಷಬ್ ಶೆಟ್ಟಿ ಬಗ್ಗೆ ಮೆಚ್ಚುಗೆ
ರಿಷಬ್-ವಿಕ್ರನ್

Updated on: Sep 16, 2026 | 9:39 AM

ಮುಖ್ಯಾಂಶಗಳು

  • ಸೈಮಾ ವೇದಿಕೆಯಲ್ಲಿ ಕನ್ನಡದಲ್ಲೇ ಭಾಷಣ
  • ಮನ ಗೆದ್ದ ಧ್ರುವ ವಿಕ್ರಮ್
  • ತಮಿಳು ನಟನ ಮುಕ್ತಕಂಠದ ಶ್ಲಾಘನೆ

ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಈ ವೇಳೆ ದಕ್ಷಿಣ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವೇದಿಕೆಯಲ್ಲಿ ತಮಿಳಿನ ಜನಪ್ರಿಯ ನಟ ವಿಕ್ರಮ್ ಅವರ ಮಗ ಧ್ರುವ ವಿಕ್ರಮ್ ಅವರು ಕನ್ನಡದಲ್ಲೇ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಗ್ಗೆ ಧ್ರುವ ವಿಕ್ರಮ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲೇ ಭಾಷಣ ಸಿದ್ಧಪಡಿಸಿ ಬಂದಿದ್ದ ನಟ

ಬೇರೆ ಭಾಷೆಯ ನಟರು ಬೆಂಗಳೂರಿಗೆ ಬಂದರೆ ಕನ್ನಡದಲ್ಲಿ ಮಾತನಾಡುವುದಿಲ್ಲ ಎನ್ನುವ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಈ ಕಾರಣಕ್ಕೆ ಧ್ರುವ್ ಅವರು ಕನ್ನಡದಲ್ಲೇ ಭಾಷಣ ರೆಡಿ ಇಟ್ಟುಕೊಂಡು ಬಂದಿದ್ದರು. ವೇದಿಕೆ ಏರಿದ ಧ್ರುವ ವಿಕ್ರಮ್, ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಶುರು ಮಾಡಿದರು. ‘ನಾನು ನಿಮಗಾಗಿ ಕನ್ನಡದಲ್ಲಿ ಚಿಕ್ಕದಾಗಿ ಒಂದಷ್ಟು ವಿಷಯಗಳನ್ನು ಬರೆದುಕೊಂಡು ಬಂದಿದ್ದೇನೆ’ ಎಂದು ಪೇಪರ್ ನೋಡಿ ಕನ್ನಡದಲ್ಲೇ ಮನದಾಳದ ಮಾತುಗಳನ್ನು ಹಂಚಿಕೊಂಡರು.

ರಿಷಬ್ ಶೆಟ್ಟಿಗೆ ಹೃದಯಪೂರ್ವಕ ಅಭಿನಂದನೆ

‘ಕಾಂತಾರ ಚಿತ್ರಕ್ಕಾಗಿ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ಸರ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಜೊತೆ, ನಾನು ಮಹಾನ್ ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುತ್ತಿರುವುದು ನನಗೆ ತುಂಬಾ ತುಂಬಾ ಹೆಮ್ಮೆ ಮತ್ತು ಗೌರವದ ವಿಷಯ’ ಎಂದು ಸಂತಸ ವ್ಯಕ್ತಪಡಿಸಿದರು.

‘ನೀವು ನಮಗೆಲ್ಲಾ ಸ್ಫೂರ್ತಿ’

ಮುಂದುವರಿದು ಮಾತನಾಡಿದ ಧ್ರುವ್, ‘ರಿಷಬ್ ಸರ್, ನೀವು ನಿಜಕ್ಕೂ ಒಬ್ಬ ಲೆಜೆಂಡ್. ನಿಮ್ಮ ಕೆಲಸದಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ. ನೀವು ಒಬ್ಬ ಅದ್ಭುತ ತಂತ್ರಜ್ಞ ಹಾಗೂ ಕ್ರಿಯೇಟರ್. ನಿಮ್ಮಂತಹ ದಿಗ್ಗಜರ ಜೊತೆ ಒಂದೇ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದು ಹೊಗಳಿದರು.

ಇದನ್ನೂ ಓದಿ: ಬಿಗ್ ಅಪ್​ಡೇಟ್​;ಕಾಂತಾರ: ಚಾಪ್ಟರ್ 2’ ಸ್ಕ್ರಿಪ್ಟ್ ಆರಂಭಿಸಿದ ರಿಷಬ್ ಶೆಟ್ಟಿ

ತಮಿಳು ನಟನೊಬ್ಬ ಕನ್ನಡದಲ್ಲೇ ಮಾತು ಸಿದ್ಧಪಡಿಸಿಕೊಂಡು ಬಂದು, ಕನ್ನಡದ ನಟ ಹಾಗೂ ಚಿತ್ರರಂಗಕ್ಕೆ ನೀಡಿದ ಗೌರವಕ್ಕೆ ಸೈಮಾ ವೇದಿಕೆಯಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಭಾರೀ ಚಪ್ಪಾಳೆ ಮತ್ತು ಪ್ರಶಂಸೆ ವ್ಯಕ್ತವಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us