ಸಾವಿನಲ್ಲೂ ಸಾರ್ಥಕತೆ: ಕಣ್ಣುಗಳನ್ನು ದಾನ ಮಾಡಿದ ನಿರ್ದೇಶಕ ಎಸ್​ಕೆ ಭಗವಾನ್; ನಾಲ್ಕು ಜನಕ್ಕೆ ದೃಷ್ಟಿ

|

Updated on: Feb 20, 2023 | 11:45 AM

ರಾಜ್​ಕುಮಾರ್ ಅವರು ನೇತ್ರದಾನ ಮಾಡಲು ನೋಂದಣಿ ಮಾಡಿಸಿದ ಸಂದರ್ಭದಲ್ಲೇ ಎಸ್​.ಕೆ ಭಗವಾನ್ ಕೂಡ ತಮ್ಮ ಹೆಸರನ್ನು ನೋಂದಾಯಿಸಿದ್ದರು.

ಸಾವಿನಲ್ಲೂ ಸಾರ್ಥಕತೆ: ಕಣ್ಣುಗಳನ್ನು ದಾನ ಮಾಡಿದ ನಿರ್ದೇಶಕ ಎಸ್​ಕೆ ಭಗವಾನ್; ನಾಲ್ಕು ಜನಕ್ಕೆ ದೃಷ್ಟಿ
ಎಸ್​ಕೆ ಭಗವಾನ್
Follow us on

ಡಾ.ರಾಜ್​ಕುಮಾರ್ (Rajkumar) ಅವರು ನೇತ್ರದಾನ ಮಾಡಿದ್ದರು. ಈ ಮೂಲಕ ಅವರ ಅಭಿಮಾನಿಗಳಿಗೆ ಮಾದರಿ ಆಗಿದ್ದರು. ರಾಜ್​ಕುಮಾರ್ ಅವರಿಂದ ಸ್ಫೂರ್ತಿ ಪಡೆದ ಅನೇಕರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ರಾಜ್​ಕುಮಾರ್ ಜೊತೆ ಕೆಲಸ ಮಾಡಿದ್ದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (SK Bagavan) ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದರಿಂದ ಮೂರ್ನಾಲ್ಕು ಜನರಿಗೆ ದೃಷ್ಟಿ ಬರಲಿದೆ.

ರಾಜ್​ಕುಮಾರ್ ಅವರು ನೇತ್ರದಾನ ಮಾಡಲು ನೋಂದಣಿ ಮಾಡಿಸಿದ ಸಂದರ್ಭದಲ್ಲೇ ಎಸ್​.ಕೆ ಭಗವಾನ್ ಕೂಡ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಇಂದು (ಫೆ.20) ಅವರ ಮರಣಾ ನಂತರ ಕಣ್ಣಿನ ಕಾರ್ನಿಯಾವನ್ನು ತೆಗೆಯಲಾಗಿದೆ. ಇದರಿಂದ 3 ರಿಂದ 4 ಜನಕ್ಕೆ ದೃಷ್ಟಿ ಬರಲಿದೆ.

‘ಆಸ್ಪತ್ರೆಗೆ ಭೇಟಿ ಮಾಡಿದ್ದಾಗ ನೇತ್ರದಾನ ಮಾಡೋದಾಗಿ ಭಗವಾನ್ ಹೇಳಿದ್ದರು. ಅಣ್ಣಾವ್ರು ಕಣ್ಣುಗಳನ್ನು ದಾನ ಮಾಡಲು ರಿಜಿಸ್ಟರ್ ಮಾಡಿದಾಗಲೇ ಇವರು ಕೂಡ ಹೆಸರು ನೋಂದಣಿ ಮಾಡಿದ್ದರು. 90 ವರ್ಷ ವಯಸ್ಸಾದರೂ ಅವರ ಕಾರ್ನಿಯ ಆರೋಗ್ಯವಾಗಿದೆ. ಅವರ ಕಣ್ಣು ಯಾರಿಗೆ ಸೂಕ್ತವಾಗುತ್ತದೆ ಎಂಬುದನ್ನು ನೋಡಿ ಹಾಕುತ್ತೇವೆ ಎಂದು’ ನಾರಾಯಣ ನೇತ್ರಾಲಯದ ಐ ಬ್ಯಾಂಕ್ ಮ್ಯಾನೇಜರ್ ವೀರೇಶ್ ಹೇಳಿಕೆ ನೀಡಿದ್ದಾರೆ. ಭಗವಾನ್ ಅವರಿಗೆ 90 ವರ್ಷ ಆಗಿತ್ತು. ಆದರೂ ಅವರ ಕಣ್ಣುಗಳಿಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಅವರಿಂದ ನಾಲ್ಕೈದು ಜನರಿಗೆ ದೃಷ್ಟಿ ಸಿಗಲಿದೆ.

ಇದನ್ನೂ ಓದಿ
SK Bhagavan: ಎಸ್​ಕೆ ಭಗವಾನ್ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಸಂತಾಪ
SK Bhagavan Obituary: ಬಾಂಡ್ ಸಿನಿಮಾಗಳನ್ನು ಕನ್ನಡಕ್ಕೆ ಪರಿಚಯಿಸಿದ್ದ ದೊರೈ-ಭಗವಾನ್
SK Bhagavan: ಚಿತ್ರರಂಗದಲ್ಲಿ ಮುಗಿಯಿತು ಭಗವಾನ್ ಅಧ್ಯಾಯ; ಖ್ಯಾತ ನಿರ್ದೇಶಕ ನಿಧನ

ಇದನ್ನೂ ಓದಿ:  ಕನ್ನಡದಲ್ಲಿ ಮೊಟ್ಟಮೊದಲ ಬಾಂಡ್ ಶೈಲಿ ಸಿನಿಮಾ ತಯಾರಿಸಿದ ದೊರೆ-ಭಗವಾನ್ ಜೋಡಿಯ ಭಗವಾನ್ ಇನ್ನಿಲ್ಲ

ಕಾದಂಬರಿ ಆಧಾರಿತ ಸಿನಿಮಾಗಳನ್ನು ದೊರೈ-ಭಗವಾನ್ ಮಾಡುತ್ತಿದ್ದರು. ತರಾಸು ಅವರ ಸಾಕಷ್ಟು ಕಾದಂಬರಿಗಳನ್ನು ದೊರೈ-ಭಗವಾನ್ ಬೆಳ್ಳಿಪರದೆಗೆ ತಂದಿದ್ದಾರೆ. ಎರಡು ಕನಸು, ಗಿರಿ ಕನ್ಯೆ, ವಸಂತ ಗೀತ, ಗಾಳಿ ಮಾತು, ಬೆಂಕಿಯ ಬಲೆ ಮೊದಲಾದ ಸಿನಿಮಾಗಳು ದೊರೈ ಭಗವಾನ್ ನಿರ್ದೇಶನದಲ್ಲಿ ಮೂಡಿ ಬಂದವು. 1995ರಲ್ಲಿ ಬಂದ ‘ಬಾಳೊಂದು ಚದುರಂಗ’ ಸಿನಿಮಾ ದೊರೈ-ಭಗವಾನ್ ಕಾಂಬಿನೇಷನ್​ನ ಕೊನೆಯ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:42 am, Mon, 20 February 23