AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SK Bhagavan Obituary: ಬಾಂಡ್ ಸಿನಿಮಾಗಳನ್ನು ಕನ್ನಡಕ್ಕೆ ಪರಿಚಯಿಸಿದ್ದ ದೊರೈ-ಭಗವಾನ್

1968ರಲ್ಲಿ ರಿಲೀಸ್ ಆದ ರಾಜ್​ಕುಮಾರ್ ನಟನೆಯ ‘ಜೇಡರ ಬಲೆ’ ಚಿತ್ರಕ್ಕೆ ದೊರೈ-ಭಗವಾನ್ ನಿರ್ದೇಶನ ಮಾಡಿದರು. ಇವರ ಕಾಂಬಿನೇಷನ್​ನ ಮೊದಲ ಸಿನಿಮಾ ಯಶಸ್ಸು ಕಂಡಿತು. ಇದು ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ.

SK Bhagavan Obituary: ಬಾಂಡ್ ಸಿನಿಮಾಗಳನ್ನು ಕನ್ನಡಕ್ಕೆ ಪರಿಚಯಿಸಿದ್ದ ದೊರೈ-ಭಗವಾನ್
ರಾಜ್​ಕುಮಾರ್ ಜೊತೆ ದೊರೈ-ಭಗವಾನ್ (ಚಿತ್ರಕೃಪೆ: ರಾಘವೇಂದ್ರ ರಾಜ್​ಕುಮಾರ್)
ರಾಜೇಶ್ ದುಗ್ಗುಮನೆ
|

Updated on:Feb 20, 2023 | 12:32 PM

Share

ಎಸ್.ಕೆ. ಭಗವಾನ್ (SK Bhagavan) ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಭಗವಾನ್ ಅವರಿಗೆ ಸಲ್ಲುತ್ತದೆ. ಬಿ. ದೊರೈ ರಾಜ್​ ಹಾಗೂ ಎಸ್​.ಕೆ ಭಗವಾನ್ ಒಟ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಈ ಜೋಡಿ ದೊರೈ-ಭಗವಾನ್ (Dorai–Bhagavan ) ಎಂದೇ ಈ ಫೇಮಸ್ ಆಗಿತ್ತು. ಇವರ ನಿರ್ದೇಶನದ ಸಿನಿಮಾಗಳೂ ಇಂದಿಗೂ ಫೇಮಸ್.

ನಾಟಕದಿಂದ ಬೆಳ್ಳಿಪರದೆಗೆ

ಭಗವಾನ್​ ಅವರು ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ನಾಟಕ ಮಾಡುತ್ತಿದ್ದರು. ನಂತರ ಅವರು ಚಿತ್ರರಂಗದ ಕಡೆ ಹೊರಳಿದರು. ನಟನಾಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಕೊನೆಗೆ ಅವರು ಖ್ಯಾತಿ ಪಡೆದಿದ್ದು ನಿರ್ದೇಶಕನಾಗಿ. ಪಿವಿ ಬಾಬು ಅವರ ನಿರ್ದೇಶನದ ‘ಭಾಗ್ಯೋದಯ’ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಭಗವಾನ್ ಕೆಲಸ ಮಾಡಿದರು. ಉದಯ್ ಕುಮಾರ್ ನಟನೆಯ ಈ ಸಿನಿಮಾ 1956ರಲ್ಲಿ ತೆರೆಗೆ ಬಂತು. 1966ರಲ್ಲಿ ರಿಲೀಸ್ ಆದ ‘ಸಂಧ್ಯಾರಾಗ’ ಸಿನಿಮಾ ಮೂಲಕ ಭಗವಾನ್ ನಿರ್ದೇಶಕರಾಗಿ ಬಡ್ತಿ ಪಡೆದರು. ಆದರೆ, ಇದರ ಕ್ರೆಡಿಟ್​ನ ಎ.ಸಿ. ನರಸಿಂಹಮೂರ್ತಿಗೆ ನೀಡಲಾಯಿತು.

ಬಾಂಡ್ ಶೈಲಿಯ ಸಿನಿಮಾ

ಹಾಲಿವುಡ್​ನಲ್ಲಿ ಬಾಂಡ್ ಶೈಲಿಯ ಸಿನಿಮಾಗಳು ಫೇಮಸ್ ಆಗಿದ್ದವು. ಇದನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸಿದ್ದು ದೊರೈ-ಭಗವಾನ್. 1968ರಲ್ಲಿ ರಿಲೀಸ್ ಆದ ರಾಜ್​ಕುಮಾರ್ ನಟನೆಯ ‘ಜೇಡರ ಬಲೆ’ ಚಿತ್ರಕ್ಕೆ ದೊರೈ-ಭಗವಾನ್ ನಿರ್ದೇಶನ ಮಾಡಿದರು. ಇವರ ಕಾಂಬಿನೇಷನ್​ನ ಮೊದಲ ಸಿನಿಮಾ ಯಶಸ್ಸು ಕಂಡಿತು. ಇದು ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ ಅನ್ನೋದು ವಿಶೇಷ. ನಂತರ ಬಂದ ‘ಗೋವಾದಲ್ಲಿ ಸಿಐಡಿ 999’, ‘ಆಪರೇಷನ್​ ಜಾಕ್​ಪಾಟ್​ನಲ್ಲಿ ಸಿಐಡಿ 999’, ‘ಆಪರೇಷನ್ ಡೈಮಂಡ್ ರಾಕೆಟ್​’ ಸಿನಿಮಾಗಳು ಕೂಡ ಬಾಂಡ್​ ಶೈಲಿಯಲ್ಲೇ ಮೂಡಿ ಬಂದವು.

ರಾಜ್​ಕುಮಾರ್ ಜೊತೆ ಹಲವು ಸಿನಿಮಾ

ರಾಜ್​ಕುಮಾರ್ ಹಾಗೂ ದೊರೈ-ಭಗವಾನ್ ಕಾಂಬಿನೇಷನ್ ಸಾಕಷ್ಟು ಫೇಮಸ್ ಆಗಿತ್ತು. ಇವರ ನಿರ್ದೇಶನದಲ್ಲಿ ಮೂಡಿಬರುವ ಸಿನಿಮಾಗಳಿಗೆ ಸಾಕಷ್ಟು ಬೇಡಿಕೆ ಇತ್ತು. 1971ರಲ್ಲಿ ರಿಲೀಸ್ ಆದ ‘ಕಸ್ತೂರಿ ನಿವಾಸ’ ಚಿತ್ರ ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಯಶಸ್ಸು ಕಂಡಿತು. ರಾಜ್​ಕುಮಾರ್ ಅವರ ಹಲವು ಚಿತ್ರಕ್ಕೆ ಭಗವಾನ್ ನಿರ್ದೇಶನ ಮಾಡಿದ್ದರು. 1994ರಲ್ಲಿ ಬಂದ ‘ಒಡಹುಟ್ಟಿದವರು’ ರಾಜ್​ಕುಮಾರ್ ಜೊತೆ ದೊರೈ-ಭಗವಾನ್ ಮಾಡಿದ ಕೊನೆಯ ಸಿನಿಮಾ.

ಇತರರ ಜೊತೆ ಕೆಲಸ

ರಾಜ್​ಕುಮಾರ್ ಮಾತ್ರವಲ್ಲದೆ ಅನಂತ್​ ನಾಗ್, ಶಂಕರ್​ನಾಗ್, ಕುಮಾರ್ ಬಂಗಾರಪ್ಪ, ಸಾಯಿ ಕುಮಾರ್ ಮೊದಲಾದವರ ಸಿನಿಮಾಗಳಿಗೆ ಭಗವಾನ್ ನಿರ್ದೇಶನ ಮಾಡಿದ್ದರು. ರಾಜ್​ಕುಮಾರ್ ಬಳಿಕ ಅವರು ಅತಿ ಹೆಚ್ಚು ನಿರ್ದೇಶನ ಮಾಡಿದ್ದು ಅನಂತ್​ನಾಗ್​ ಅವರಿಗೆ ಅನ್ನೋದು ವಿಶೇಷ.

ದೊರೈ-ಭಗವಾನ್ ನಿರ್ದೇಶನದ ಸಿನಿಮಾಗಳು

ಕಾದಂಬರಿ ಆಧಾರಿತ ಸಿನಿಮಾಗಳನ್ನು ದೊರೈ-ಭಗವಾನ್ ಮಾಡುತ್ತಿದ್ದರು. ತರಾಸು ಅವರ ಸಾಕಷ್ಟು ಕಾದಂಬರಿಗಳನ್ನು ದೊರೈ-ಭಗವಾನ್ ಬೆಳ್ಳಿಪರದೆಗೆ ತಂದಿದ್ದಾರೆ. ಎರಡು ಕನಸು, ಗಿರಿ ಕನ್ಯೆ, ವಸಂತ ಗೀತ, ಗಾಳಿ ಮಾತು, ಬೆಂಕಿಯ ಬಲೆ ಮೊದಲಾದ ಸಿನಿಮಾಗಳು ದೊರೈ ಭಗವಾನ್ ನಿರ್ದೇಶನದಲ್ಲಿ ಮೂಡಿ ಬಂದವು. 1995ರಲ್ಲಿ ಬಂದ ‘ಬಾಳೊಂದು ಚದುರಂಗ’ ಸಿನಿಮಾ ದೊರೈ-ಭಗವಾನ್ ಕಾಂಬಿನೇಷನ್​ನ ಕೊನೆಯ ಸಿನಿಮಾ. ನಂತರ ಅವರು ನಿರ್ದೇಶನದಿಂದ ದೂರ ಉಳಿದರು. 2019ರಲ್ಲಿ ರಿಲೀಸ್ ಆದ ‘ಆಡುವ ಗೊಂಬೆ’ ಚಿತ್ರಕ್ಕೆ ಭಗವಾನ್ ನಿರ್ದೇಶನ ಮಾಡಿದ್ದರು. ಇದು ಅವರ ನಿರ್ದೇಶನದ ಕೊನೆಯ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:42 am, Mon, 20 February 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ದಿಢೀರ್​​ ಜಮೀರ್​ ಅಹ್ಮದ್​​ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್