ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ದಾಂಪತ್ಯ ಜೀವನ ಅಂತ್ಯವಾಗಿದೆ. ಇದಕ್ಕೆ ಕಾರಣವನ್ನು ಅವರು ನೀಡಿಲ್ಲ. ಬದಲಿಗೆ ತಾವು ವಿಚ್ಛೇದನ ಪಡೆಯುತ್ತಿರುವುದಾಗಿ ಹೇಳಿದ್ದಾರಷ್ಟೆ. ಈ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಚಂದನ್ ಹಾಗೂ ನಿವೇದಿತಾ ದಾಂಪತ್ಯಕ್ಕೆ ಯಾರಾದರೂ ಹುಳಿ ಹಿಂಡಿದರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಹೀಗೊಂದು ಅನುಮಾನ ಹೊರಹಾಕಿರುವುದು ಬಿಗ್ ಬಾಸ್ ವಿನ್ನರ್ ಹಾಗೂ ನಟ ಪ್ರಥಮ್. ಇವರ ವಿಚ್ಛೇದನದ ಕುರಿತು ಅವರು ರಿಯಾಕ್ಷನ್ ನೀಡಿದ್ದಾರೆ. ಇವರ ಮಧ್ಯೆ ಏನಾಗಿರಬಹುದು ಎಂಬ ಬಗ್ಗೆ ಮಾತನಾಡಿದ್ದಾರೆ.
ಚಂದನ್ ಹಾಗೂ ನಿವೇದಿತಾ ಗೌಡ ಅವರು ಬಿಗ್ ಬಾಸ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಕೊವಿಡ್ ಸಂದರ್ಭದಲ್ಲಿ ಸಿಂಪಲ್ ಆಗಿ ಮದುವೆ ಆಗಿದ್ದರು. ಈ ದಾಂಪತ್ಯ ಕೆಲವೇ ವರ್ಷಕ್ಕೆ ಅಂತ್ಯವಾಗಿದೆ. ಕೋರ್ಟ್ನಲ್ಲಿ ಈ ದಂಪತಿ ವಿಚ್ಛೇದನ ಪಡೆದಿದ್ದಾರೆ. ಈ ಬಗ್ಗೆ ನಟ ಪ್ರಥಮ್ ಮಾತನಾಡಿದ್ದಾರೆ.
‘ಚಂದನ್ ಹಾಗು ನಿವೇದಿತಾ ನಡುವೆ ಯಾರೋ ಹುಳಿ ಹಿಂಡಿದ್ದಾರೆ. ಅವರು ನಿಜವಾಗಲೂ ಉದ್ಧಾರ ಆಗಲ್ಲ, ಅವರಿಗೆ ಒಳ್ಳೆದಾಗಲ್ಲ. ಈ ಜೋಡಿ ಮತ್ತೆ ಒಂದಾಗಬೇಕು. ನಾನು ಧ್ರುವ ಸರ್ಜಾ ಅವರಿಂದ ಫೋನ್ ಮಾಡಿಸಿ ಒಮ್ಮೆ ಒಂದು ಮಾಡೋ ಪ್ರಯತ್ನ ಮಾಡುತ್ತೇನೆ. ಚಂದನ್ ಶೆಟ್ಟಿಗೆ ಪುನೀತ್ ಅವರ ಮಿಲನ ಸಿನಿಮಾ ನೋಡುವಂತೆ ಹೇಳುತ್ತೇನೆ. ಅದನ್ನ ನೋಡಿ ಅವರು ಹೋಗಿ ಅಪ್ಪು ಅವರು ಪಾರ್ವತಿನಾ ಅಪ್ಪಿಕೊಂಡ ಹಾಗೇ ನಿವೇದಿತಾನ ಹಗ್ ಮಾಡಿ ಒಂದಾಗಬೇಕು. ಚಂದನ್ ಹಾಗೂ ನಿವೇದಿತಾ ಡಿವೋರ್ಸ್ನಿಂದ ಕೆಲವರು ಸಂಭ್ರಮ ಪಟ್ಟಿರುತ್ತಾರೆ. ಅದಕ್ಕೆ ಆಸ್ಪದ ಕೊಡಬಾರದು’ ಎಂದಿದ್ದಾರೆ ಅವರು.
ಇದನ್ನೂ ಓದಿ: ವಿಚ್ಛೇದನ ದೃಢಪಡಿಸಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ, ಕಾರಣ ಕೊಟ್ಟಿದ್ದೇನು ಗೊತ್ತಾ?
ನಿವೇದಿತಾ ಹಾಗೂ ಚಂದನ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವಿಚ್ಛೇದನದ ಬಗ್ಗೆ ಪೋಸ್ಟ್ ಹಾಕಿದ್ದಾರೆ. ನಾವು ಈ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದನ್ನು ಅವರು ಅದರಲ್ಲಿ ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.