
ತರುಣ್ ಸುಧೀರ್ ಹಾಗೂ ಸೋನಲ್ ಮೊಂತೇರೋ (Sonal Monteiro) ವಿವಾಹ ವಾರ್ಷಿಕೋತ್ಸವ ಸಮೀಪಿಸಿದೆ. ಆಗಸ್ಟ್ 11ರಂದು ಇವರ ಸುಖ ಸಂಸಾರಕ್ಕೆ ಒಂದು ವರ್ಷ ತುಂಬಲಿದೆ. ಇವರು ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಮೊದಲನೇ ವಿವಾಹ ವಾರ್ಷಿಕೋತ್ಸವ ಯಾವಾಗಲೂ ಸ್ಪೆಷಲ್ ಆಗಿರುತ್ತದೆ. ತರುಣ್ ಹಾಗೂ ಸೋನಲ್ಗೂ ದಂಪತಿಗೂ ಈ ದಿನ ಸಾಕಷ್ಟು ವಿಶೇಷ ಆಗಿದೆ. ಪತಿಗೆ ಎಂದೂ ಮರೆಯಲಾರದ ಗಿಫ್ಟ್ನ ನೀಡಿದ್ದಾರೆ ಸೋನಲ್. ಈ ವಿಡಿಯೋ ವೈರಲ್ ಆಗಿದೆ.
‘ಮಹಾನಟಿ ಸೀಸನ್ 2’ ನಡೆಯುತ್ತಿದೆ. ಜಡ್ಜ್ ಸ್ಥಾನದಲ್ಲಿ ತರುಣ್ ಸುಧೀರ್ ಕೂಡ ಇದ್ದಾರೆ. ರಮೇಶ್ ಅರವಿಂದ್, ಪ್ರೇಮಾ, ನಿಶ್ವಿಕಾ ನಾಯ್ಡು ಜೊತೆ ಅವರಿಗೂ ಈ ಪ್ಯಾನಲ್ನಲ್ಲಿ ಅವಕಾಶ ಸಿಕ್ಕಿದೆ. ಜೀ ಕನ್ನಡ ವಾಹಿನಿಯವರು ಮಹಾನಟಿ ವೇದಿಕೆ ಮೇಲೆ ಈ ದಂಪತಿಯ ವಿವಾಹ ವಾರ್ಷಿಕೋತ್ಸವ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕ್ಷಣ ತುಂಬಾನೇ ವಿಶೇಷವಾಗಿತ್ತು.
ತರುಣ್ ಸುಧೀರ್ಗೆ ಸೋನಲ್ ಮೇಲೆ ವಿಶೇಷ ಪ್ರೀತಿ ಇದೆ. ಅವರು ವೇದಿಕೆ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ‘12 ತಿಂಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಈ ಹೂವಿನಂತೆ ನಮ್ಮ ಜೀವನ ಅರಳಲಿ. ನೀನು ನನ್ನ ಕುಟುಂಬವನ್ನು ಕಾಪಾಡ್ತೀಯಾ ಎಂಬ ನಂಬಿಕೆ ನನಗೆ ಇದೆ. ಹಿಂದಿನದ್ದನ್ನು ನಾನು ಯೋಚನೆ ಮಾಡುವುದಿಲ್ಲ. ಈ ಸಮಯವನ್ನು ಖುಷಿಯಾಗಿ ಇಡುತ್ತೇನೆ’ ಎಂದು ತರುಣ್ ಪ್ರಾಮಿಸ್ ಮಾಡಿದರು. ಜೊತೆಗೆ ಹೂಗುಚ್ಛ, ಸೀರೆ ಮತ್ತಿತ್ಯಾದಿ ಉಡುಗೊರೆ ನೀಡಿದರು.
ಇದನ್ನೂ ಓದಿ: ಮನೆಯಲ್ಲಿ ನನ್ನದೇ ಡೈರೆಕ್ಷನ್, ಹೇಳಿದಂತೆ ತರುಣ್ ಕೇಳಬೇಕು: ಸೋನಲ್
ಸೋನಲ್ ನೀಡಿದ್ದ ಉಡುಗೊರೆ ಮತ್ತಷ್ಟು ವಿಶೇಷ ಆಗಿತ್ತು. ಅವರು ಪತಿಗಾಗಿ ವಿಶೇಷ ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ‘ಹಾಡನ್ನು ರೆಕಾರ್ಡ್ ಮಾಡೋಕೆ ಬಂದಿದ್ದೇನೆ. ಈ ಹಾಡು ನಿಮಗಾಗಿ’ ಎಂದು ಸೋನಲ್ ವಿಟಿ ಪ್ಲೇ ಮಾಡಲಾಯಿತು. ಇದನ್ನು ಕೇಳಿ ತರುಣ್ ಸುಧೀರ್ ಭಾವುಕರಾದರು. ಸೋನಲ್ಗೆ ಖುಷಿಯಿಂದ ತರುಣ್ ಕೈ ಮುಗಿದು ಬಿಟ್ಟರು. ಸದ್ಯ ಈ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
2021ರಲ್ಲಿ ರಿಲೀಸ್ ಆದ ‘ಕಾಟೇರ’ ಸಿನಿಮಾಗೆ ತರುಣ್ ನಿರ್ದೇಶನ ಇತ್ತು. ಈ ಚಿತ್ರದಲ್ಲಿ ಸೋನಲ್ ನಟಿಸಿದ್ದರು. ಈ ಸಮಯದಲ್ಲಿ ಒಳ್ಳೆಯ ಪರಿಚಯ ಬೆಳೆಯಿತು. ಆ ಬಳಿಕ ಅದು ಪ್ರೀತಿಗೆ ತಿರುಗಿತು. ಕುಟುಂಬದ ಸಮ್ಮುಖದಲ್ಲಿ ಇವರು ಮದುವೆ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:05 am, Thu, 7 August 25