ವಿವಾದದ ಬಳಿಕ ‘ಕನ್ನಡಿಗರು ತುಂಬಾನೇ ಒಳ್ಳೆಯವರು’ ಎಂದ ಸೋನು ನಿಗಮ್

ಸೋನು ನಿಗಮ್ ಅವರು ಬೆಂಗಳೂರಿನ ಕಾರ್ಯಕ್ರಮದಲ್ಲಿ ನಡೆದ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಂದು ಅವರನ್ನು ಬೆದರಿಸಲಾಯಿತು ಎಂದು ಹೇಳಿದ್ದಾರೆ. ಕೆಲವರ ತಪ್ಪು ನಡವಳಿಕೆಯಿಂದಾಗಿ ಎಲ್ಲ ಕನ್ನಡಿಗರೂ ಕೆಟ್ಟವರೆಂದು ಭಾವಿಸಬಾರದು ಎಂದು ಅವರು ಹೇಳಿದ್ದಾರೆ. ಅವರು ಅಂದು ಕನ್ನಡದಲ್ಲಿ ಹಾಡಲು ಸಿದ್ಧರಿದ್ದರು ಆದರೆ ಬಲವಂತದ ಒತ್ತಾಯ ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿವಾದದ ಬಳಿಕ ‘ಕನ್ನಡಿಗರು ತುಂಬಾನೇ ಒಳ್ಳೆಯವರು’ ಎಂದ ಸೋನು ನಿಗಮ್
ಸೋನು ನಿಗಮ್

Updated on: May 03, 2025 | 6:08 PM

ಸೋನು ನಿಗಮ್ (Sonu Nigam) ಅವರು ಇತ್ತೀಚೆಗೆ ಬೆಂಗಳೂರಿನ ಶೋ ಒಂದರಲ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ‘ಕನ್ನಡ.. ಕನ್ನಡ.. ಇದೇ ಕಾರಣದಿಂದ ಪಹಲ್ಗಾಮ್​ನಲ್ಲಿ ದಾಳಿ ಆಯಿತು’ ಎಂಬರ್ಥ ಬರುವಂತೆ ಅವರು ಮಾತನಾಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಸೋನು ನಿಗಮ್ ಅವರನ್ನು ಸ್ಯಾಂಡಲ್​ವುಡ್​ನಿಂದ ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂತು. ಈ ಘಟನೆ ಬಗ್ಗೆ ಕೊನೆಗೂ ಅವರು ಮೌನ ಮುರಿದಿದ್ದಾರೆ. ಅಂದು ನಡೆದಿದ್ದು ಏನು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಶೋಗಳನ್ನು ಆಯೋಜನೆ ಮಾಡಿದಾಗ ಕೆಲವರು ವೇದಿಕೆ ಮುಂಭಾಕ್ಕೆ ಬಂದು ಗಾಯಕರಿಗೆ ತೊಂದರೆ ಕೊಡುತ್ತಾರೆ. ತಮ್ಮಿಷ್ಟದ ಹಾಡನ್ನು ಹೇಳುವಂತೆ ಧಮ್ಕಿ ಹಾಕುತ್ತಾರೆ. ಸೋನು ನಿಗಮ್ ಅವರಿಗೆ ಅಂದು ಆಗಿದ್ದು ಕೂಡ ಅದೇ. ‘ಕನ್ನಡದಲ್ಲಿ ಹಾಡಿ’ ಎಂದು ಅವರು ಪ್ರಿತಿಯಿಂದ ಕೋರಿಲ್ಲ, ಬದಲಿಗೆ ಜಬರ್ದಸ್ತಿ ಮಾಡುತ್ತಿದ್ದರು ಎಂದು ಸೋನು ನಿಗಮ್ ಹೇಳಿದ್ದಾರೆ.

ಇದನ್ನೂ ಓದಿ
ಬುಡಕಟ್ಟು ಜನಾಂಗದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆ ಕೇಳಿದ ವಿಜಯ್
‘ಕೆಜಿಎಫ್ 2’ ರಿಲೀಸ್ ಆಗಿ 3 ವರ್ಷವಾದರೂ ನಿಂತಿಲ್ಲ ಟಾಕ್
ಅಜಯ್ ದೇವಗನ್ ನಟನೆಯ ‘ರೇಡ್ 2’ ಒಟಿಟಿಗೆ ಯಾವಾಗ? ಮೊದಲ ದಿನದ ಗಳಿಕೆ ಎಷ್ಟು?
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?

‘ಕನ್ನಡ.. ಕನ್ನಡ’ ಎಂದು ಪ್ರೀತಿಯಿಂದ ಕರೆಯುವುದಕ್ಕೂ ‘ಕನ್ನಡ.. ಕನ್ನಡ’ ಎಂದು ಧಮ್ಕಿ ಹಾಕುವುದಕ್ಕೂ ವ್ಯತ್ಯಾಸ ಇದೆ ಎಂದು ಮಾತು ಆರಂಭಿಸಿದ್ದಾರೆ ಸೋನು ನಿಗಮ್. ಆ ಬಳಿಕ ಅಂದು ಏನಾಯಿತು ಎಂಬುದನ್ನು ವಿವರಿಸಿದ್ದಾರೆ. ‘ವೇದಿಕೆ ಕೆಳಗೆ ನಾಲ್ಕೈದು ಜನರು ಗುಂಡಾಗಳು ಇದ್ದರು, ಕೂಗಾಡುತ್ತಿದ್ದರು. ಅವರು ತುಂಬಾನೇ ತೊಂದರೆ ಮಾಡುತ್ತಿದ್ದರು. ಪಹಲ್ಗಾಮ್​ನಲ್ಲಿ ಪ್ಯಾಂಟ್ ಕಳಚುವಾಗ ಭಾಷೆ ಕೇಳಿಲ್ಲ ಎಂಬುದನ್ನು ಅವರಿಗೆ ಹೇಳೋದು ಅನಿವಾರ್ಯವಾಗಿತ್ತು’ ಎಂದಿದ್ದಾರೆ ಸೋನು ನಿಗಮ್.

‘ಯಾವುದೇ ರಾಜ್ಯಕ್ಕೆ ಹೋಗಿ ಈ ರೀತಿ ಕೆಟ್ಟವರು ನಾಲ್ಕೈದು ಜನರು ಇರುತ್ತಾರೆ. ಜಗತ್ತು ಪ್ರೀತಿಯಿಂದ ನಿಮ್ಮ ಜೊತೆ ನಡೆದುಕೊಳ್ಳುವಾಗ ನೀವು ಹಾಡಬೇಕು ಎಂದು ಯಾರೊಬ್ಬರೂ ಬೆದರಿಕೆ ಹಾಕಬಾರದು. ನಾನು ಯಾವಾಗಲೂ ಕನ್ನಡ ಹಾಡನ್ನು ಹಾಡಲು ರೆಡಿ ಆಗಿ ಬಂದಿರುತ್ತೇವೆ. ಇದನ್ನು ಅನೇಕ ಬಾರಿ ಹೇಳಿದ್ದೇನೆ. ಆದರೆ, ಈ ರೀತಿ ಕೆಟ್ಟದನ್ನು ಮಾಡುವವರು ಯಾರೇ ಆದರೂ ಅಲ್ಲಿಯೇ ತಡೆಯಬೇಕು’ ಎಂದು ಹೇಳಿದ್ದಾರೆ ಸೋನು ನಿಗಮ್.

ಇದನ್ನೂ ಓದಿ: ಸೋನು ನಿಗಮ್​ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ

‘ನಾನು ಮೊದಲ ಹಾಡು ಹೇಳುವಾಗ ಆ ನಾಲ್ಕು ಜನ ನನ್ನನ್ನೇ ಗುರಾಯಿಸುತ್ತಾ, ಹಾಡು ಹೇಳು ಎಂದು ಬೆದರಿಕೆ ಹಾಕುತ್ತಿದ್ದರು. ಎಲ್ಲಾ ಕನ್ನಡಿಗರೂ ಹೀಗೆ ಎಂದುಕೊಳ್ಳಬೇಡಿ. ಕನ್ನಡಿಗರು ಸಾಕಷ್ಟು ಒಳ್ಳೆಯವರು’ ಎಂದು ಸೋನು ನಿಗಮ್ ಅವರು ಅಂದಿನ ಘಟನೆ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 5:05 pm, Sat, 3 May 25