Ashika Ranganath: ಶ್ರೀಮುರಳಿ ಜೊತೆಗಿನ ಆಶಿಕಾ ರೊಮ್ಯಾಂಟಿಕ್​ ವಿಡಿಯೋ​ ವೈರಲ್​

| Updated By: Digi Tech Desk

Updated on: Aug 05, 2021 | 12:47 PM

Madhagaja Sri Murali: ಯುಗಾದಿ ಹಬ್ಬದ ಪ್ರಯುಕ್ತ ಮದಗಜ ಚಿತ್ರದ ಹೊಸ ಟೀಸರ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಚಿತ್ರದ ಲವ್​ಸ್ಟೋರಿಯ ಝಲಕ್​ ತೋರಿಸುವ ಪ್ರಯತ್ನ ಮಾಡಲಾಗಿದೆ. ಶ್ರೀಮುರಳಿ-ಆಶಿಕಾ ರಂಗನಾಥ್​ ನಡುವಿನ ರೊಮ್ಯಾಂಟಿಕ್​ ದೃಶ್ಯಗಳು ಈ ಟೀಸರ್​ನಲ್ಲಿದೆ.

Ashika Ranganath: ಶ್ರೀಮುರಳಿ ಜೊತೆಗಿನ ಆಶಿಕಾ ರೊಮ್ಯಾಂಟಿಕ್​ ವಿಡಿಯೋ​ ವೈರಲ್​
(ಮದಗಜ ಸಿನಿಮಾದಲ್ಲಿ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್​)
Follow us on

ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾ ಮೇಲೆ ಅವರ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆ ನಿರೀಕ್ಷೆ ಹುಟ್ಟಿಕೊಳ್ಳಲು ಕಾರಣ ಹಲವು. ಈ ಹಿಂದೆ ಬಿಡುಗಡೆಯಾದ ಪೋಸ್ಟರ್​ ಮತ್ತು ಟೀಸರ್​ನಲ್ಲಿ ಶ್ರೀಮುರಳಿ ರಗಡ್​ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ‘ಉಗ್ರಂ’, ‘ರಥಾವರ’, ‘ಮಫ್ತಿ’, ‘ಭರಾಟೆ’ ಸಿನಿಮಾಗಳಲ್ಲಿ ಶ್ರೀಮುರಳಿ ಅವರಿಗೆ ಮಾಸ್​ ಇಮೇಜ್​ ಇತ್ತು. ಅದು ಮದಗಜ ಚಿತ್ರದಲ್ಲೂ ಮುಂದುವರಿದಿದೆ. ಆದರೆ ಇದರ ಜೊತೆಗೊಂದು ಟ್ವಿಸ್ಟ್​ ಕೂಡ ಇದೆ. ಅದೇನೆಂಬುದು ಈಗ ಬಹಿರಂಗ ಆಗಿದೆ.

‘ಅಯೋಗ್ಯ’ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್​ ಕುಮಾರ್​ ಅವರು ‘ಮದಗಜ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಶ್ರೀಮುರಳಿ ಜನ್ಮದಿನದ ಪ್ರಯುಕ್ತ ಬಿಡುಗಡೆ ಮಾಡಲಾಗಿದ್ದ ಡೈಲಾಗ್​ ಟೀಸರ್​ ತುಂಬಾ ಮಾಸ್​ ಆಗಿತ್ತು. ಶ್ರೀಮುರಳಿ ಗೆಟಪ್​ ಕೂಡ ರಗಡ್​ ಆಗಿತ್ತು. ಆದರೆ ಇದೇ ಸಿನಿಮಾದಲ್ಲಿ ಅವರಿಗೆ ಲವರ್​ ಬಾಯ್​ ಇಮೇಜ್​ ಕೂಡ ಇದೆ ಎಂಬ ವಿಷಯ ಈಗ ಬಹಿರಂಗ ಆಗಿದೆ. ಅಂದರೆ ಕಥಾನಾಯಕನ ಇನ್ನೊಂದು ಮುಖ ಅನಾವರಣ ಆಗಿದೆ.

ಯುಗಾದಿ ಹಬ್ಬದ ಪ್ರಯುಕ್ತ ಮದಗಜ ಚಿತ್ರತಂಡದಿಂದ ಹೊಸ ಟೀಸರ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಚಿತ್ರದ ಲವ್​ ಸ್ಟೋರಿಯ ಝಲಕ್​ ತೋರಿಸುವ ಪ್ರಯತ್ನ ಮಾಡಲಾಗಿದೆ. ಹೀರೋಯಿನ್​ ಆಶಿಕಾ ರಂಗನಾಥ್​ ಜೊತೆಗಿನ ರೊಮ್ಯಾಂಟಿಕ್​ ದೃಶ್ಯಗಳು ಈ ಟೀಸರ್​ನಲ್ಲಿದೆ. ಹಿನ್ನೆಲೆ ಸಂಗೀತ ಕೂಡ ಅದಕ್ಕೆ ಸಾಥ್ ನೀಡುತ್ತಿದೆ. ಇದನ್ನು ನೋಡಿದರೆ ಮದಗಜ ಕೇವಲ ಆ್ಯಕ್ಷನ್​ ಸಿನಿಮಾ ಅಲ್ಲ ಎಂಬುದು ಗೊತ್ತಾಗುತ್ತದೆ.

ಇದೇ ಟೀಸರ್​ನಲ್ಲಿ ನಾಯಕಿ ಆಶಿಕಾ ರಂಗನಾಥ್​ ಅವರ ಪಾತ್ರದ ಬಗ್ಗೆಯೂ ಪರಿಚಯ ಮಾಡಿಸಲಾಗಿದೆ. ಪಕ್ಕಾ ಹಳ್ಳಿ ಹುಡುಗಿಯ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಸರು ಗದ್ದೆಯಲ್ಲಿ ನಾಟಿ ಮಾಡುತ್ತ, ಹಳ್ಳಿ ರಸ್ತೆಯಲ್ಲಿ ಸೈಕಲ್​ ಓಡಿಸುತ್ತಿರುವ ಅವರ ಈ ಪಾತ್ರ ಸಿನಿಮಾದಲ್ಲಿ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿದುಕೊಳ್ಳುವ ಕಾತರ ಈಗ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ರಾಬರ್ಟ್​ ಖ್ಯಾತಿಯ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರು ನಿರ್ಮಾಣ ಮಾಡುತ್ತಿರುವ ‘ಮದಗಜ’ ಚಿತ್ರಕ್ಕೆ ಇನ್ನೂ ಶೂಟಿಂಗ್​ ನಡೆಯುತ್ತಿದೆ. ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಕಂಠೀರಣ ಸ್ಟುಡಿಯೋದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಲಾಗುತ್ತಿತ್ತು. ಆ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟಾಗಿದ್ದು, 15 ದಿನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿತ್ತು.

ಇದನ್ನೂ ಓದಿ: Sri Murali: ‘ಮದಗಜ’ ಫೈಟಿಂಗ್​ ವೇಳೆ ಗಾಯಗೊಂಡ ಶ್ರೀಮುರಳಿ! ರೋರಿಂಗ್​ ಸ್ಟಾರ್​ ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್​

(Sri Murali Ashika Ranganath starrer Madhagaja Lovesome released on auspicious day of Yugadi 2021 mdn)

Published On - 1:23 pm, Tue, 13 April 21