ಮದಗಜ ಶೂಟಿಂಗ್​ ವೇಳೆ ಜ್ಯೂನಿಯರ್​ ಆರ್ಟಿಸ್ಟ್​ಗೆ ಪೆಟ್ಟು; ಕ್ಷಮೆ ಕೇಳಿ, ಚಿಕಿತ್ಸೆ ಕೊಡಿಸಿದ ಶ್ರೀಮುರಳಿ

| Updated By: ರಾಜೇಶ್ ದುಗ್ಗುಮನೆ

Updated on: Aug 23, 2021 | 12:18 PM

ಬೆಂಗಳೂರಿನ ಕಂಠೀರ ಸ್ಟುಡಿಯೋದಲ್ಲಿ ‘ಮದಗಜ’ ಚಿತ್ರೀಕರಣ ನಡೆಯುತ್ತಿದೆ. ಫೈಟ್ ದೃಶ್ಯ ಚಿತ್ರೀಕರಣದ ವೇಳೆ ಪುಟ್ಟರಾಜು ಹೆಸರಿನ ಜ್ಯೂನಿಯರ್​ ಆರ್ಟಿಸ್ಟ್​ ಕಾಲಿಗೆ ಪೆಟ್ಟಾಗಿದೆ.

ಮದಗಜ ಶೂಟಿಂಗ್​ ವೇಳೆ ಜ್ಯೂನಿಯರ್​ ಆರ್ಟಿಸ್ಟ್​ಗೆ ಪೆಟ್ಟು; ಕ್ಷಮೆ ಕೇಳಿ, ಚಿಕಿತ್ಸೆ ಕೊಡಿಸಿದ ಶ್ರೀಮುರಳಿ
ಮದಗಜ ಶೂಟಿಂಗ್​ ವೇಳೆ ಜ್ಯೂನಿಯರ್​ ಆರ್ಟಿಸ್ಟ್​ಗೆ ಪೆಟ್ಟು; ಕ್ಷಮೆ ಕೇಳಿ, ಚಿಕಿತ್ಸೆ ಕೊಡಿಸಿದ ಶ್ರೀಮುರಳಿ
Follow us on

ಸಿನಿಮಾ ಶೂಟಿಂಗ್​ ವೇಳೆ ಜ್ಯೂನಿಯರ್​ ಆರ್ಟಿಸ್ಟ್​ಗಳಿಗೆ ಏನಾದರೂ ತೊಂದರೆ ಆದರೆ ಬಹುತೇಕ ಸಂದರ್ಭದಲ್ಲಿ ನಟರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದನ್ನು ನಿರ್ದೇಶಕರು ಹಾಗೂ ನಿರ್ಮಾಪಕರು ನೋಡಿಕೊಳ್ಳುತ್ತಾರೆ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಆದರೆ, ನಟ ಶ್ರೀಮುರಳಿ ಇದಕ್ಕೆ ಅಪವಾದ. ಮದಗಜ ಸಿನಿಮಾ ಶೂಟಿಂಗ್​ ವೇಳೆ ಜ್ಯೂನಿಯರ್​ ಆರ್ಟಿಸ್ಟ್​ ಕಾಲಿಗೆ ಪೆಟ್ಟಾಗಿದೆ. ಈ ವೇಳೆ ಶ್ರೀಮುರಳಿ ಕ್ಷಮೆ ಕೇಳಿದ್ದಾರೆ. ಜತೆಗೆ ಚಿಕಿತ್ಸೆ ಕೂಡ ಕೊಡಿಸಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಮದಗಜ’ ಚಿತ್ರೀಕರಣ ನಡೆಯುತ್ತಿದೆ. ಫೈಟ್ ದೃಶ್ಯ ಚಿತ್ರೀಕರಣದ ವೇಳೆ ಪುಟ್ಟರಾಜು ಹೆಸರಿನ ಜ್ಯೂನಿಯರ್​ ಆರ್ಟಿಸ್ಟ್​ ಕಾಲಿಗೆ ಪೆಟ್ಟಾಗಿದೆ. ಈ ವೇಳೆ ಶ್ರೀಮುರುಳಿ ಅವರು ಹುಡುಗನ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಕ್ಷಮೆ ಕೇಳಿದ್ದಾರೆ.

ಪುಟ್ಟರಾಜುವಿನ ಕಾಲಿನ ನೋವು ಕಡಿಮೆ ಆಗದ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಉತ್ತಮ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ಪುಟ್ಟರಾಜುಗೆ ಶ್ರೀಮುರಳಿ ಹಣದ ಸಹಾಯವನ್ನೂ ಮಾಡಿದ್ದಾರೆ. ಅವರ ಮಾನವಿಯತೆ ಬಗ್ಗೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ನಿರ್ದೇಶಕ ಮಹೇಶ್​ ಕುಮಾರ್​ ಕೂಡ ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕೊವಿಡ್​  ಸಂಕಷ್ಟದ ಸಮಯದಲ್ಲಿ ಹಗಲಿರುಳು ಕರೊನಾ ಸೋಂಕಿತರ ಸೇವೆ ಮಾಡುತ್ತಿರುವ 5 ಸರ್ಕಾರಿ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಶ್ರೀಮುರಳಿ ಊಟದ ವ್ಯವಸ್ಥೆ ಮಾಡಿದ್ದರು. ಅವರ ಈ ಸೇವೆಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.ಶ್ರೀಮುರಳಿ ಇತ್ತೀಚೆಗೆ ಕೊವಿಡ್ ಲಸಿಕೆ ಪಡೆದಿದ್ದರು. ಲಸಿಕೆ ಪಡೆಯುತ್ತಿರುವ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ‘ನನ್ನ ಮೊದಲ ವಾಕ್ಸಿನೇಶನ್ ಆಯ್ತ. ಆಗದೆ ಇರುವವರು ತಡ ಮಾಡಬೇಡಿ. ನಿಮ್ಮ ವಾಕ್ಸಿನೇಶನ್ ಮುಗಿಸಿಕೊಳ್ಳಿ’ ಎಂದು ಕೋರಿದ್ದರು.

ಇದನ್ನೂ ಓದಿ: ‘ಮದಗಜ’ ನಿರ್ದೇಶಕ ಮಹೇಶ್​ಗೆ ‘ರಾಬರ್ಟ್’​ ನಿರ್ಮಾಪಕ ಉಮಾಪತಿಯಿಂದ ದುಬಾರಿ ಕಾರ್ ಗಿಫ್ಟ್​!

Madhagaja Teaser: ಶ್ರೀಮುರಳಿ ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಮದಗಜ ಕಡೆಯಿಂದ ಹೊಸ ಅಪ್​ಡೇಟ್​