ಮುಂದುವರಿದ ‘ಮದಗಜ’ ಆರ್ಭಟ; 2ನೇ ದಿನಕ್ಕೆ ಶ್ರೀಮುರಳಿ ಚಿತ್ರದ ಕಲೆಕ್ಷನ್​ ಎಷ್ಟು?

| Updated By: ಮದನ್​ ಕುಮಾರ್​

Updated on: Dec 05, 2021 | 2:21 PM

Box Office Collection: ಹಲವು ಕಡೆಗಳಲ್ಲಿ ‘ಮದಗಜ’ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಶ್ರೀಮುರಳಿ, ಆಶಿಕಾ ರಂಗನಾಥ್​ ಜೋಡಿಯ ಈ ಚಿತ್ರವನ್ನು ಫ್ಯಾನ್ಸ್​ ಮೆಚ್ಚಿಕೊಂಡಿದ್ದಾರೆ.

ಮುಂದುವರಿದ ‘ಮದಗಜ’ ಆರ್ಭಟ; 2ನೇ ದಿನಕ್ಕೆ ಶ್ರೀಮುರಳಿ ಚಿತ್ರದ ಕಲೆಕ್ಷನ್​ ಎಷ್ಟು?
ಶ್ರೀಮುರಳಿ
Follow us on

ಕನ್ನಡ ಚಿತ್ರರಂಗದಲ್ಲಿ ಗಲ್ಲಾಪೆಟ್ಟಿಗೆ ವಹಿವಾಟು ಚಿಗುರಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ತೆರೆಕಾಣುತ್ತಿವೆ. ಎರಡನೇ ಲಾಕ್​​ಡೌನ್​ ಬಳಿಕ ಹಲವು ಚಿತ್ರಗಳು ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿವೆ. ಆ ಪೈಕಿ ‘ಮದಗಜ’ ಸಿನಿಮಾ (Madhagaja Movie) ಕೂಡ ಒಳ್ಳೆಯ ಕಮಾಯಿ ಮಾಡುತ್ತಿದೆ. ಶ್ರೀಮುರಳಿ (Sriimurali) ನಟನೆಯ ಈ ಚಿತ್ರಕ್ಕೆ ಮೊದಲ ದಿನ ಭರ್ಜರಿ ಓಪನಿಂಗ್​ ಸಿಕ್ಕಿತ್ತು. ಎರಡನೇ ದಿನ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ಎರಡು ದಿನ ಸೇರಿ ಎಷ್ಟು ಗಳಿಕೆ (Box Office Collection) ಆಗಿದೆ ಎಂಬುದನ್ನು ಸ್ವತಃ ಚಿತ್ರತಂಡವೇ ಹೇಳಿಕೊಂಡಿದೆ. 900ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಹಲವೆಡೆ ಶೋ ಹೌಸ್​ ಫುಲ್​ ಆಗುತ್ತಿದೆ. ಇದು ಚಿತ್ರತಂಡದ ಸಂತಸವನ್ನು ಹೆಚ್ಚಿಸಿದೆ.

 

ಎರಡನೇ ದಿನ 5.64 ಕೋಟಿ ರೂ. ಕಲೆಕ್ಷನ್​:

ಈ ಸಿನಿಮಾದಲ್ಲಿ ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್​ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್​ ಕಂಡು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಎರಡನೇ ದಿನ ಅಂದರೆ, ಡಿ.4ರಂದು ಈ ಸಿನಿಮಾ 5.64 ಕೋಟಿ ರೂ. ಗಳಿಸಿದೆ. ಮೂರನೇ ದಿನವಾದ ಭಾನುವಾರ (ಡಿ.5) ಇನ್ನಷ್ಟು ಉತ್ತಮ ಆದಾಯ ಹರಿದುಬರುವ ನಿರೀಕ್ಷೆ ಇದೆ.

ಮೊದಲ ದಿನ ‘ಮದಗಜ’ ಗಳಿಸಿದ್ದು 7.86 ಕೋಟಿ ರೂ.!

ನಿರ್ದೇಶಕ ಮಹೇಶ್​ ಕುಮಾರ್​ ಆ್ಯಕ್ಷನ್​-ಕಟ್​ ಹೇಳಿದ ಎರಡನೇ ಸಿನಿಮಾ ಇದು. ಈ ಮೊದಲು ‘ಅಯೋಗ್ಯ’ ಚಿತ್ರ ನಿರ್ದೇಶಿಸಿದ್ದ ಅವರು ಈಗ ‘ಮದಗಜ’ ಮೂಲಕ ಆ್ಯಕ್ಷನ್​ ಪ್ರಧಾನ ಚಿತ್ರ ನಿರ್ದೇಶಿಸಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಬಂಡವಾಳ ಹೂಡಿದ್ದಾರೆ. ಮೊದಲ ದಿನ ಈ ಸಿನಿಮಾ 7.86 ಕೋಟಿ ರೂ. ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಎರಡೂ ದಿನದ ಕಲೆಕ್ಷನ್​ ಸೇರಿದರೆ 13.5 ಕೋಟಿ ರೂ. ಆಗಲಿದೆ.

‘ಮದಗಜ’ ಚಿತ್ರದಲ್ಲಿ ಶಿವರಾಜ್​ ಕೆ.ಆರ್​.ಪೇಟೆ, ಚಿಕ್ಕಣ್ಣ, ಧರ್ಮಣ್ಣ ಮುಂತಾದ ಹಾಸ್ಯ ಕಲಾವಿದರು ಕೂಡ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಗಮನ ಸೆಳೆಯುತ್ತಿವೆ. ಈ ಎಲ್ಲ ಕಾರಣಗಳಿಗಾಗಿ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ಖ್ಯಾತಿಯ ನಟ ಗರುಡ ರಾಮ್​ ಅವರು ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ಕಲಾವಿದ ಜಗಪತಿ ಬಾಬು ಅವರಿಗೆ ಮುಖ್ಯ ಪಾತ್ರವಿದೆ. ತಾಯಿ ಸೆಂಟಿಮೆಂಟ್​ ಕೂಡ ‘ಮದಗಜ’ ಚಿತ್ರದಲ್ಲಿ ಹೆಚ್ಚು ಹೈಲೈಟ್​ ಆಗಿದೆ.

ಇದನ್ನೂ ಓದಿ:

Madhagaja Movie Review: ವಾರಾಣಸಿಯಿಂದ ಕರುನಾಡಿನವರೆಗೆ ನಿರೀಕ್ಷಿತ ಹಾದಿಯಲ್ಲಿ ‘ಮದಗಜ’ ಮಾಸ್ ಪಯಣ

ಮಾಸ್​ ಮದಗಜ: ವಿಶೇಷ ಸಂದರ್ಶನದಲ್ಲಿ ಶ್ರೀಮುರಳಿ, ಆಶಿಕಾ, ಗರುಡ ರಾಮ್​ ಮಸ್ತ್ ಮಾತುಕತೆ