‘ಓಲ್ಡ್ ಮಾಂಕ್​’ ಬಿಡುಗಡೆಗೆ ದಿನಾಂಕ ಫಿಕ್ಸ್​; ಫೆ.25ಕ್ಕೆ ತೆರೆಕಾಣಲಿದೆ ಶ್ರೀನಿ, ಅದಿತಿ ಪ್ರಭುದೇವ ಸಿನಿಮಾ

| Updated By: ಮದನ್​ ಕುಮಾರ್​

Updated on: Jan 31, 2022 | 8:55 AM

‘ಬೀರ್​ಬಲ್’​, ‘ಶ್ರೀನಿವಾಸ ಕಲ್ಯಾಣ’​ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಶ್ರೀನಿ ಅವರು ‘ಓಲ್ಡ್​ ಮಾಂಕ್​’ ಮೂಲಕ ಯಾವ ರೀತಿ ಮನರಂಜನೆ ನೀಡಲಿದ್ದಾರೆ ಎಂಬುದು ಫೆ.25ರಂದು ಗೊತ್ತಾಗಲಿದೆ. ಈ ಚಿತ್ರದ ಟ್ರೇಲರ್ ಕೌತುಕ ಮೂಡಿಸಿದೆ.

‘ಓಲ್ಡ್ ಮಾಂಕ್​’ ಬಿಡುಗಡೆಗೆ ದಿನಾಂಕ ಫಿಕ್ಸ್​; ಫೆ.25ಕ್ಕೆ ತೆರೆಕಾಣಲಿದೆ ಶ್ರೀನಿ, ಅದಿತಿ ಪ್ರಭುದೇವ ಸಿನಿಮಾ
‘ಓಲ್ಡ್​ ಮಾಂಕ್​’ ಸಿನಿಮಾದಲ್ಲಿ ಅದಿತಿ ಪ್ರಭುದೇವ, ಶ್ರೀನಿ
Follow us on

ಬಹುನಿರೀಕ್ಷಿತ ಅನೇಕ ಸಿನಿಮಾಗಳ ರಿಲೀಸ್​ ದಿನಾಂಕದ ಬಗ್ಗೆ ಚಿತ್ರತಂಡಗಳು ಘೋಷಣೆ ಮಾಡುತ್ತಿವೆ. ಕೊರೊನಾ ವೈರಸ್​ ಮೂರನೇ ಅಲೆಯ ಕಾರಣದಿಂದ ರಿಲೀಸ್​ ಡೇಟ್​ ಮುಂದೂಡಿಕೊಂಡಿದ್ದ ಸಿನಿಮಾಗಳೆಲ್ಲ ಈಗ ಬಿಡುಗಡೆಗೆ ಸಜ್ಜಾಗುತ್ತಿವೆ. ಕನ್ನಡದ ‘ಓಲ್ಡ್​ ಮಾಂಕ್​’ ಸಿನಿಮಾ (Old Monk Movie) ಕೂಡ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದೆ. ಶ್ರೀನಿ (ಎಂ.ಜಿ. ಶ್ರೀನಿವಾಸ್)​ ಮತ್ತು ಅದಿತಿ ಪ್ರಭುದೇವ (Aditi Prabhudeva) ಜೋಡಿಯಾಗಿ ನಟಿಸಿರುವ ಈ ಸಿನಿಮಾ ಫೆ.25ರಂದು ಬಿಡುಗಡೆ ಆಗಲಿದೆ. ಹಲವು ದಿನಗಳ ಮುನ್ನವೇ ‘ಓಲ್ಡ್​ ಮಾಂಕ್​’ ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಇಷ್ಟೊತ್ತಿಗಾಗಲೇ ತೆರೆಕಂಡಿರಬೇಕಿತ್ತು. ಆದರೆ ಅದಕ್ಕೆ ಕೊರೊನಾ ಅಡ್ಡಿ ಆಗಿತ್ತು. ಈಗ ನಿಧಾನವಾಗಿ ಗಾಂಧಿನಗರದ ವಹಿವಾಟು ಸಹಜಸ್ಥಿತಿಗೆ ಮರಳುವ ಸೂಚನೆ ಸಿಕ್ಕಿದೆ. ಅನೇಕ ಸಿನಿಮಾಗಳು ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಆ ಪೈಕಿ ‘ಓಲ್ಡ್​ ಮಾಂಕ್​’ ಕೂಡ ರಿಲೀಸ್​ಗೆ ತಯಾರಿ ಮಾಡಿಕೊಂಡಿದೆ. ಶ್ರೀನಿ (Srini) ಅವರು ಹೀರೋ ಆಗಿ ನಟಿಸುವುದರ ಜೊತೆಗೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ.

2021ರ ಅಕ್ಟೋಬರ್​ನಲ್ಲಿಯೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ​ಆಗಿತ್ತು. ಒಂದು ಮಿಲಿಯನ್​ಗಿಂತಲೂ ಹೆಚ್ಚು ಬಾರಿ ಈ ಟ್ರೇಲರ್​ ವೀಕ್ಷಣೆ ಕಂಡಿದೆ. ಆ ಮೂಲಕ ಪ್ರೇಕ್ಷಕರಿಗೆ ‘ಓಲ್ಡ್​ ಮಾಂಕ್​’ ಸಿನಿಮಾ ಮೇಲೆ ಎಷ್ಟು ಕೌತುಕ ಇದೆ ಎಂಬುದು ಗೊತ್ತಾಗಿದೆ. ಸಖತ್​ ಫನ್ನಿ ಆಗಿ ಈ ಟ್ರೇಲರ್​ ಅನ್ನು ಕಟ್ಟಿಕೊಡಲಾಗಿದೆ. ರಣವೀರ್​ ಸಿಂಗ್​, ಎ.ಆರ್​. ರೆಹಮಾನ್, ಉಪೇಂದ್ರ​ ಮುಂತಾದ ಘಟಾನಿಘಟಿಗಳ ಹೆಸರುಗಳು ಟ್ರೇಲರ್​ನಲ್ಲಿ ಕಾಣಿಸಿಕೊಂಡಿದೆ. ಆದರೆ ಅವರ‍್ಯಾರಿಗೂ ಈ ಚಿತ್ರ ಸಂಬಂಧಪಟ್ಟಿಲ್ಲ! ಆರ್​ಆರ್​ಆರ್​, ಕೆಜಿಎಫ್​, ಟೈಟಾನಿಕ್​, ಅವತಾರ್​ ಮುಂತಾದ ಸಿನಿಮಾಗಳ ಶೀರ್ಷಿಕೆಗಳನ್ನು ಈ ಚಿತ್ರದ ಟ್ರೇಲರ್​ನಲ್ಲಿ ಬಳಕೆ ಮಾಡಲಾಗಿದೆ. ಆದರೆ ಆ ಸಿನಿಮಾಗಳಿಗೂ ‘ಓಲ್ಡ್​ ಮಾಂಕ್​’ ಚಿತ್ರಕ್ಕೂ ಸಂಬಂಧ ಇಲ್ಲ. ಕೌತುಕ ಮೂಡಿಸುವ ಸಲುವಾಗಿ ಇಂಥದ್ದೊಂದು ಪ್ರಯೋಗವನ್ನು ಶ್ರೀನಿ ಮಾಡಿದ್ದಾರೆ.

ಅದಿತಿ ಪ್ರಭುದೇವ, ಶ್ರೀನಿ ಜೊತೆಗೆ ಸುಜಯ್​ ಶಾಸ್ತ್ರಿ, ಎಸ್​. ನಾರಾಯಣ್​, ಸಿಹಿ ಕಹಿ ಚಂದ್ರು, ಅರುಣಾ ಬಾಲರಾಜ್​ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸೌರಭ್​ ಮತ್ತು ವೈಭವ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ದೀಪು ಎಸ್​. ಕುಮಾರ್​ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಭರತ್​ ಪರಶುರಾಮ್​ ಛಾಯಾಗ್ರಹಣ ಮಾಡಿದ್ದಾರೆ.

‘ಬೀರ್​ಬಲ್​’, ‘ಶ್ರೀನಿವಾಸ ಕಲ್ಯಾಣ’​ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಶ್ರೀನಿ ಅವರು ಈ ಬಾರಿ ಯಾವ ರೀತಿಯ ಮನರಂಜನೆ ನೀಡಲಿದ್ದಾರೆ ಎಂಬುದು ಫೆ.25ರಂದು ಗೊತ್ತಾಗಲಿದೆ. ಫೆ.25ರೊಳಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ. ಹೌಸ್​ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂಬ ಒತ್ತಾಯ ಚಿತ್ರರಂಗದಿಂದ ಕೇಳಿಬರುತ್ತಿದೆ.

ಇದನ್ನೂ ಓದಿ:

ರಿಲೀಸ್​ ಡೇಟ್​ ಮುಂದೂಡಿಕೊಂಡ ‘ಗಜಾನನ ಆ್ಯಂಡ್​ ಗ್ಯಾಂಗ್​’; ಚಿತ್ರತಂಡ ನೀಡಿದ ಕಾರಣ ಏನು?

ಪುನೀತ್​ ನಟನೆಯ ‘ಜೇಮ್ಸ್​’ ಶೂಟಿಂಗ್​ ಮುಕ್ತಾಯ; ರಿಲೀಸ್​ ಡೇಟ್​ ತಿಳಿಯಲು ಕಾದಿರುವ ಅಭಿಮಾನಿಗಳು