ಅನಾಥ ಶವವಾದ ಕನ್ನಡ ನಿರ್ದೇಶಕ; ಹೆಣ ತೆಗೆದುಕೊಳ್ಳಲು ಒಪ್ಪದ ಕುಟುಂಬ

SS David: ಖ್ಯಾತ ಕನ್ನಡ ಚಿತ್ರಕಥೆಗಾರ ಮತ್ತು ನಿರ್ದೇಶಕ ಎಸ್.ಎಸ್. ಡೇವಿಡ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 'ಅಗ್ನಿ ಐಪಿಎಸ್' ಮತ್ತು 'ಪೋಲಿಸ್ ಸ್ಟೋರಿ' ಚಿತ್ರಗಳಿಗೆ ಅವರು ಚಿತ್ರಕಥೆ ಬರೆದಿದ್ದರು. ಅವರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಬರಲು ನಿರಾಕರಿಸಿರುವುದರಿಂದ ಅವರ ಪಾರ್ಥಿವ ಶರೀರ ವಿಕ್ಟೋರಿಯಾ ಆಸ್ಪತ್ರೆಯಲ್ಲಿದೆ.

ಅನಾಥ ಶವವಾದ ಕನ್ನಡ ನಿರ್ದೇಶಕ; ಹೆಣ ತೆಗೆದುಕೊಳ್ಳಲು ಒಪ್ಪದ ಕುಟುಂಬ
ಡೇವಿಡ್ (ಚಿತ್ರ ಕೃಪೆ: ಬಿ ಗಣಪತಿ ಯೂಟ್ಯೂಬ್ ಚಾನೆಲ್)

Updated on: Sep 01, 2025 | 12:02 PM

ಸಾಯಿಕುಮಾರ್ ನಟನೆಯ ‘ಅಗ್ನಿ ಐಪಿಎಸ್’ ಚಿತ್ರ ಒಂದು ಕಾಲದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಈ ಚಿತ್ರ ಈಗಲೂ ಅನೇಕರ ಫೇವರಿಟ್ ಆಗಿದೆ. ಇದಲ್ಲದೆ, ‘ಪೋಲಿಸ್ ಸ್ಟೋರಿ’ ಸಿನಿಮಾದಲ್ಲೂ ಪೊಲೀಸ್ ಇಲಾಖೆಯ ಬಗ್ಗೆ ಹೇಳಲಾದ ಸಿನಿಮಾ. ಈ ರೀತಿಯ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ಎಸ್​ಎಸ್. ಡೇವಿಡ್ ನಿಧನ ಹೊಂದಿದ್ದಾರೆ. ಈಗ ಅವರು ಅನಾಥ ಶವವಾಗಿದ್ದಾರೆ. ಸಾವಿನ ಬಳಿಕ ಅವರನ್ನು ನೋಡಲು ಯಾರೂ ಇಲ್ಲವಾಗಿದ್ದಾರೆ.

ಎಸ್​ಎಸ್ ಡೇವಿಡ್ ಅವರು ಚಿತ್ರಕಥೆ ಬರಹಗಾರನಾಗಿ ಮಾತ್ರವಲ್ಲದೆ ನಿರ್ದೇಶನದಲ್ಲೂ ಛಾಪು ಮೂಡಿಸಿದ್ದರು. ‘ಹಾಯ್ ಬೆಂಗಳೂರು’ ಹಾಗೂ ‘ಧೈರ್ಯ’ ಚಿತ್ರವನ್ನ ನಿರ್ದೇಶನ ಮಾಡಿ ಡೇವಿಡ್ ಗಮನ ಸೆಳೆದಿದ್ದರು. ಈಗ ಅವರು ನಿಧನ ಹೊಂದಿದ್ದು, ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ಆದರೆ, ಕುಟುಂಬದವರು ಅವರ ಶವ ಪಡೆಯಲು ಸಿದ್ಧರಿಲ್ಲ.

ನಿಧನ ಹೊಂದಿದ್ದು ಹೇಗೆ?

ಡೇವಿಡ್ ಅವರು ಆಗಸ್ಟ್ 31ರಂದು ಮೆಡಿಕಲ್ ಶಾಪ್​ಗೆ ತೆರಳಿದ್ದರು. ಈ ವೇಳೆ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಆರ್​ಆರ್ ನಗರದ ಎಸ್​ಎಸ್​ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಅವರು  ಹೃದಯಘಾತದಿಂದ ಕೊನೆಯುಸಿರು ಎಳೆದಿದ್ದಾರೆ.

ಇದನ್ನೂ ಓದಿ
‘ನನ್ನ ಗೇಲಿ ಮಾಡುವುದರಿಂದ ನಿಮಗೆ ಊಟ ಸಿಗುತ್ತಿದೆ ಎಂದರೆ ಖುಷಿ’; ಸಲ್ಮಾನ್
‘ಸು ಫ್ರಮ್ ಸೋ ಅಬ್ಬರ’; 38ನೇ ದಿನ ದೊಡ್ಡ ಮೊತ್ತ ಬಾಚಿದ ಸಿನಿಮಾ
‘ಕಡಿಮೆ ಬೆಲೆ ಎಂದು ಮುಸ್ಲಿಮರು ಗೋಮಾಂಸ ಸೇವಿಸುತ್ತಾರೆ, ನಾನು ತಿಂದೇ ಇಲ್ಲ’
ಗರ್ಲ್​ಫ್ರೆಂಡ್​ಗೆ ಮನೆ ಕೊಟ್ಟು ಬಾಡಿಗೆ ಪಡೆದ ಹೃತಿಕ್ ರೋಷನ್

ಇದನ್ನೂ ಓದಿ:ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಚಿತಾ ರಾಮ್? 

ಅನಾಥ ಶವ

ಈಗ ಡೇವಿಡ್ ಅನಾಥ ಶವವಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಡೇವಿಡ್ ಪಾರ್ಥಿವ ಶರೀರ ರವಾನೆ ಆಗಿದೆ. ಸದ್ಯ ಕುಟುಂಬದವರು ಬಾರದೆ ಬಾಡಿ ಕೊಡೋದಿಲ್ಲ ಎಂದು ಆರ್​ಆರ್​ ನಗರ ಪೊಲೀಸರು ಹೇಳಿದ್ದಾರೆ. ಡೇವಿಡ್ ಅಕ್ಕ ಉಡುಪಿಯ ಕಾಪುವಿನಲ್ಲಿದ್ದಾರೆ. ಅವರು ತಮಗೆ ಬರೋಕೆ ಸಾಧ್ಯವಿಲ್ಲ ಎಂದು ಹೇಳಿದ್ದು, ಇಲ್ಲಿಯೇ ಅಂತಿಮ ಸಂಸ್ಕಾರ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈಗ ಡೇವಿಡ್ ಅವರು ಅನಾಥ ಶವವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:53 am, Mon, 1 September 25