ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಚಿತಾ ರಾಮ್?
Rachita Ram: ಕನ್ನಡದ ಜನಪ್ರಿಯ ನಟಿ ರಚಿತಾ ರಾಮ್ ಇತ್ತೀಚೆಗಷ್ಟೆ ತಮಿಳು ಸಿನಿಮಾ ಒಂದರಲ್ಲಿ ಸಖತ್ ಆಗಿ ಮಿಂಚಿದ್ದಾರೆ. ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ರಚಿತಾ ರಾಮ್ ಅವರ ಪಾತ್ರ ಸಖತ್ ಹಿಟ್ ಆಗಿದೆ. ಇದೀಗ ಆ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಅವರೊಟ್ಟಿಗೆ ಸಿನಿಮಾನಲ್ಲಿ ನಟಿಸಲಿದ್ದಾರೆ ರಚಿತಾ ರಾಮ್.

ಕನ್ನಡದ ನಟಿ ರಚಿತಾ ರಾಮ್ ಅವರು ‘ಕೂಲಿ’ ಸಿನಿಮಾದಲ್ಲಿ ಒಂದು ಪವರ್ಫುಲ್ ಪಾತ್ರ ಮಾಡಿದ್ದು ಗೊತ್ತೇ ಇದೆ. ಈ ಚಿತ್ರದಲ್ಲಿ ಅವರು ಕಲ್ಯಾಣಿ ಹೆಸರಿನ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿ ಅವರದ್ದು ವಿಲನ್ ನೆಗೆಟಿವ್ ಶೇಡ್ನ ಪಾತ್ರ ಎಂಬುದು ವಿಶೇಷ. ಈಗ ಅವರು ದೊಡ್ಡ ಪರದೆಮೇಲೆ ಲೋಕೇಶ್ ಕನಗರಾಜ್ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಲೋಕೇಶ್ ಕನಗರಾಜ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ತಮಿಳಿನ ಖ್ಯಾತ ನಿರ್ದೇಶಕರು ಕೂಡ ಹೌದು. ವಿಶೇಷ ಎಂದರೆ ಅವರು ಈಗ ಹೀರೋ ಆಗುತ್ತಿದ್ದಾರೆ. ಅರುಣ್ ಮಾತೇಶ್ವರನ್ ನಿರ್ದೇಶನದ ಸಿನಿಮಾದಲ್ಲಿ ಲೋಕೇಶ್ ನಟಿಸುತ್ತಿದ್ದಾರೆ. ಇದಕ್ಕೆ ರಚಿತಾ ನಾಯಕಿ ಎಂಬ ವರದಿಗಳು ಬಂದಿವೆ.
ಲೋಕೇಶ್ ಅವರು ಹೀರೋ ಆಗಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವರದಿಗಳು ಹೇಳುವಂತೆ ಅವರು ಥೈಲ್ಯಾಂಡ್ಗೆ ತೆರಳಿದ್ದಾರೆ. ಅಲ್ಲಿ, ಅವರು ನಟನೆಗೆ ತರಬೇತಿ ಪಡೆಯುತ್ತಿದ್ದಾರೆ. ಹೀಗಿರುವಾಗಲೇ ರಚಿತಾ ರಾಮ್ ಅವರು ಈ ಚಿತ್ರಕ್ಕೆ ನಾಯಕಿ ಎನ್ನುವ ವಿಚಾರ ಹರಿದಾಡಿದೆ.
ಲೋಕೇಶ್ ಕನಗರಾಜ್ ಅವರೇ ‘ಕೂಲಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರು ರಚಿತಾಗೆ ಪವರ್ಫುಲ್ ಪಾತ್ರವನ್ನೇ ನೀಡಿದ್ದಾರೆ. ಈ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಈಗ ಅವರು ಕಾಲಿವುಡ್ನಲ್ಲಿ ನಾಯಕಿ ಆಗಿ ಮಿಂಚಲು ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ:ಕೂಲಿ ಸಿನಿಮಾದಲ್ಲಿ ಮಿಂಚಿದ ರಚಿತಾ ರಾಮ್: ಸಿಕ್ತು ಮೆಚ್ಚುಗೆ
ದಕ್ಷಿಣ ಭಾರತದಲ್ಲಿ ಈ ಹೊಸ ಸಿನಿಮಾದ ಶೂಟ್ ನಡೆಯಲಿದೆ. ಒಂದೇ ಶೆಡ್ಯೂಲ್ನಲ್ಲಿ ಶೂಟ್ ಮುಗಿಸೋ ಪ್ಲ್ಯಾನ್ ಇದೆ. ಲೋಲೇಶ್ ಅವರು ಇದಾದ ಬಳಿಕ ಬಾಲಿವುಡ್ ನಟ ಆಮಿರ್ ಖಾನ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಬಗ್ಗೆ ವರದಿ ಇದೆ. ರಚಿತಾ ಅವರು ಲೋಕೇಶ್ ಸಿನಿಮಾದ ಭಾಗ ಆಗುತ್ತಿರುವ ವಿಚಾರ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ರಚಿತಾ ರಾಮ್ ಅವರು ಇತ್ತೀಚೆಗೆ ಅನುಶ್ರೀ ಅವರ ವಿವಾಹದಲ್ಲಿ ಕಾಣಿಸಿಕೊಂಡಿದ್ದರು. ಆ ವಿಡಿಯೋಗಳು ವೈರಲ್ ಆಗಿ ಗಮನ ಸೆಳೆದಿದ್ದನ್ನು ಕಾಣಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



