ಮರಾಠಿಗೆ ‘ಸು ಫ್ರಮ್ ಸೋ’ ರಿಮೇಕ್; ಹಿಂದಿ ಯಶಸ್ವಿ ಸಿನಿಮಾಗೆ ಲಿಂಕ್

'ಸು ಫ್ರಮ್ ಸೋ' ಸಿನಿಮಾ ಕೇವಲ 5 ಕೋಟಿ ಬಜೆಟ್‌ನಲ್ಲಿ ನೂರಾರು ಕೋಟಿ ಗಳಿಸಿ ಭಾರಿ ಯಶಸ್ಸು ಕಂಡಿತು. ಈಗ ಈ ಕನ್ನಡ ಹಿಟ್ ಚಿತ್ರ ಮರಾಠಿಗೆ 'ತುಂಬಾಡ್ಚಿ ಮಂಜುಳಾ' ಹೆಸರಿನಲ್ಲಿ ರಿಮೇಕ್ ಆಗಿದೆ. ಹಿಂದಿಯ 'ತುಂಬಾಡ್' ಸಿನಿಮಾದ ಹೆಸರಿನ ಕನೆಕ್ಷನ್ ಮೂಲಕ ಈ ರಿಮೇಕ್ ಗಮನ ಸೆಳೆದಿದೆ. ಹಳ್ಳಿ ಕಥೆ, ಕಾಮಿಡಿ ಅಂಶಗಳುಳ್ಳ ಮರಾಠಿ ಟ್ರೇಲರ್ ಭಾರಿ ಮೆಚ್ಚುಗೆ ಗಳಿಸುತ್ತಿದೆ.

ಮರಾಠಿಗೆ ‘ಸು ಫ್ರಮ್ ಸೋ’ ರಿಮೇಕ್; ಹಿಂದಿ ಯಶಸ್ವಿ ಸಿನಿಮಾಗೆ ಲಿಂಕ್
ಸು ಫ್ರಮ್ ಸೋ
Edited By:

Updated on: May 23, 2026 | 9:32 AM

‘ಸು ಫ್ರಮ್ ಸೋ’ ಸಿನಿಮಾ 2025ರ ಯಶಸ್ವಿ ಸಿನಿಮಾಗಳಲ್ಲಿ ಒಂದು. ಕೇವಲ 5 ಕೋಟಿ ರೂಪಾಯಿ ಬಜೆಟ್​​ನಲ್ಲಿ ತಯಾರಾದ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿತು. ಈ ಚಿತ್ರ ಸದ್ದಿಲ್ಲದೆ ಮರಾಠಿಗೆ ರಿಮೇಕ್ ಆಗಿದೆ. ಮರಾಠಿಯಲ್ಲಿ ಈ ಚಿತ್ರಕ್ಕೆ ದೊಡ್ಡ ಹಿಂದಿ ಸಿನಿಮಾದ ಕನೆಕ್ಷನ್ ಕೊಡಲಾಗಿದೆ. ಈ ಟ್ರೇಲರ್​​ಗೆ ಮರಾಠಿ ಭಾಷೆಯಲ್ಲಿ ಮೆಚ್ಚುಗೆ ಸಿಗುತ್ತಿದೆ.

ಕನ್ನಡದಲ್ಲಿ ‘ಸುಲೋಚನ ಫ್ರಮ್ ಸೋಮೇಶ್ವರ’ ಎಂಬ ಟೈಟಲ್​​ನೊಂದಿಗೆ ಸಿನಿಮಾ ರಿಲೀಸ್ ಆಗಿತ್ತು. ಟೈಟಲ್ ಉದ್ದ ಆಗುತ್ತದೆ ಎಂಬ ಕಾರಣಕ್ಕೆ, ‘ಸು ಫ್ರಮ್ ಸೋ’ ಎಂದು ಇಡಲಾಗಿತ್ತು. ಇದನ್ನು ಮರಾಠಿಯಲ್ಲಿ ‘ತುಂಬಾಡ್ಚಿ ಮಂಜುಳಾ’ ಎಂದು ಇಡಲಾಗಿದೆ. ಅಂದರೆ ತುಂಬಾಡ್​ನ ಮಂಜುಳ ಎಂದರ್ಥ. ಈ ಟೈಟಲ್ ಇಡೋದಕ್ಕೂ ಒಂದು ಕಾರಣ ಇದೆ ಎನ್ನಲಾಗಿದೆ.

‘ತುಂಬಾಡ್’ ಹೆಸರಿನ ಸಿನಿಮಾ ಬಾಲಿವುಡ್​​ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ತುಂಬಾಡ್ ಊರಿಗೆ ಕಾಲ್ಪನಿಕ ಕಥೆಯ ಹಿನ್ನೆಲೆ ಸೇರಿಸಲಾಗಿತ್ತು . ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಕಾರಣದಿಂದಲೇ ತುಂಬಾಡ್ ಹೆಸರನ್ನು ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಾ ಇದೆ.

ಇನ್ನು, ‘ತುಂಬಾಡ್ಚಿ ಮಂಜುಳಾ’ ಚಿತ್ರ ಬಹುತೇಕ ‘ಸು ಫ್ರಮ್ ಸೋ’ ಮಾದರಿಯಲ್ಲೇ ಇದೆ. ಹಳ್ಳಿ ಕಥೆ, ಕಾಮಿಡಿ ಮೊದಲಾದ ವಿಷಯಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ‘ಸು ಫ್ರಮ್ ಸೋ’ ಟ್ರೇಲರ್​​ನಲ್ಲಿ ಗುರೂಜಿಯ ದರ್ಶನ ಆಗಿರಲಿಲ್ಲ, ಆದರೆ, ಮರಾಠಿ ಟ್ರೇಲರ್​​ನಲ್ಲಿ ಇದನ್ನು ತೋರಿಸಲಾಗಿದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಸುಮೇಧ್ ಬತ್ತಳಿಕೆಯಿಂದ ಬಂತು ‘ತುಳಸಿ’; ಹಾಡು ಕಿವಿಗೆ ಇಂಪು

ಮರಾಠಿಯಲ್ಲಿ ಜಿತೇಂದ್ರ ಜೋಶಿ, ಓಂ ಭುಟ್ಕರ್,ಮಾರ್ಕಂಡ್ ಅನಸ್ಪುರೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ವಿವಿಧ್ ಕೊರಗಾಂವ್ಕರ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

Published On - 9:22 am, Sat, 23 May 26

Web contact

TV9 Kannada

Read More
Follow Us