AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡೂವರೆ ಲಕ್ಷದ ಚೆಕ್ ಹರಿದು ಹಾಕಿದ ಪ್ರಶಾಂತ್; ವಿನ್ನರ್​ ಅಮೌಂಟ್​​ಗೆ ಬಿತ್ತು ಕತ್ತರಿ

ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್‌ನಲ್ಲಿ ಪ್ರಶಾಂತ್ ಹಾಗೂ ಕಿರಣ್ ಶಾಸ್ತ್ರಿ ತಮ್ಮ ಮನೆಯವರ ಪತ್ರ ಪಡೆಯಲು 2.5 ಲಕ್ಷ ರೂಪಾಯಿ ಚೆಕ್ ಹರಿದುಹಾಕಿದ್ದಾರೆ. ಇದರಿಂದಾಗಿ ವಿನ್ನರ್ ಪ್ರೈಜ್ ಮನಿ 50 ಲಕ್ಷದಿಂದ 47.50 ಲಕ್ಷ ರೂಪಾಯಿಗೆ ಇಳಿದಿದ್ದು, ಈ ನಿರ್ಧಾರ ಸಖತ್ ವೈರಲ್ ಆಗಿದೆ.  

ಎರಡೂವರೆ ಲಕ್ಷದ ಚೆಕ್ ಹರಿದು ಹಾಕಿದ ಪ್ರಶಾಂತ್; ವಿನ್ನರ್​ ಅಮೌಂಟ್​​ಗೆ ಬಿತ್ತು ಕತ್ತರಿ
ಪ್ರಶಾಂತ್
ರಾಜೇಶ್ ದುಗ್ಗುಮನೆ
|

Updated on: Nov 05, 2026 | 12:12 PM

Share

ಮುಖ್ಯಾಂಶಗಳು

  • ಬಿಗ್ ಬಾಸ್ ವಿನ್ನರ್ ಪ್ರೈಜ್ ಮೌನಿಗೆ ಕತ್ತರಿ
  • 2.5 ಲಕ್ಷ ರೂಪಾಯಿ ಚೆಕ್ ಹರಿದುಹಾಕಿದ ಪ್ರಶಾಂತ್
  • ಮನೆಯವರ ಪತ್ರಕ್ಕಾಗಿ ದೊಡ್ಡ ಮೊತ್ತ ತ್ಯಾಗ

ಬಿಗ್ ಬಾಸ್ ವಿನ್ನರ್​ಗೆ ಪ್ರತಿ ವರ್ಷ ಕೊಡುತ್ತಾ ಇದ್ದಿದ್ದುದ್ದು 50 ಲಕ್ಷ ರೂಪಾಯಿ. ಆದರೆ, ಈ ಬಾರಿ 50 ಲಕ್ಷ ರೂಪಾಯಿ ಸಿಗೋದಿಲ್ಲ. ಬದಲಿಗೆ 47.50 ಲಕ್ಷ ರೂಪಾಯಿ ಮಾತ್ರ ಸಿಗಲಿದೆ. ಇದಕ್ಕೆ ಬಿಗ್ ಬಾಸ್ ಮನೆಯಲ್ಲಿ ನಡೆದ ಬೆಳವಣಿಗೆಯೇ ಕಾರಣ. ಬಿಗ್ ಬಾಸ್ ಕೊಟ್ಟ ಟಾಸ್ಕ್ ಒಂದರಲ್ಲಿ ಪ್ರಶಾಂತ್ ಹಾಗೂ ಕಿರಣ್ ಶಾಸ್ತ್ರಿ ಗೆದ್ದಿದ್ದೇ ಇದಕ್ಕೆ ಕಾರಣ. ಅಷ್ಟಕ್ಕೂ ಏನಾಯ್ತು ಎಂಬುದರ ವಿವರ ಇಲ್ಲಿದೆ.

ಟಾಸ್ಕ್‌ನಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆ

ಈ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ತಮ್ಮ ಮನೆಯವರ ಪತ್ರ ಪಡೆದುಕೊಳ್ಳುವ ಅತ್ಯಂತ ಭಾವನಾತ್ಮಕ ಹಾಗೂ ಕಠಿಣವಾದ ಟಾಸ್ಕ್ ನೀಡಲಾಗಿತ್ತು. ಈ ವಿಶೇಷ ಟಾಸ್ಕ್‌ನಲ್ಲಿ ಪ್ರಶಾಂತ್ ಹಾಗೂ ಕಿರಣ್ ಶಾಸ್ತ್ರಿ ಅವರನ್ನು ಕನ್ಫೆಷನ್ ರೂಂ ಹಾಗೂ ಆ್ಯಕ್ಟಿವಿಟಿ ರೂಂಗೆ ಕಳುಹಿಸಲಾಗಿತ್ತು. ಇಬ್ಬರ ಎದುರು 2.5 ಲಕ್ಷ ರೂಪಾಯಿಯ ಚೆಕ್ ಹಾಗೂ ಪತ್ರವನ್ನು ಇಡಲಾಗಿತ್ತು.

ಚೆಕ್ ಹರಿದು ಪತ್ರ ಪಡೆದ ಸ್ಪರ್ಧಿಗಳು

ಬಿಗ್ ಬಾಸ್ ನಿಯಮದ ಪ್ರಕಾರ, ಇಬ್ಬರೂ ಪತ್ರಗಳನ್ನು ಎತ್ತಿಕೊಂಡರೆ ಬಹುಮಾನದ ಮೊತ್ತದಿಂದ ಒಟ್ಟು 5 ಲಕ್ಷ ರೂಪಾಯಿ ಕಡಿತಗೊಳ್ಳುತ್ತಿತ್ತು. ಆದರೆ ಒಬ್ಬರು ಚೆಕ್ ಹರಿದು ಮತ್ತೊಬ್ಬರು ಪತ್ರ ಪಡೆದರೆ, ಬಹುಮಾನದ ಮೊತ್ತದಿಂದ ಕೇವಲ ಎರಡೂವರೆ ಲಕ್ಷ ರೂಪಾಯಿ ಮಾತ್ರ ಕಡಿಮೆ ಆಗುತ್ತಿತ್ತು. ಇಬ್ಬರೂ ಪತ್ರ ಬಿಡಲು ನಿರ್ಧರಿಸಿದರೆ ಬಹುಮಾನ ಮೊತ್ತದಿಂದ 5 ಲಕ್ಷ ರೂಪಾಯಿ ಉಳಿಯುತ್ತಿತ್ತು. ಆದರೆ, ಪ್ರಶಾಂತ್ ಅವರು ತಮ್ಮ ಎದುರಿನ ಚೆಕ್ ಅನ್ನು ಹರಿದುಹಾಕಿ ಪತ್ರವನ್ನು ಪಡೆದುಕೊಂಡರು. ಮತ್ತೊಂದೆಡೆ ಕಿರಣ್ ಶಾಸ್ತ್ರಿ ಪತ್ರದ ಬದಲಾಗಿ ಚೆಕ್ ಆಯ್ಕೆ ಮಾಡಿಕೊಂಡರು.

ಇದನ್ನೂ ಓದಿ: ಬಿಗ್​​ಬಾಸ್ ಮನೆಯಲ್ಲಿ ತಾಂಡವ್-ಪ್ರಶಾಂತ್ ಸಖತ್ ಕಾಮಿಡಿ: ವಿಡಿಯೋ

ನಿಯಮ ಇದ್ದಿದ್ದು ಇಬ್ಬರ ಆಯ್ಕೆಯೂ ಬೇರೆ ಆಗಿದ್ದರೆ ಮಾತ್ರ ಪತ್ರ ಸಿಗುತ್ತದೆ ಎಂದು. ಅದೇ ರೀತಿ ಇಬ್ಬರಿಗೂ ತಮ್ಮ ಮನೆಯವರ ಪತ್ರಗಳು ಸಿಕ್ಕವು. ಆದರೆ ಈ ಪ್ರಕ್ರಿಯೆಯಿಂದಾಗಿ ಬಿಗ್ ಬಾಸ್ ವಿನ್ನರ್ ಪ್ರೈಜ್ ಮನಿಯಿಂದ ಬರೋಬ್ಬರಿ 2.5 ಲಕ್ಷ ರೂಪಾಯಿ ಕಟ್ ಆಯಿತು. ಈ ಹಿಂದೆ 50 ಲಕ್ಷ ರೂಪಾಯಿ ಸಿಗುತ್ತಿದ್ದ ವಿನ್ನರ್ ಅಮೌಂಟ್, ಈಗ ಈ ಕಡಿತದ ಕಾರಣದಿಂದ 47.50 ಲಕ್ಷ ರೂಪಾಯಿಗೆ ಇಳಿದಿದೆ. ಮನೆಯವರ ಪತ್ರಕ್ಕಾಗಿ ಸ್ಪರ್ಧಿಗಳು ದೊಡ್ಡ ಮೊತ್ತದ ಹಣವನ್ನು ಬಿಟ್ಟುಕೊಟ್ಟಿರುವುದು ಸದ್ಯ ಮನೆಮಂದಿ ಹಾಗೂ ವೀಕ್ಷಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More