AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

25ನೇ ದಿನಕ್ಕೆ ಲಕ್ಷಕ್ಕೆ ಕುಸಿದ ‘ಸು ಫ್ರಮ್ ಸೋ’ ಕಲೆಕ್ಷನ್; ಒಟ್ಟಾರೆ ಗಳಿಕೆ ಎಷ್ಟು?

‘ಸು ಫ್ರಮ್ ಸೋ’ ಚಿತ್ರವು ತನ್ನ ಉತ್ತಮ ಪ್ರದರ್ಶನದಿಂದ 100 ಕೋಟಿ ಕ್ಲಬ್ ಸೇರಿದೆ. ಆದರೆ, ನಾಲ್ಕನೇ ಸೋಮವಾರದಿಂದ ಚಿತ್ರದ ಗಳಿಕೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಮೊದಲ ಮೂರು ಸೋಮವಾರಗಳಲ್ಲಿ ಅದ್ಭುತ ಗಳಿಕೆ ಮಾಡಿದ್ದ ಚಿತ್ರ, ಈಗ ನಿಧಾನವಾಗಿ ಕುಸಿತದ ಹಾದಿ ಹಿಡಿದಿದೆ.

25ನೇ ದಿನಕ್ಕೆ ಲಕ್ಷಕ್ಕೆ ಕುಸಿದ ‘ಸು ಫ್ರಮ್ ಸೋ’ ಕಲೆಕ್ಷನ್; ಒಟ್ಟಾರೆ ಗಳಿಕೆ ಎಷ್ಟು?
ಸು ಫ್ರಮ್ ಸೋ
ರಾಜೇಶ್ ದುಗ್ಗುಮನೆ
|

Updated on: Aug 19, 2025 | 8:53 AM

Share

ಸಿನಿಮಾ ರೀಲೀಸ್ ಆದ ಮೊದಲ ಮೂರು ದಿನ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತವೆ. ಆದರೆ, ಮೊದಲ ಸೋಮವಾರ ಪ್ರತಿ ಸಿನಿಮಾಗಳಿಗೂ ಒಂದು ಸವಾಲು. ಆದರೆ, ‘ಸು ಫ್ರಮ್ ಸೋ’ ಸಿನಿಮಾ (Su From So) ಸತತ ಮೂರು ಸೋಮವಾರವೂ ಅದ್ಭುತ ಗಳಿಕೆ ಮಾಡಿತ್ತು. ಆದರೆ, ನಾಲ್ಕನೇ ಸೋಮವಾರ ಚಿತ್ರದ ಗಳಿಕೆ ಲಕ್ಷಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ತಗ್ಗುವ ಸಾಧ್ಯತೆ ಇದೆ.

‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡಿದ್ದು ಕೇವಲ 78 ಲಕ್ಷ ರೂಪಾಯಿ ಮಾತ್ರ. ನಂತರದ ದಿನಗಳಲ್ಲಿ ಸಿನಿಮಾ ಕೋಟಿಗಳಲ್ಲಿ ವ್ಯವಹಾರ ಮಾಡಿತು. ಮೊದಲ ಎರಡು ವಾರ ಸಿನಿಮಾ 3+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ನಂತರ 1-2 ಕೋಟಿ ರೂಪಾಯಿ ಸರಾಸರಿ ಗಳಿಕೆ ಮಾಡುತ್ತಿತ್ತು. ಆದರೆ, ಈಗ 25ನೇ ದಿನದಂದು ಸಿನಿಮಾದ ಗಳಿಕೆಯಲ್ಲಿ ಕುಸಿತ ಕಂಡಿದೆ.

‘ಸು ಫ್ರಮ್ ಸೋ’ ಚಿತ್ರ ಆಗಸ್ಟ್ 19ರಂದು 88 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ 106 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡದ ಚಿತ್ರವೊಂದು 100 ಕೋಟಿ ರೂಪಾಯಿ ಕ್ಲಬ್ ಸೇರಿದೆ ಎಂಬುದೇ ಖುಷಿಯ ವಿಚಾರ. ‘ಸು ಫ್ರಮ್ ಸೋ’ ಭಾರತದಲ್ಲಿ 78.82 ನೆಟ್ ಕಲೆಕ್ಷನ್ ಮಾಡಿದರೆ, 91.93 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ವಿದೇಶದಿಂದ 14 ಕೋಟಿ ರೂಪಾಯಿ ಹರಿದು ಬಂದಿದೆ.

ಇದನ್ನೂ ಓದಿ: ಯಶಸ್ವಿಯಾಗಿ 25 ದಿನ ಪೂರೈಸಿದ ‘ಸು ಫ್ರಮ್ ಸೋ’: ಪರಭಾಷೆ ಚಿತ್ರಗಳ ಎದುರು ಭಾರಿ ಪೈಪೋಟಿ

ಕಳೆದ ವಾರ ‘ಕೂಲಿ’ ಹಾಗೂ ‘ವಾರ್ 2’ ಸಿನಿಮಾಗಳು ಬಿಡುಗಡೆ ಕಂಡವು. ಇವೆರಡೂ ಸಿನಿಮಾಗಳ ಅಬ್ಬರದ ಮಧ್ಯೆಯೂ ‘ಸು ಫ್ರಮ್ ಸೋ’ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಭಾನುವಾರ ಈ ಚಿತ್ರ 2.33 ಕೋಟಿ ರೂಪಾಯಿ ಗಳಿಸಿತ್ತು. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಕೊಂಚ ತಗ್ಗಲಿದೆ. ಈಗಾಗಲೇ ಅನೇಕರು ಸಿನಿಮಾನ 2-3 ಬಾರಿ ವೀಕ್ಷಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ