‘ಸು ಫ್ರಮ್ ಸೋ’ ಬ್ಲಾಕ್​ಬಸ್ಟರ್ ಕಲೆಕ್ಷನ್; ಮೂರೇ ದಿನಕ್ಕೆ ‘ಎಕ್ಕ’, ‘ಜೂನಿಯರ್ ದಾಖಲೆ ಉಡೀಸ್

Su From So Movie Box Office Collection: ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರವು ಬಿಡುಗಡೆಯಾಗಿ ಮೂರು ದಿನಗಳಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಇದು ‘ಎಕ್ಕ’ ಮತ್ತು ‘ಜೂನಿಯರ್’ ಚಿತ್ರಗಳ ದಾಖಲೆಗಳನ್ನು ಮುರಿದು ಹಾಕಿದೆ. ಚಿತ್ರದ ಪ್ರೀಮಿಯರ್ ಶೋಗಳು ಮತ್ತು ಬಾಯ್ಮಾತಿನ ಪ್ರಚಾರವು ಯಶಸ್ಸಿಗೆ ಕಾರಣ.

‘ಸು ಫ್ರಮ್ ಸೋ’ ಬ್ಲಾಕ್​ಬಸ್ಟರ್ ಕಲೆಕ್ಷನ್; ಮೂರೇ ದಿನಕ್ಕೆ ‘ಎಕ್ಕ’, ‘ಜೂನಿಯರ್ ದಾಖಲೆ ಉಡೀಸ್
ಸು ಫ್ರಮ್ ಸೋ

Updated on: Jul 28, 2025 | 6:58 AM

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ (Su From So) ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಎನಿಸಿಕೊಂಡಿದೆ. ಈ ಸಿನಿಮಾ ಮೂರೇ ದಿನಕ್ಕೆ ‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ದಾಖಲೆಯನ್ನು ಉಡೀಸ್ ಮಾಡಿದೆ. ಭಾನುವಾರ ಬಹುತೇಕ ಎಲ್ಲ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಸ್ಯಾಂಡಲ್​ವುಡ್​ನಲ್ಲಿ ಬಹು ಸಮಯದ ಬಳಿಕ ಒಂದೊಳ್ಳೆಯ ಸಿನಿಮಾ ಬಂದಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳು ಕೂಡ ಫುಲ್ ಆಗಿದ್ದವು ಅನ್ನೋದು ವಿಶೇಷ. ರಾಜ್ ಬಿ. ಶೆಟ್ಟಿ ಈ ಚಿತ್ರದಿಂದ ದೊಡ್ಡ ಲಾಭ ಕಂಡಿದ್ದಾರೆ.

‘ಸು ಫ್ರಮ್ ಸೋ’ ಜುಲೈ 25ರಂದು ರಿಲೀಸ್ ಆಯಿತು. ಈ ಸಿನಿಮಾದ ಟ್ರೇಲರ್ ಮೋಡಿ ಮಾಡಿತ್ತು. ಅಲ್ಲದೆ ರಾಜ್ ಬಿ. ಶೆಟ್ಟಿ ಅವರು ಸಿನಿಮಾಗೆ ಭಿನ್ನ ಪ್ರಚಾರ ಮಾಡಿದರು. ಸಿನಿಮಾ ರಿಲೀಸ್ ಆಗುವ ಮೊದಲೇ ಪ್ರೀಮಿಯರ್ ಶೋಗಳನ್ನು ಇಟ್ಟರು. ಇದು ಸಿನಿಮಾಗೆ ಸಹಕಾರಿ ಆಗಿದೆ. ಸಿನಿಮಾ ಬಿಡುಗಡೆ ಆಗುವ ಮೊದಲೇ ಪಾಸಿಟಿವ್ ಟಾಕ್ ಶುರುವಾಗಿತ್ತು. ಸಿನಿಮಾ ರಿಲೀಸ್ ಆದ ಬಳಿಕ ಬಾಯ್ಮಾತಿನ ಪ್ರಚಾರ ಸಿಕ್ಕಿದೆ.

‘ಸು ಫ್ರಮ್ ಸೋ’ ಮೊದಲ ದಿನ 78 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಆ ಬಳಿಕ ಎರಡನೇ ದಿನ ಚಿತ್ರದ ಗಳಿಕೆ 2.17 ಕೋಟಿ ರೂಪಾಯಿ ಆಯಿತು. ಮೂರನೇ ದಿನವಾದ ಭಾನುವಾರ ಚಿತ್ರಕ್ಕೆ 3.86 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಸಿನಿಮಾ ಮೂರು ದಿನಕ್ಕೆ 6.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶ್ವ ಮಟ್ಟದಲ್ಲಿ ಚಿತ್ರ 7.82 ಕೋಟಿ ರೂಪಾಯಿ ಆಗಿದೆ. ಪ್ರೀಮಿಯರ್ ಶೋಗಳ ಗಳಿಕೆಯೂ ಸೇರಿದರೆ ಸರಿ ಸುಮಾರು 8 ಕೋಟಿ ರೂಪಾಯಿ ಕಲೆಕ್ಷನ್ ಆದಂತೆ ಆಗುತ್ತದೆ.

ಇದನ್ನೂ ಓದಿ
ಕಡಿಮೆ ಶೋ ಕೊಟ್ಟರೂ ಸು ಫ್ರಮ್ ಸೋ ಆರ್ಭಟದ ಕಲೆಕ್ಷನ್; ಬಾಕ್ಸ್ ಆಫೀಸ್ ಉಡೀಸ್
ಹರಿ ಹರ ವೀರ ಮಲ್ಲು ಕಲೆಕ್ಷನ್; ಮೊದಲ ದಿನ ಭರ್ಜರಿ ಎರಡನೇ ದಿನ ಒಂದಂಕಿ ಗಳಿಕೆ
Su from So Review: ನಗುವಿನ ಅಲೆಯಲ್ಲಿ ತೇಲಿಸೋ ಸುಲೋಚನಾ
Exclusive: ಅಳಿಯ ಚಂದು ಚಿತ್ರಕ್ಕೆ ವಿಲನ್ ಆದ ದರ್ಶನ್; ದಿನಕರ್ ನಿರ್ದೇಶನ

‘ಎಕ್ಕ’ ಸಿನಿಮಾ ಹಾಗೂ ‘ಜೂನಿಯರ್ ಚಿತ್ರಗಳು ಮೂರು ದಿನಕ್ಕೆ ಸುಮಾರು ಆರು ಕೋಟಿ ರೂಪಾಯಿ ಗಳಿಕೆ ಮಾಡಿದ್ದವು. ಈ ದಾಖಲೆಗಳನ್ನು ‘ಸು ಫ್ರಮ್ ಸೋ’ ಮುರಿದು ಹಾಕಿದೆ. ನವ ನಿರ್ದೇಶಕನಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ.

ಇದನ್ನೂ ಓದಿ: ಒಂದೇ ದಿನಕ್ಕೆ ಮೂರು ಪಟ್ಟಾಯ್ತು ‘ಸು ಫ್ರಮ್ ಸೋ’ ಶೋ ಸಂಖ್ಯೆ; ಹೊಸ ಸ್ಟ್ರೆಟಜಿ ಮಾಡಿ ಗೆದ್ದ ರಾಜ್ ಬಿ ಶೆಟ್ಟಿ

ರಾಜ್ ಬಿ ಶೆಟ್ಟಿ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೆಪಿ ತುಮ್ಮಿನಾಡ ಅವರು ನಿರ್ದೇಶನ ಮಾಡಿ, ನಟಿಸಿದ್ದಾರೆ. ಶನೀಲ್ ಗೌತಮ್, ಪ್ರಕಾಶ್ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ನಟಿಸಿದ್ದಾರೆ. ಸುಮೇಧ್ ಕೇ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:57 am, Mon, 28 July 25