ಬಾವನ ಬದುಕು ಬದಲಿಸಿತು ರಿಷಬ್ ಮಾಡಿದ್ದ ಆ ಒಂದು ಆಡಿಷನ್; ಪುಷ್ಪರಾಜ್ ಜೀವನದ ಸ್ವಾರಸ್ಯಕರ ಕಥೆ

ಪುಷ್ಪರಾಜ್ ಬೋಳಾರ್ ಅವರು ತುಳು ನಾಟಕ ಮತ್ತು ಚಲನಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. 'ಕಾಂತಾರ' ಚಿತ್ರದಲ್ಲಿ 'ಗರ್ನಾಲ್ ಅಬ್ಬು' ಪಾತ್ರದ ಮೂಲಕ ಅವರು ಜನಪ್ರಿಯತೆ ಗಳಿಸಿದರು. ಈ ಲೇಖನದಲ್ಲಿ ಅವರ ನಟನಾ ಜೀವನ, 'ಕಾಂತಾರ'ದಲ್ಲಿನ ಪಾತ್ರಕ್ಕಾಗಿ ಆಡಿಷನ್ ಮತ್ತು ಅವರ ಯಶಸ್ಸಿನ ಬಗ್ಗೆ ವಿವರಿಸಲಾಗಿದೆ.

ಬಾವನ ಬದುಕು ಬದಲಿಸಿತು ರಿಷಬ್ ಮಾಡಿದ್ದ ಆ ಒಂದು ಆಡಿಷನ್; ಪುಷ್ಪರಾಜ್ ಜೀವನದ ಸ್ವಾರಸ್ಯಕರ ಕಥೆ
ರಿಷಬ್-ಪುಷ್ಪರಾಜ್

Updated on: Aug 06, 2025 | 2:53 PM

‘ಸು ಫ್ರಮ್ ಸೋ’ ಸಿನಿಮಾದಲ್ಲಿ ಬಾವನ ಪಾತ್ರದಲ್ಲಿ ಪುಷ್ಪರಾಜ್ (Pushparaj) ಬೋಳಾರ್ ಮಿಂಚಿದ್ದಾರೆ. ಅವರು ತುಳು ನಾಟಕ, ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲೂ ಅವರು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಕನ್ನಡದ ‘ಕಾಂತಾರ’ ಸಿನಿಮಾ. ಈ ಚಿತ್ರಕ್ಕೆ ಕೊಟ್ಟ ಆಡಿಷನ್ ವಿವರ, ಜೊತೆಗೆ ನಟನೆಗೆ ಎಂಟ್ರಿ ಕೊಟ್ಟಿದ್ದು ಹೇಗೆ ಎಂಬುದರ ಬಗ್ಗೆ ಪುಷ್ಪರಾಜ್ ಬೋಳಾರ್ ಅವರು ಈ ಮೊದಲು ‘ಕಲಾ ಮಾಧ್ಯಮ’ದ ಸಂದರ್ಶನದಲ್ಲಿ ಹೇಳಿದ್ದರು.

‘ನಾನು ಮೂಲತಃ ಕಾಸರುಗೋಡಿನವನು. ನನ್ನ ಊರು ಕೇರಳ-ಕರ್ನಾಟಕ ಗಡಿಯಲ್ಲಿದೆ. ನನ್ನ ಮನೆಯಲ್ಲಿ ತಂದೆ-ತಾಯಿ ಹಾಗೂ ಮೂರು ಮಕ್ಕಳಿದ್ದಾರೆ. ಶಾಲೆಗೆ ಹೋಗುವಾಗ ಸಂಗೀತದ ಬಗ್ಗೆ ಆಸಕ್ತಿ ಇತ್ತು. ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ. ಆ ಬಳಿಕ ತುಳುವಿನ ನಾಟಕಗಳು ಪ್ರಭಾವ ಬೀರಿತು. ನಾನು ನಾಟಕ ಸೇರಿದೆ. ಹವ್ಯಾಸಿ ಕಲಾವಿದರ ತಂಡದ ಬಳಿಕ ನಂತರ ವೃತ್ತಿಪರ ಡ್ರಾಮ ಮಾಡಿದೆ’ ಎಂದು ಹೇಳಿದ್ದರು ಪುಷ್ಪರಾಜ್ ಬೋಳಾರ್.

‘ತುಳು ಹಾಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದೇನೆ. ನಾನು ತುಳುವಿನ ಕೆಲವು ಶೋಗಳಲ್ಲಿಯೂ ಕಾಣಿಸಿಕೊಂಡೆ. ಅದರಿಂದ ನನಗೆ ಜನಪ್ರಿಯತೆ ಸಿಕ್ಕಿತು. ತುಳು ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದೆ. ಅಲ್ಲಿ ಅನುಭವ ಆಯಿತು. ಆ ಬಳಿಕ ಸಾಕಷ್ಟು ತುಳು ಸಿನಿಮಾ ಮಾಡಿದೆ. ಕನ್ನಡದಲ್ಲಿ ನುಗ್ಗೆಕಾಯಿ ನನ್ನ ಮೊದಲ ಸಿನಿಮಾ. ಸಹಿಪ್ರಾ ಶಾಲೆಯಲ್ಲಿ ರಾಮಣ್ಣ ರೈ ಅವರ ಎಂ80 ಡ್ರೈವರ್ ಆಗಿ ಕಾಣಿಸಿಕೊಂಡಿದ್ದೆ. ಮಾಯಾ ಕನ್ನಡಿ ಮೊದಲಾದ ಕನ್ನಡ ಸಿನಿಮಾ ಮಾಡಿದ್ದೇನೆ’ ಎನ್ನುತ್ತಾರೆ ಪುಷ್ಪರಾಜ್.

ಇದನ್ನೂ ಓದಿ
ಜೂ. ಎನ್​ಟಿಆರ್​ಗೆ ಸಿದ್ಧತೆಯೇ ಬೇಡ; ಡ್ಯಾನ್ಸ್ ಸ್ಟೆಪ್ ನೋಡಿ ದಂಗಾದ ಹೃತಿಕ್
ರಾಜ್ ಬಿ. ಶೆಟ್ಟಿ ಬಳಿ ಇವೆ ಮೂರು ಅದ್ಭುತ ಪ್ರಾಜೆಕ್ಟ್​​ಗಳು; ಇಲ್ಲಿದೆ ವಿವರ
‘ಸು ಫ್ರಮ್ ಸೋ’ ಹೊಸ ದಾಖಲೆ; ಸತತ 9 ದಿನ 3+ ಕೋಟಿ ರೂಪಾಯಿ ಕಲೆಕ್ಷನ್
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಇದನ್ನೂ ಓದಿ:  ‘ಬಾವ ಬಂದರೋ..’ ಹಾಡಿಗೆ ಈಗೊಂದು ಕಳೆ ಬಂತು; ರಾಜ್ ಬಿ. ಶೆಟ್ಟಿ ಗ್ಯಾಂಗ್​ನಿಂದ ಭರ್ಜರಿ ಸ್ಟೆಪ್

‘ಸಹಿಪ್ರಾ ಶಾಲೆ ಸಿನಿಮಾಗೆ ಆಡಿಷನ್ ಕೊಡೋಕೆ ಆಗಿರಲಿಲ್ಲ. ಆದರೆ, ಒಮ್ಮೆ ರಿಷಬ್ ಭೇಟಿ ಮಾಡಬೇಕು ಎನ್ನುವ ಆಸೆ ಇತ್ತು. ನಾನು ಅವರ ಬಳಿ ಸೆಲ್ಫಿ ತೆಗೆದುಕೊಳ್ಳೋಕೆ ಹೋಗಿದ್ದೆ. ಆಗ ಅವರು ಸಿನಿಮಾದಲ್ಲಿ ನಟಿಸೋ ಚಾನ್ಸ್ ಕೊಟ್ಟರು. ಆ ಬಳಿಕ ರಿಷಬ್ ಫ್ಯಾನ್ ಆದೆ. ಕಾಂತಾರ ಮಾಡುವಾಗ ಸಣ್ಣ ಪಾತ್ರ ಸಿಕ್ಕರೆ ಕೊಡಿಸಿ ಎಂದು ಪ್ರಕಾಶ್ ತುಮಿನಾಡ ಬಳಿ ಕೇಳಿದೆ. ಆದರೆ, ಪಾತ್ರಗಳೆಲ್ಲ ಭರ್ತಿ ಆಗಿತ್ತು’ ಎಂದಿದ್ದರು ಪುಷ್ಪರಾಜ್.

ಕಲಾ ಮಾಧ್ಯಮದ ಸಂದರ್ಶನ

‘ನಾನು ಮಾಡುವ ಪಾತ್ರದವನು ಬಂದಿರಲಿಲ್ಲ. ಆಗ ಪ್ರಕಾಶ್​ ಅವರು ನನಗೆ ಕರೆದರು. ಸ್ಕ್ರಿಪ್ಟ್ ಕೊಟ್ಟು,  ರಾತ್ರಿ ರಿಷಬ್ ಬರ್ತಾರೆ. ಅವರ ಎದುರು ಮಾಡಿ ತೋರಿಸಿ ಎಂದು ಹೇಳಿದರು. ನಾನು ಡೈಲಾಗ್ ಕಲಿತು, ರಿಷಬ್​ ಅವರ ಎದುರು ಹೇಳಿದೆ. ಜೈಲಿನ ದೃಶ್ಯದ ಡೈಲಾಗ್ ಮಾಡಿ ತೋರಿಸಿದೆ. ಆ ಬಳಿಕ ನಾನು ಸೆಲೆಕ್ಟ್ ಆದೆ. ಮೊದಲು ನನ್ನ ಪಾತ್ರ 2 ದಿನದ ಶೂಟ್​ಗಾಗಿ ಶೆಡ್ಯೂಲ್ ಆಗಿತ್ತು. ಆದರೆ, 24 ದಿನ ಮಾಡೋಕೆ ಅವಕಾಶ ಸಿಕ್ಕಿತು’ ಎಂದಿದ್ದಾರೆ ಅವರು. ‘ಕಾಂತಾರ’ ಚಿತ್ರದಲ್ಲಿ ‘ಗರ್ನಾಲ್ ಅಬ್ಬು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಪುಷ್ಪರಾಜ್. ಈ ಸಿನಿಮಾ ಬಳಿಕ ಅವರ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.